Namibia Vs Karnataka ODI series : ಕರ್ನಾಟಕ ಹುಲಿಗಳ ಘರ್ಜನೆ ಮಧ್ಯೆಯೂ ಗೆದ್ದ ನಮೀಬಿಯಾ, 2ನೇ ಏಕದಿನ ಪಂದ್ಯದಲ್ಲಿ ಕನ್ನಡಿಗರಿಗೆ ವೀರೋಚಿತ ಸೋಲು

ವಿಂಧೋಕ್ (ನಮೀಬಿಯಾ): ನಮೀಬಿಯಾ ಪ್ರವಾಸದಲ್ಲಿರುವ ಕರ್ನಾಟಕ (Namibia Vs Karnataka ODI series) ಕ್ರಿಕೆಟ್ ತಂಡ, ಆತಿಥೇಯರ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್’ಗಳ ಸೋಲು ಕಂಡಿದೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ನಮೀಬಿಯಾ ತಂಡ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.

ನಮೀಬಿಯಾ ಅಂತರಾಷ್ಟ್ರೀಯ ತಂಡದ ವಿರುದ್ಧ ದೇಶೀಯ ತಂಡವಾಗಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ 9 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಭಾನುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್.ಸಮರ್ಥ್ (R Samarth) ನಾಯಕತ್ವದ ಕರ್ನಾಟಕ ತಂಡ ನಿಗದಿತ 50 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 360 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.

ಯುವ ಬಲಗೈ ಸ್ಫೋಟಕ ಆರಂಭಕಾರ ಎಲ್.ಆರ್ ಚೇತನ್ (LR Chetan) 47 ಎಸೆತಗಳಲ್ಲಿ 13 ಬೌಂಡರಿಗಳು ಮತ್ತು 8 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ 169 ರನ್ ಬಾರಿಸಿದ್ರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮತ್ತೊಬ್ಬ ಯುವ ದಾಂಡಿಗ ನಿಕಿನ್ ಜೋಸ್ (Nikin Jose) 109 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್’ಗಳ ಸಹಿತ 103 ರನ್ ಗಳಿಸಿ ಔಟಾದರು. 4ನೇ ಕ್ರಮಾಂಕದಲ್ಲಿ ಸಿಡಿಲಬ್ಬರದ ಆಟ ಪ್ರದರ್ಶಿಸಿದ ಕೆ.ವಿ ಸಿದ್ಧಾರ್ಥ್ (KV Siddharth) ಕೇವಲ 27 ಎಸೆತಗಳಲ್ಲಿ 6 ಸಿಡಿಲಬ್ಬರದ ಸಿಕ್ಸರ್’ಗಳ ನೆರವಿನಿಂದ ವಿಸ್ಫೋಟಕ ಅಜೇಯ 59 ರನ್ ಬಾರಿಸಿ ಕರ್ನಾಟಕದ ಬೃಹತ್ ಮೊತ್ತಕ್ಕೆ ಕಾರಣರಾದರು.

ಇದನ್ನೂ ಓದಿ : MS Dhoni : ಮದುವೆ ಅಮಂತ್ರಣ ಪತ್ರಿಕೆಯಲ್ಲಿ ಎಂಎಸ್‌ ಧೋನಿ ಪೋಟೋ ಮುದ್ರಿಸಿದ ಅಭಿಮಾನಿ : ಫೋಟೋ ವೈರಲ್

ನಂತರ 361 ರನ್’ಗಳ ಕಠಿಣ ಗುರಿ ಬೆನ್ನಟ್ಟಿದ ನಮೀಬಿಯಾ ತಂಡ, 49.5 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು362 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು. ಜೂನ್ 2ರಂದು ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಸರಣಿಯ 3ನೇ ಏಕದಿನ ಪಂದ್ಯ ಬುಧವಾರ (ಜೂನ್ 7) ನಡೆಯಲಿದ್ದು, ಕರ್ನಾಟಕ ತಂಡ ಗೆಲುವಿನ ವಿಶ್ವಾಸದಲ್ಲಿದೆ.

Namibia Vs Karnataka ODI series : Namibia won despite the roar of the Karnataka Tigers, a heroic defeat to the Kannadigas in the 2nd ODI.

Comments are closed.