ಕೊರೋನಾ ನಿಯಮ ಉಲ್ಲಂಘನೆ ಪ್ರಕರಣ…! ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸ್…!!

ಕೊರೋನಾ ಲಾಕ್ ಡೌನ್ ನಡುವೆಯೂ ನಿಯಮ ಪಾಲಿಸದ ಜನರ ವಿರುದ್ಧ ಸಮರ ಸಾರಿರುವ ನಗರ ಖಾಕಿ ಪಡೆ ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದೆ. ಮಾಸ್ಕ್ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು 1.34 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://kannada.newsnext.live/mysore-dc-rohini-sindoori-reactiin-about-oxigen-tragidy/

ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣ,ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ದಂಡ ಸಂಗ್ರಹಿಸಿದ್ದಾರೆ. ಕೆಲವರ ವಿರುದ್ಧ ನಿಯಮ ಉಲ್ಲಂಘನೆಗಾಗಿ ವಿಪತ್ತು ನಿರ್ವಹಣೆ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

https://kannada.newsnext.live/actress-nidhi-subbayya-who-has-revealed-the-divorce-facts-which-ended-10-months/

ಸರ್ಕಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಖಾಕಿ ಪಡೆ ಪ್ರಕರಣ ದಾಖಲಿಸಿಕೊಳ್ಳುತ್ತಿದೆ. ತುರ್ತು ಅಗತ್ಯ ಬಿಟ್ಟು ಉಳಿದ ಸಮಯದಲ್ಲಿ ಸಂಚಾರಕ್ಕೆ ವಾಹನ ಬಳಸುವಂತಿಲ್ಲ. 

ಈ ನಿಯಮ ಮೀರಿ ವಾಹನಗಳನ್ನು ರಸ್ತೆಗಿಳಿಸಿದ 19505 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೊರೋನಾ ನಿಯಮಗಳು ಜಾರಿಯಾದ ಬಳಿಕ ಇದುವರೆಗೂ 17696 ದ್ವಿಚಕ್ರವಾಹನ, 869 ಅಟೋ,940 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳನ್ನು ಆಯಾ ಪೊಲೀಸ್ ಠಾಣೆಯಲ್ಲೇ ಇಡಲಾಗಿದ್ದು, ಸಂಬಂಧಿಸಿದವರು ನ್ಯಾಯಾಲಯಕ್ಕೆ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Comments are closed.