Ravindra Jadeja Surgery Success : ರವೀಂದ್ರ ಜಡೇಜ ಆಪರೇಷನ್ ಸಕ್ಸಸ್, ಟಿ20 ವಿಶ್ವಕಪ್ ಆಡುವುದು ಡೌಟ್

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಮೊಣಕಾಲಿನ (Ravindra Jadeja Surgery Success) ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಜಡೇಜ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈ ವಿಚಾರವನ್ನು ಸ್ವತಃ ಅವರೇ ಇನ್’ಸ್ಟಾಗ್ರಾಂ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. “ಸರ್ಜರಿ ಸಕ್ಸಸ್ ಆಗಿದೆ. ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರು, ಸಹಾಯಕ ಸಿಬ್ಬಂದಿ, ಫಿಸಿಯೋ, ಡಾಕ್ಟರ್ಸ್ ಮತ್ತು ಕ್ರಿಕೆಟ್ ಪ್ರಿಯರಿಗೆ ಧನ್ಯವಾದಗಳು. ಸದ್ಯದಲ್ಲೇ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದೇನೆ. ನನ್ನ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ರವೀಂದ್ರ ಜಡೇಜ ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/CiKo5RTKakq/?igshid=YmMyMTA2M2Y=

ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2022) ಆಡುತ್ತಿದ್ದ ವೇಳೆ ರವೀಂದ್ರ ಜಡೇಜ (Ravindra Jadeja) ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಹಾಂಕಾಂಗ್ ವಿರುದ್ಧದ ಪಂದ್ಯ ನಂತರ ಜಡೇಜ ಅವರಿಗೆ ಮೊಣಕಾಲಿನ ಗಾಯ ಕಾಣಿಸಿಕೊಂಡಿತ್ತು. ಹೀಗಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದರು. ಜಡೇಜ ಬದಲು ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಟೀಮ್ ಇಂಡಿಯಾ ಸೇರಿಕೊಂಡಿದ್ದರು.

ದುಬೈನಿಂದ ಮುಂಬೈಗೆ ವಾಪಸ್ಸಾಗಿದ್ದ ರವೀಂದ್ರ ಜಡೇಜ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್’ಗಳ ಸರಣಿಗೆ ಜಡೇಜ ಅಲಭ್ಯರಾಗಲಿದ್ದು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯರಾಗಲಿದ್ದಾರಾ ಎಂಬುದೇ ಈಗ ದೊಡ್ಡ ಕುತೂಹಲ.

ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, “ಟಿ20 ವಿಶ್ವಕಪ್ ಇನ್ನೂ ಸಾಕಷ್ಟು ದೂರವಿದೆ. ಹೀಗಾಗಿ ರವೀಂದ್ರ ಜಡೇಜ ವಿಶ್ವಕಪ್’ನಲ್ಲಿ ಆಡುವುದಿಲ್ಲ ಎಂದು ಈಗಲೇ ನಿರ್ಧಾರಕ್ಕೆ ಬಂದು ಬಿಡುವುದರಲ್ಲಿ ಅರ್ಥವಿಲ್ಲ” ಎಂದಿದ್ದರು.

ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಇಳಿದಿದ್ದ ಜಡೇಜ, ಅಮೂಲ್ಯ 35 ರನ್ ಗಳಿಸಿ ಭಾರತ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 148 ರನ್’ಗಳ ಗುರಿ ಬೆನ್ನಟ್ಟುವ ವೇಳೆ ಭಾರತ ತಂಡ 89 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಜೊತೆ ಜಡೇಜ 5ನೇ ವಿಕೆಟ್’ಗೆ 52 ರನ್’ಗಳ ಜೊತೆಯಾಟವಾಡಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಇದನ್ನೂ ಓದಿ : Suresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ

ಇದನ್ನೂ ಓದಿ : KL Rahul wedding date fix : ಕೆಎಲ್ ರಾಹುಲ್ ಆಥಿಯಾ ಶೆಟ್ಟಿ ಮದುವೆ ದಿನಾಂಕ ಫಿಕ್ಸ್‌ : ಇಲ್ಲಿದೆ ಫಕ್ಕಾ ಮಾಹಿತಿ

Ravindra Jadeja Surgery Success Doubt to play T20 World Cup

Comments are closed.