Umesh katti Heart Attack : ಸಚಿವ ಉಮೇಶ್‌ ಕತ್ತಿಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

ಬೆಂಗಳೂರು : (Umesh katti Heart Attack) ಸಚಿವ ಉಮೇಶ್‌ ಕತ್ತಿ ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಬೆಂಗಳೂರಿನ ಎಂಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬೆಂಗಳೂರಿನ ನಿವಾಸದಲ್ಲಿ ಇದ್ದ ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ರಾತ್ರಿ 10 ಗಂಟೆಯ ಸುಮಾರಿಗೆ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಮನೆಯಲ್ಲಿ ಇದ್ದ ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಆದರೆ ಚಿಕಿತ್ಸೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸಚಿವ ಉಮೇಶ್‌ ಕತ್ತಿ ಅವರಿಗೆ ಈ ಹಿಂದೆ ಎರಡು ಬಾರಿ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಸ್ಟಂಟ್‌ ಅಳವಡಿಸಲಾಗಿತ್ತು. ಆದ್ರೀಗ ಮೂರನೇ ಬಾರಿಗೆ ಅವರಿಗೆ ಹೃದಯಾಘಾತವಾಗಿದೆ. ವೈದ್ಯರ ಜೊತೆಗೆ ಮಾತನಾಡಿದ್ದೇನೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಸಲಹೆ ನೀಡಿದ್ದೇನೆ. ಸಾಧ್ಯವಾದರೆ ನಾನು ಸಹ ಭೇಟಿ ನೀಡುತ್ತೇನೆ. ಮಹಾದೇವಪುರದ ಬಳಿಕ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಸಂಪುಟದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1985ರಲ್ಲಿ ವಿಧಾನಸಭೆ ಸದಸ್ಯರಾಗಿದ್ದ ಅವರ ತಂದೆ ವಿಶ್ವನಾಥ ಕತ್ತಿಯವರ ನಿಧನದ ನಂತರ ಅವರು ರಾಜಕೀಯ ಪ್ರವೇಶಿಸಿದರು. ಅವರು 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಸದ್ಯ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಗಳಲ್ಲಿ ಒಬ್ಬರಾಗಿರುವ ಉಮೇಶ್‌ ಕತ್ತಿ ಪ್ರತ್ಯೇಕ ರಾಜ್ಯ ಸೇರಿ ಹಲವು ವಿವಾದಗಳನ್ನು ಅವರು ಹುಟ್ಟುಹಾಕಿದ್ದರು. ಇತ್ತೀಚಿಗಷ್ಟೇ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವಂತಾಗಿದೆ.

ಇದನ್ನೂ ಓದಿ : Bengaluru rain death : ಬೆಂಗಳೂರಿನಲ್ಲಿ ಮಳೆಯ ಮರಣ ಮೃದಂಗ : ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು

ಇದನ್ನೂ ಓದಿ : Ravindra Jadeja Surgery Success : ರವೀಂದ್ರ ಜಡೇಜ ಆಪರೇಷನ್ ಸಕ್ಸಸ್, ಟಿ20 ವಿಶ್ವಕಪ್ ಆಡುವುದು ಡೌಟ್

Minister Umesh katti has a heart attack admitted to hospital

Comments are closed.