Monsoon rain in Karnataka : ಹವಾಮಾನ ವರದಿ : ಮುಂಗಾರು ಮಳೆ, ಕರಾವಳಿ ಸೇರಿ ರಾಜ್ಯದ ಹಲವೆಡೆ ಜೂನ್‌ 9 ರ ವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಕರಾವಳಿ ಭಾಗಗಳಲ್ಲಿ ಮುಂಜಾನೆಯಿಂದಲೇ (Monsoon rain in Karnataka) ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಇಂದು ಸಂಜೆಯ ವೇಳೆಗೆ ಗುಡುಗು ಸಹಿತ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಜೂನ್‌ 9ರ ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ವಾಡಿಕೆಯಂತೆ ಕೇರಳದಲ್ಲಿ ನೈಋತ್ಯ ಮಾನ್ಸೂನ್‌ ಮಾರುತದಿಂದ ಮಳೆಯಾದರೆ, ಇನ್ನು ಒಂದು ವಾರದ ಒಳಗೆ ರಾಜ್ಯದಲ್ಲಿ ಮುಂಗಾರು ಆಗಮನವಾಗಲಿದೆ.

ರಾಜ್ಯದಲ್ಲಿ ಎಲ್ಲೆಡೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮುಂಗಾರು ಮಳೆಯ ಬರುವಿಕೆಗಾಗಿ ಆಗಸ ನೋಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಪ್ರತಿವರ್ಷದಂತೆ ಮುಂಗಾರು ಮಳೆ ಶುರುವಾಗುತ್ತಿದ್ದಂತೆ ಬಿತ್ತನೆ ಕೆಲಸದಲ್ಲಿ ಬ್ಯುಸಿಯಾಗುವ ರೈತರು ಈ ಬಾರೀ ಮಾತ್ರ ಮಳೆಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚೆಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ : Women Free Travel Bus : ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೂ ಟಿಕೆಟ್‌ ಕಡ್ಡಾಯ : ಹೇಗಿರಲಿದೆ ಗೊತ್ತಾ ಟಿಕೆಟ್‌ ?

ಹಾಗೆಯೇ ಹವಾಮಾನದಲ್ಲಿ ಏರುಪೇರು ಉಂಟಾದರೆ ಮತ್ತೆ ಕೆಲವು ದಿನಗಳ ಮುಂಗಾರು ಮಳೆಯಲ್ಲಿ ವಿಳಂಬ ಆಗಬಹುದು ಎನ್ನುವ ಅಂದಾಜು ಕೂಡ ಮಾಡಲಾಗಿದೆ. ಪ್ರತಿವರ್ಷದಂತೆ ವಾಡಿಕೆಯಂತೆ ನೈಋತ್ಯ ಮುಂಗಾರು ಮಾರುತುಗಳು ಜೂನ್‌ 1ರಿಂದ ಕೇರಳ ಪ್ರವೇಶ ಮಾಡುತ್ತಿತ್ತು, ಈ ಬಾರೀ ಜೂನ್‌ 4ಕ್ಕೆ ಎನ್ನಲಾಗಿದೆ. ಕೇರಳದಲ್ಲಿ ಮುಂಗಾರು ಮಳೆ ಪ್ರವೇಶಿಸಿದ ಒಂದು ವಾರದ ನಂತರ ಕರ್ನಾಟಕವನ್ನು ಕೂಡ ಪ್ರವೇಶ ಮಾಡುತ್ತಿತ್ತು. ಆದರೆ ಈ ಭಾರಿ ಸುಮಾರು ನಾಲ್ಕು ದಿನ ವಿಳಂಬ ಎನ್ನಲಾಗುತ್ತಿದೆ.

Monsoon rain in Karnataka: Weather report: Monsoon rain, heavy rain likely in many parts of the state including the coast till June 9

Comments are closed.