ಸೋಮವಾರ, ಏಪ್ರಿಲ್ 28, 2025
HomekarnatakaKarnataka Lokayukta: ಮಾಹಿತಿ ಹಕ್ಕಿನಲ್ಲಿ ಬಯಲಾಲ್ತು ಶಾಸಕರು- ಸಚಿವರ ಕಳ್ಳಾಟ: ಅವಧಿ ಮುಗಿದರೂ ಲೋಕಾಯುಕ್ತಕ್ಕೆ ಆಸ್ತಿ...

Karnataka Lokayukta: ಮಾಹಿತಿ ಹಕ್ಕಿನಲ್ಲಿ ಬಯಲಾಲ್ತು ಶಾಸಕರು- ಸಚಿವರ ಕಳ್ಳಾಟ: ಅವಧಿ ಮುಗಿದರೂ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ನಾಯಕರು

- Advertisement -

ಬೆಂಗಳೂರು : ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಹಲ್ಲು ಕಿತ್ತ ಹಾವಿನಂತಿದೆ‌ ಎಂಬ ಮಾತಿದೆ. ಆದರೆ ಈಗ ಆ ಮಾತು ನಿಜ ಎಂಬಂತಾಗಿದ್ದು, ರಾಜ್ಯದಲ್ಲಿ ಆಡಳಿತದಲ್ಲಿರೋ ಶಾಸಕರು ಹಾಗೂ ‌ಸಚಿವರುಗಳೇ ಲೋಕಾಯುಕ್ತಕ್ಕೆ (Karnataka Lokayukta) ಆಸ್ತಿ ವಿವರ ಸಲ್ಲಿಸದೇ ಹಾಯಾಗಿದ್ದು, ಲೋಕಾಯುಕ್ತ ಸಂಸ್ಥೆಯೂ ಇಂಥ ಶಾಸಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ.

ಮಾಹಿತಿ ಹಕ್ಕು ಆಯೋಗದಡಿ ಪಡೆದ ಮಾಹಿತಿಯಲ್ಲಿ ರಾಜ್ಯದ ಶಾಸಕರುಗಳ ಕಳ್ಳಾಟ ಬಯಲಾಗಿದೆ. ಪ್ರತಿ ವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿರುವ ಶಾಸಕರು ಆಸ್ತಿ ವಿವರ ಸಲ್ಲಿಸದೇ ಹಾಯಾಗಿದ್ದಾರೆ. ನಿಯಮದಂತೆ ರಾಜ್ಯದ ಪ್ರತಿಯೊಂದು ಶಾಸಕರು ಜೂನ್ ಅಂತ್ಯದ ಒಳಗೆ ಕಳೆದ ಆರ್ಥಿಕ ವರ್ಷದ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಈ ನಿಯಮದಂತೆ ಜೂನ್ 30 ರೊಳಗೆ ಲೋಕಾಯುಕ್ತಕ್ಕೆ ಶಾಸಕರುಗಳು ಆಸ್ತಿ ವಿವರ ಸಲ್ಲಿಸಬೇಕಿತ್ತು.

ಅದ್ರೆ ಅವಧಿ ಮುಗಿದರು 150ಕ್ಕು ಹೆಚ್ಚು ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಈ ವಿಚಾರ ಮಾಹಿತಿ ಹಕ್ಕು ಕಾಯ್ದೆ ಮೂಲಕ ಹೊರ ಬಿದ್ದಿದ್ದು. ಆಸ್ತಿ ವಿವರ ಸಲ್ಲಿಸದ ಶಾಸಕರ ವಿವರವನ್ನು ಲೋಕಾಯುಕ್ತ ಕಚೇರಿ ಅಧಿಕೃತ ಮಾಹಿತಿಯಿಂದ ಮಾಹಿತಿ ಹಕ್ಕು ಕಾಯ್ದೆ ಮೂಲಕ ಆರ್ ಟಿಐ ಕಾರ್ಯಕರ್ತ ಹೆಚ್. ಎಂ. ವೆಂಕಟೇಶ್ ಪಡೆದುಕೊಂಡಿದ್ದಾರೆ. ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿರುವ ಸಚಿವರೆ ಆಸ್ತಿ ವಿವರ ಸಲ್ಲಿಸಲು ಮರೆತಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಎಸ್ ಟಿ ಸೋಮಶೇಖರ್, ಎಂಟಿಬಿ ನಾಗರಾಜ್, ನಾರಾಯಣಗೌಡ, ಶ್ರೀರಾಮುಲು, ಗೋಪಾಲಯ್ಯ, ಮಾಧುಸ್ವಾಮಿ, ಮುನಿರತ್ನ ಸೇರಿ ಹತ್ತಕ್ಕೂ ಹೆಚ್ಚು ಸಚಿವರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಆಸ್ತಿ ವಿವರ ಸಲ್ಲಿಸುವುದು ಬಾಕಿ ಇದೆ.

ಇನ್ನು ಕೆಲವು ಶಾಸಕರು ಜೂನ್ 30 ರ ಗಡುವು ಮುಗಿದ ಬಳಿಕ ಆಸ್ತಿ ವಿವರ ಸಲ್ಲಿಸಿದ್ದು, ಕೃಷ್ಣಬೈರೇಗೌಡ, ಸಿದ್ದರಾಮಯ್ಯ, ಅರವಿಂದ್ ಬೆಲ್ಲದ್, ಬಿ ಸಿ ನಾಗೇಶ್ ಸೇರಿ 14 ಶಾಸಕರು ಆಸ್ತಿ ವಿವರ ನೀಡಿದ್ದಾರೆ. ಇನ್ನು ಕೆಲ ಶಾಸಕರು ಆಸ್ತಿ ವಿವರ ಸಲ್ಲಿಸಲು ಸಮಯಾವಕಾಶ ಕೋರಿ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ಕೇವಲ ಬಿಜೆಪಿ ಪಾತ್ರವಲ್ಲ ಮೂರು ಪಾರ್ಟಿಗಳ ಶಾಸಕರುಗಳು ಕೂಡ ಆಸ್ತಿ ವಿವರ ಸಲ್ಲಿಕೆ ಯಿಂದ ನುಣುಚಿಕೊಂಡಿದ್ದಾರೆ. ಇತ್ತೀಚಿಗೆ ಎಸಿಬಿ ದಾಳಿಗೆ ಒಳಗಾದ ಜಮೀರ್ ಅಹಮದ್ ಸೇರಿದಂತೆ ಹಲವು ಕೈ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಿಲ್ಲ.

ಒಟ್ಟು 127 ಎಂಎಲ್ಎಗಳು, 52 ಎಂಎಲ್ ಸಿ ಗಳು ಆಸ್ತಿ ವಿವರ ಸಲ್ಲಿಸದ ಮಾಹಿತಿಯನ್ನು ಆರ್ಟಿಐ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಪಡೆದಿದ್ದು, ಅದರಲ್ಲಿ ಬೆರಳೆಣಿಕೆಯಷ್ಟು ಮಂದಿ ಅವಧಿ ಮುಗಿದ ಬಳಿಕ ಆಸ್ತಿ ವಿವರ ಸಲ್ಲಿಸಿರುವುದು ಪತ್ತೆಯಾಗಿದೆ. ನಿಯಮ ರೂಪಿಸಿದ ಶಾಸಕರು, ಸಚಿವರುಗಳೇ ನಿಯಮ ಪಾಲಿಸದೆ ಇರೋ ಈ ವರ್ತನೆ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ.

ಇದನ್ನೂ ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್​ವೈ ಆಪ್ತ ಬಣದವರಿಗೆ ಕೊಕ್​​

ಇದನ್ನೂ ಓದಿ : BJP MLA : ನನ್ನ ಕಾರ್ಯಕರ್ತನ ವಾಹನಕ್ಕೆ ಅಡ್ಡಿಪಡಿಸಬೇಡಿ : ವಿವಾದಕ್ಕೆ ಕಾರಣವಾದ ಬಿಜೆಪಿ ಶಾಸಕನ ಶಿಫಾರಸ್ಸು ಪತ್ರ

MLAs and Ministers who have not submitted property details to Karnataka Lokayukta even after the term has expired

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular