Kantara Hindi Collection : ಹಿಂದಿಯಲ್ಲಿ 70 ಕೋಟಿ ಕಲೆಕ್ಷನ್ ದಾಟಿದ ‘ಕಾಂತಾರ’

ಕರಾವಳಿ ಸೊಗಡು ಮತ್ತು ದೈವರಾಧನೆಯನ್ನು ಆಧಾರವಾಗಿಸಿಕೊಂಡು ಮೂಡಿ ಬಂದ ಸಿನಿಮಾ ಕಾಂತಾರ. (Kantara Hindi Collection)ಈಗ ಉತ್ತರ ಭಾರತದ ಪ್ರೇಕ್ಷಕರು ‘ಕಾಂತಾರ’ ಸಿನಿಮಾವನ್ನು ನಿಜವಾಗಿಯೂ ಇಷ್ಟಪಟ್ಟಿರುತ್ತಾರೆ. ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಅಭಿನಯಿಸಿರುವ ಕನ್ನಡದ ‘ಕಾಂತಾರ’ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿರುತ್ತದೆ. ಕೋಟ್ಯಾಂತರ ಜನ ಈ ಸಿನಿಮಾಕ್ಕೆ ಮರಳಾಗಿದ್ದಾರೆ. ಬಿಡುಗಡೆಯಾಗಿ 41 ದಿನ ಕಳೆದರೂ ಈ ಚಿತ್ರದ ಹವಾ ಮಾತ್ರ ಕಡಿಮೆಯಾಗಿರುವುದಿಲ್ಲ. ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಈ ಸಿನಿಮಾ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದೆ.


ಕನ್ನಡದಿಂದ ಹಿಂದಿಗೆ ಡಬ್ ಆಗಿರುವ ಈ ಸಿನಿಮಾ ಉತ್ತರ ಭಾರತೀಯರನ್ನು ಮೋಡಿ ಮಾಡಿರುವುದು ಸತ್ಯ. ಪ್ರತಿದಿನ ಕೋಟ್ಯಂತರ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಹೊಸ ಮೈಲಿಗಲ್ಲುನ್ನು ಸೃಷ್ಟಿಸುತ್ತಿದೆ. ಇದುವರೆಗೆ ಹಿಂದಿಯಲ್ಲಿ ‘ಕಾಂತಾರ’ ಚಿತ್ರದ ಕಲೆಕ್ಷನ್ (ಕಾಂತಾರ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್) 70 ಕೋಟಿ ರೂಪಾಯಿ ಆಗಿರುತ್ತದೆ. ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ. ಹಾಗಾಗಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.


‘ಕಾಂತಾರ’ ಕನ್ನಡದಲ್ಲಿ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗಿದ್ದು, ಹೆಚ್ಚಿನ ಪರಭಾಷೆ ಜನ ಕೂಡ ಕನ್ನಡ ಭಾಷೆಯಲ್ಲೇ ಸಿನಿಮಾ ನೋಡಿ ವಾವ್ ಎಂದಿರುತ್ತಾರೆ. ಈ ಸಿನಿಮಾವನ್ನು ಡಬ್ಬಿಂಗ್ ಮಾಡಬೇಕು ಎಂಬ ಒತ್ತಾಯವಿರುತ್ತದೆ. ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಹಿಂದಿಯಲ್ಲಿ ಬಿಡುಗಡೆಯಾದ ಮೊದಲ ದಿನ (ಅ. 14)ವೇ 1.27 ಕೋಟಿ ಕಲೆಕ್ಷನ್ ಮಾಡಿರುತ್ತದೆ. ಎರಡನೇ ದಿನ 2.75 ಕೋಟಿ ಹಾಗೂ 3ನೇ ದಿನ 3.50 ಕೋಟಿಯಷ್ಟು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಗಳಿಕೆಯಾಗಿರುತ್ತದೆ.

ಹಿಂದಿಯಲ್ಲಿ ‘ಕಾಂತಾರ’ 26 ದಿನಗಳಲ್ಲಿ (ನವೆಂಬರ್‌ 8) ಒಟ್ಟು 67 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿರುತ್ತದೆ. ಇನ್ನೂ ನ.9 ಮತ್ತು ನ.10ರ ಕಲೆಕ್ಷನ್ ಕೂಡ ಸೇರಿಸಿದರೆ ಒಟ್ಟು 70 ಕೋಟಿ ರೂ. ಕಲೆಕ್ಷನ್‌ ಆಗುತ್ತದೆ. ಹಾಗಾಗಿ ಹಿಂದಿಯಲ್ಲಿ ‘ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸು ಕಂಡಿರುತ್ತದೆ. ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಒಟ್ಟು ಕಲೆಕ್ಷನ್ 350 ಕೋಟಿ ರೂಪಾಯಿ ಸಮೀಪಿಸುತ್ತಿದೆ.

ಇದನ್ನೂ ಓದಿ : Kamblihula : ಹೊಸಬರ ‘ಕಂಬ್ಳಿಹುಳ’ಕ್ಕೆ ಸ್ಯಾಂಡಲ್ ವುಡ್ ಸಿನಿ ತಾರೆಯರ ಸಾಥ್

ಇದನ್ನೂ ಓದಿ : Kantara 1 crore ticket sale : ಒಂದು ಕೋಟಿ ಟಿಕೇಟ್ ಸೇಲ್ : ಕರ್ನಾಟಕದಲ್ಲಿ ಕಾಂತಾರ ಹೊಸ ದಾಖಲೆ

ಇದನ್ನೂ ಓದಿ : Kerala Controversy: ವಿವಾದದ ಸುಳಿಯಲ್ಲಿ ದಿ ಕೇರಳ ಸ್ಟೋರಿ: ಕೇರಳವನ್ನು ‘ಉಗ್ರರ ಸ್ವರ್ಗ ಎಂಬಂತೆ ಬಿಂಬಿಸಿದ್ದ ಚಿತ್ರತಂಡದ ವಿರುದ್ಧ ಕೇಸ್

‘ಕಾಂತಾರ’ಕ್ಕೆ ‘ಹೊಂಬಾಳೆ ಫಿಲಂಸ್’ ಬಂಡವಾಳ ಹಾಕಿರುತ್ತದೆ. ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರೆ, ಸಹ ಕಲಾವಿದರಾಗಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಕಿಶೋರ್ ಮುಂತಾದವರು ನಟಿಸಿದ್ದಾರೆ. ಎಲ್ಲರಿಗೂ ಈ ಸಿನಿಮಾದ ಮೂಲಕ ಜನಪ್ರಿಯತೆ ಹೆಚ್ಚಿರುತ್ತದೆ. ಈಗಾಗಲೇ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್‌ಗಳು ಮಾರಾಟವಾಗಿರುತ್ತದೆ. ಥಿಯೇಟರ್ ನಲ್ಲಿ ಹಿಟ್ ಆಗಿರುವ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಅಖಾಡಕ್ಕೆ ಬರುತ್ತದೆ. ಮನೆಯಲ್ಲೇ ಕುಳಿತು ‘ಕಾಂತಾರ’ ಎಂಜಾಯ್ ಮಾಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. OTT ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

Kantara Hindi Collection: ‘Kantara’ collection crossed Rs 70 crore mark in Hindi

Comments are closed.