ಸೋಮವಾರ, ಏಪ್ರಿಲ್ 28, 2025
HomeCrimeMuruga Mutt : ಮಠದಲ್ಲಿ ಪೋಟೋಕಳ್ಳತನ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನ, ಪತ್ನಿಗಾಗಿ ಶೋಧ

Muruga Mutt : ಮಠದಲ್ಲಿ ಪೋಟೋಕಳ್ಳತನ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನ, ಪತ್ನಿಗಾಗಿ ಶೋಧ

- Advertisement -

ಚಿತ್ರದುರ್ಗ: ಮುರುಘಾ ಮಠದ( Muruga Mutt ) ಮುರುಘಾ ಶ್ರೀ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಮುರುಘಾ ಶ್ರೀ ವಿರುದ್ಧ 624 ಪುಟಗಳ ಚಾರ್ಜಶೀಟ್ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಚಿತ್ರದುರ್ಗದ ಮುರುಘಾಮಠದಲ್ಲಿ ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಕೆ.ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅ.6ರಂದು ರಾಜಾಂಗಣದ ಗೋಡೆ ಮೇಲಿದ್ದ 47 ಫೋಟೋ ಕಳವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಕಾಲೇಜಿನ ಉಪನ್ಯಾಸಕರೊಬ್ಬರು ಸೇರಿದಂತೆ ನ.7ರಂದು ಪ್ರಕರಣದ ಇಬ್ಬರು ಆರೋಪಿಗಳು ಬಂಧಿಸಲಾಗಿತ್ತು‌. ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, SJM ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಬಂಧಿಸಿದ ಗ್ರಾಮಾಂತರ ಪೊಲೀಸರು ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಬಸವರಾಜನ್ ಪ್ರಚೋದನೆ ಬಯಲಾಗಿತ್ತು. ಅಲ್ಲದೇ ಕೃತ್ಯಕ್ಕೆ ಬಸವರಾಜನ್ ಪತ್ನಿ ಸೌಭಾಗ್ಯ ಕೂಡ ಪ್ರೇರಣೆ ನೀಡಿದ್ದಾರೆ ಎಂದು ಬಂಧಿತರು ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಈಗ ಮಾಜಿ ಶಾಸಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು ಸೌಭಾಗ್ಯರಿಗಾಗಿ ಹುಡುಕಾಟ ನಡೆಸಿದ್ದಾರೆ.

ಸದ್ಯ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅವರನ್ನು ಚಿತ್ರದುರ್ಗ ನಗರಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇನ್ನೊಂದೆಡೆ ಚಿತ್ರದುರ್ಗ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಓಬವ್ವ ವೃತ್ತ ಸೇರಿ ಹಲವೆಡೆ ಪೊಲೀಸರಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನೊಂದೆಡೆ ಸಂಜೆ ವೇಳೆಗೆ ಬಸವರಾಜನ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.1994 ರಿಂದ ಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್ ಒಂದು ಕಾಲದಲ್ಲಿ ಮುರುಘಾ ಶ್ರೀಗೆ ಅತ್ಯಾಪ್ತರಾಗಿದ್ದರು. ಮಾತ್ರವಲ್ಲ ಬಸವರಾಜನ್ ಮುರುಘಾ ಶ್ರೀಗಳ ಕ್ಲಾಸ್‌ಮೇಟ್ ಸಹ ಹೌದು. ಆದರೆ ಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್ ಅಲ್ಲಿದ್ದಾಗಲೇ ಶಾಸಕ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದರು.

ಅಲ್ಲದೇ ಮಠದ ಹಣವನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಬಸವರಾಜನ್ ಅವರನ್ನು ಮುರುಘಾ ಶ್ರೀ ಮಠದಿಂದ ಹೊರಹಾಕಿದ್ದರು. ಈಗ ಮತ್ತೆ 2021 ರ ಡಿಸೆಂಬರ್ ವೇಳೆಗೆ ಸಿವಿಲ್ ಮೊಕದ್ದಮೆ ಹಿಂಪಡೆಯುವ ಸಂಧಾನದೊಂದಿಗೆ ಮತ್ತೆ ಬಸವರಾಜನ್ ಮಠದ ಒಳಕ್ಕೆ ಪ್ರವೇಶ ಪಡೆದಿದ್ದರು‌. ಈಗ ಚರ್ಚೆಗೆ ಗ್ರಾಸವಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೊರಗೆ ಬರೋದಿಕ್ಕೆ ಬಸವರಾಜನ್ ನೇರ ಕಾರಣ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ : Murugha Sharanaru Statement : ನನ್ನ ಕೊಠಡಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವೇ ಇಲ್ಲ, ದೌರ್ಜನ್ಯ ಎಸಗಿಲ್ಲ : ಮುರುಘಾ ಶ್ರೀ ಹೇಳಿಕೆ

ಇದನ್ನೂ ಓದಿ :Shiva Murthy Murugha Sharanaru : ಮುರುಘಾಶ್ರೀ ಕೋಣೆಯ ರಹಸ್ಯ ಬಯಲು : ಚಾರ್ಜ್ ಶೀಟ್ ನಲ್ಲೇನಿದೆ ?

Muruga Mutt photo theft case Ex-administrator Basavarajan arrested, search for wife

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular