ಮೈಸೂರಿಗೆ ಕಳಂಕ ಹೊರಿಸಲು ಮುಂದಾದವರು ಜನರ ಕ್ಷಮೆ ಕೇಳಲಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು : ಚಾಮರಾಜನಗರ ಜಿಲ್ಲೆಗೆ ಆಮ್ಲಜನಕ ಪೂರೈಕೆ ವಿಚಾರವಾಗಿ ಕಳಂಕ ಹೊರಿಸಲು ಮುಂದಾದವರು ಮೈಸೂರಿಗರ ಕ್ಷಮೆ ಕೇಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಗ್ರಹಿಸಿದ್ದಾರೆ. 

ಚಾಮರಾಜನಗರದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸಮಿತಿಯ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಳು, ನಮ್ಮ ಮೇಲೆ ಆರೋಪ ಮಾಡುವ ಸಂದರ್ಭದಲ್ಲಿ ಮೈಸೂರಿಗೆ ಕಳಂಕ ತರುವ ಪ್ರಯತ್ನ ನಡೆದಿತ್ತು. ನಮ್ಮ ವಿರುದ್ಧ ಮಾಡಿದ ಆರೋಪಗಳು ಆಧಾರ ರಹಿತ. ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರಕ್ಕೆ ವರದಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದ 7 ತಿಂಗಳಿನಿಂದಲೂ ವೈಯಕ್ತಿಕವಾಗಿ ಆರೋಪವನ್ನು ಕೇಳುತ್ತಿದ್ದೇನೆ. ಸಾಂಕ್ರಾಮಿಕ ಪಿಡುಗಿನ ಸಮಯವಿದು. ಜನರ ಜೀವ ರಕ್ಷಿಸಲು ಎಲ್ಲರೂ ಒಗ್ಗಟ್ಟಿ ನಿಂದ ಹೋರಾಡಬೇಕಾದ ಕಾಲವಿದು ಎಂದು ಹೇಳಿದ್ದಾರೆ.

Comments are closed.