Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ

ಉತ್ತರ ಪ್ರದೇಶ : Uttar Pradesh : ನಿನ್ನೆಯಷ್ಟೇ ನಿರ್ಮಾಪಕಿಯೊಬ್ಬರು ಕಾಳಿ ದೇವಿಯಂತೆ ವೇಷಭೂಷಣ ಧರಿಸಿದ್ದ ಮಾಡೆಲ್​ ಕೈಯಲ್ಲಿ (Hindu gods attacking cops) ಸಲಿಂಗಕಾಮಿಗಳ ಧ್ವಜ ಹಾಗೂ ಕೈಯಲ್ಲಿ ಸಿಗರೇಟ್​ ಸೇದುವ ರೀತಿಯಲ್ಲಿ ಫೋಟೋ ತೆಗೆಸಿ ಫೋಟೋ ಶೂಟ್​ ಮಾಡಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ರೋಶಗಳು ಇನ್ನೂ ಹಸಿಯಾಗಿ ಇರುವಾಗಲೇ ಇದೀಗ ಹಿಂದೂ ದೇವರಿಗೆ ಅಪಮಾನವೆಸಗಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದ್ದು ಮಾಂಸ ಮಾರಾಟಗಾರನೊಬ್ಬ ಹಿಂದೂ ದೇವತೆಗಳ ಚಿತ್ರವನ್ನು ಹೊಂದಿರುವ ಕಾಗದಗಳಲ್ಲಿ ಕೋಳಿ ಮಾಂಸವನ್ನು ಮಾರಾಟ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಆರೋಪಿಯನ್ನು ಬಂಧಿಸಲಾಗಿದೆ. ದೇಶದಲ್ಲಿ ಪದೇ ಪದೇ ಹಿಂದೂ ದೇವರಗಳ ಮೇಲೆ ಈ ರೀತಿಯ ಅಪಚಾರ ಎಸಗುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇದೆ.

ಹಿಂದೂ ದೇವತೆಗಳಿಗೆ ಅಪಮಾನ ಎಸಗುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹುಸೇನ್​ ಎಂಬಾತನ ಅಂಗಡಿಗೆ ಭೇಟಿ ನೀಡುತ್ತಿದ್ದಂತೆಯೇ ಹುಸೇನ್​ ಪೊಲೀಸರನ್ನು ಚಾಕುವಿನಿಂದ ಕೊಲೆ ಮಾಡಲು ಮುಂದಾಗಿದ್ದ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಹುಸೇನ್​ ವಿರುದ್ಧ ಭಾರತೀಯ ದಂಡ ಸಂಹಿತೆ 153-ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಉದ್ದೇಶ ಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಅಥವಾ ಧಾರ್ಮಿಕ ನಂಬಿಕೆಗಳು) ಮತ್ತು 307 (ಕೊಲೆಯ ಪ್ರಯತ್ನ) ರ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : EXCLUSIVE : ಶಾಸಕ ಜಮೀರ್‌ ಖಾನ್‌ ಗೆ ಐಎಂಎ ಉರುಳು : ಇತಿಹಾಸದಲ್ಲೇ ಎಂಎಲ್‌ಎ ಮನೆ ಕದ ತಟ್ಟಿದ ಎಸಿಬಿ

ಇದನ್ನೂ ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ

Uttar Pradesh man held for selling chicken on paper with images of Hindu gods attacking cops

Comments are closed.