EXCLUSIVE : ಶಾಸಕ ಜಮೀರ್‌ ಖಾನ್‌ ಗೆ ಐಎಂಎ ಉರುಳು : ಇತಿಹಾಸದಲ್ಲೇ ಎಂಎಲ್‌ಎ ಮನೆ ಕದ ತಟ್ಟಿದ ಎಸಿಬಿ

ಬೆಂಗಳೂರು : ಐಎಂಎ ಪ್ರಕರಣ ಶಾಸಕ ಜಮೀರ್‌ ಅಹಮದ್‌ ಖಾನ್‌ಗೆ ಉರುಳಾಗಿ (MLA Zameer Ahmed Khan roll IMA Case)ಪರಿಣಮಿಸುತ್ತಿದೆ. ಕೆಜಿಎಫ್‌ ಬಾಬು ಮನೆ ಮೇಲೆ ಇಡಿ ದಾಳಿಯ ವೇಳೆ ಸಿಕ್ಕ ದಾಖಲೆಯೇ ಜಮೀರ್‌ಗೆ ಉರುಳಾಗಿ ಪರಿಣಮಿಸಿದೆ. ಅದ್ರಲ್ಲೂ ರಾಜ್ಯದಲ್ಲಿ ಎಸಿಬಿ ರಚನೆಯಾದ ಬೆನ್ನಲ್ಲೇ ಶಾಸಕರೊಬ್ಬರ ಮನೆಯ ಮೇಲೆ ದಾಳಿ ನಡೆಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಕಳೆದ ವರ್ಷ ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೊಟ್ಟ ಮಾಹಿತಿಯ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆದಿದ್ದಾರೆ ಎನ್ನಲಾಗುತ್ತಿದೆ.

MLA Zameer Ahmed Khan roll IMA Case : ಎಲ್ಲೆಲ್ಲಿ ಎಸಿಬಿ ದಾಳಿ ?

  • ಕಂಟೋನ್ಮೆಂಟ್ ರೋಡ್ ಶಾಸಕರಾದ ಶ್ರೀ ಜಮೀರ್ ಅಹಮದ್ ಖಾನ್ ನಿವಾಸ‌
  • ರಿಚ್ಮಂಡ್ ಟೌನ್ ನ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್
  • ಸದಾಶಿವನಗರದಲ್ಲಿರುವ ಅತಿಥಿ ಗೃಹ
  • ಬನಶಂಕರಿಯಲ್ಲಿರುವ ಜಿ ಕೆ ಅಸೋಸಿಯೇಟ್ಸ್ ಕಚೇರಿ
  • ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ
  • ಕೆಜಿಎಫ್‌ ಬಾಬು ಮನೆ ದಾಳಿಗೂ, ಜಮೀರ್‌ ಮನೆ ಮೇಲಿನ ದಾಳಿಗೂ ಲಿಂಕ್‌

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೆಜಿಎಫ್‌ ಬಾಬು ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಈ ವೇಳೆಯಲ್ಲಿ ಜಮೀರ್‌ ಅಹಮದ್‌ ಖಾನ್‌ ಹಾಗೂ ಕೆಜಿಎಫ್‌ ಬಾಬು ಅವರು ಹಣದ ವ್ಯವಹಾರ ನಡೆಸಿರುವುದು ಬಯಲಾಗಿತ್ತು. ಬಾಬು ಮನೆಯ ಮೇಲೆ ನಡೆದಿರುವ ದಾಳಿಯ ಮುಂದುವರಿದ ಭಾಗವಾಗಿ ಎಸಿಬಿ ಜಮೀರ್‌ ಅಹಮದ್‌ ಖಾನ್‌ ಅವರ ಮನೆಯ ಮೇಲೆ ದಾಳಿ ನಡೆಸಿದೆ ಎನ್ನಲಾಗುತ್ತಿದೆ.

ಶಾಸಕರ ಮನೆ ಮೇಲೆ ಎಸಿಬಿ ಮೊದಲ ದಾಳಿ !

ರಾಜ್ಯದಲ್ಲಿ ಎಸಿಬಿ ರಚನೆಯಾದ ನಂತರದಲ್ಲಿ ರಾಜ್ಯದಲ್ಲಿ ಎಸಿಬಿ ಅಧಿಕಾರಿಗಳು ಶಾಸಕರೊಬ್ಬರ ಮನೆಯ ಕದ ತಟ್ಟಿರುವುದು ಇದೇ ಮೊದಲು. ಇಷ್ಟು ದಿನ ಸಣ್ಣಪುಟ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದ ಅಧಿಕಾರಿಗಳು ಇದೀಗ, ಶಾಸಕರ ಮನೆಯ ಮೇಲೆಯೇ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

10 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ

ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ದಾಳಿ ನಡೆದಿದ್ದ ಇಡಿ ಅಧಿಕಾರಿಗಳು ಶಾಸಕ ಜಮೀರ್‌ಗೆ ಸೇರಿದ ಐದು ಶಾಲೆಗಳಲ್ಲಿ ಕಡತ ಪರಿಶೀಲನೆಯನ್ನು ನಡೆಸಿದ್ದರು. ಈ ವೇಳೆಯಲ್ಲಿ ಅವ್ಯವಹಾರದ ಕುರಿತು ದಾಖಲೆಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿಂದು ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿಯನ್ನು ನಡೆಸಿತ್ತು. ಒಬ್ಬರು ಡಿವೈಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಸುಮಾರು ಹತ್ತು ಮಂದಿ ಅಧಿಕಾರಿಗಳ ತಂಡದಿಂದ ದಾಳಿಯನ್ನು ನಡೆಸಲಾಗಿದೆ. ಇನ್ನೊಂದೆಡೆಯಲ್ಲಿ ಎಸಿಬಿ ಎಸ್‌ಪಿ ಹರೀಶ್‌ ಪಾಂಡೆ ಅವರು ಜಮೀರ್‌ ಅಹಮದ್‌ ಖಾನ್‌ ಅವರ ಮನೆಗೆ ಭೇಟಿಯನ್ನು ನೀಡಿದ್ದಾರೆ.

ಇದನ್ನೂ ಓದಿ : School college Holiday : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ : ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಇದನ್ನೂ ಓದಿ : IMA CASE ACB Raid : ಶಾಸಕ ಜಮೀರ್‌ ಅಹಮದ್‌ ಖಾನ್‌ ಗೆ ಎಸಿಬಿ ಶಾಕ್‌ : ಜಮೀರ್‌ ಮನೆ ಮೇಲೆ ಎಸಿಬಿ ದಾಳಿ

MLA Zameer Ahmed Khan the roll IMA Case , ACB has Raid MLA’s house in history.

Comments are closed.