ಸೋಮವಾರ, ಏಪ್ರಿಲ್ 28, 2025
HomekarnatakaNamma Metro prepaid Auto : ಪ್ರಯಾಣಿಕರ ಸಹಾಯಕ್ಕೆ ನಮ್ಮ ಮೆಟ್ರೋ ಪ್ಲ್ಯಾನ್ : ಸದ್ಯದಲ್ಲೇ...

Namma Metro prepaid Auto : ಪ್ರಯಾಣಿಕರ ಸಹಾಯಕ್ಕೆ ನಮ್ಮ ಮೆಟ್ರೋ ಪ್ಲ್ಯಾನ್ : ಸದ್ಯದಲ್ಲೇ ಆರಂಭವಾಗಲಿದೆ ಫ್ರೀಪೇಯ್ಡ್ ಅಟೋ ಸಂಚಾರ

- Advertisement -

ಬೆಂಗಳೂರು : (Namma Metro prepaid Auto) ಸಿಲಿಕಾನ್‌ಸಿಟಿ ಬೆಂಗಳೂರಿಗರನ್ನು ಬಿಟ್ಟು ಬಿಡದೇ ಕಾಡೋ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಕೊಡಿಸೋಕೆ ನೆರವಾಗಿದ್ದು ನಮ್ಮ ಮೆಟ್ರೋ. ಆದರೆ ನಮ್ಮ‌ಮೆಟ್ರೋ ಸ್ಟೇಶನ್ ಗಳಿಂದ ಮನೆಗೆ ತೆರಳೋಕು ಪ್ರಯಾಣಿಕರು ಪರದಾಡುವ ಸ್ಥಿತಿ ಬಹುತೇಕ ಮೆಟ್ರೋ ಸ್ಟೇಶನ್ ಗಳಲ್ಲಿದೆ. ಆದರೆ ಈಗ ಈ ಸಮಸ್ಯೆಗೂ ಮುಕ್ತಿ ಸಿಗೋ ಸಮಯ ಸನ್ನಿಹಿತವಾಗಿದ್ದು ಸದ್ಯದಲ್ಲೇ ಫ್ರೀಪೇಯ್ಡ್ ಅಟೋ ಸೇವೆ ಆರಂಭಿಸಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ‌

ಸಂಚಾರ ದಟ್ಟಣೆ ತಡೆಯಲು, ಮಾಲಿನ್ಯ ಮುಕ್ತವಾಗಿ ಓಡಾಡಲು ಹಾಗೂ ಸಮಯಕ್ಕೆ ಸರಿಯಾಗಿ ಕರ್ತವ್ಯದ ಸ್ಥಳಗಳಿಗೆ ತೆರಳಲು ಬೆಂಗಳೂರಿನ ಲಕ್ಷಾಂತರ ಜನರು ನಿತ್ಯವೂ ಮೆಟ್ರೋ ಅವಲಂಬಿಸಿದ್ದಾರೆ. ಆದರೆ ಮೆಟ್ರೋ ಸ್ಟೇಶನ್ ಗಳಿಂದ ಕಚೇರಿ, ಮನೆಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ಸಾವಿರಾರು ಜನರಿಗಿದೆ‌. ಅದರಲ್ಲೂ ಮೆಟ್ರೋನ ದುಬಾರಿ ಪಾರ್ಕಿಂಗ್ ನಿಂದಾಗಿ ಕೆಲವರು ಮೆಟ್ರೋನತ್ತ ಮುಖಮಾಡಲು ಹಿಂದೇಟು ಹಾಕುತ್ತಿದ್ದರು. ಬಹುತೇಕ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಅಟೋ ಸೇವೆ ಇದ್ದರೂ ಕರದಲ್ಲಿ ಬರೋದಿಲ್ಲ, ಬೇಕಾಬಿಟ್ಟಿ ದರ ಹೇಳುತ್ತಾರೆ ಎಂಬೆಲ್ಲ ಆರೋಪಗಳು ಕೇಳಿಬರುತ್ತಲೇ ಇವೆ.

ಇದಕ್ಕೆಲ್ಲ ಕಡಿವಾಣ ಹಾಕಲು ಬೆಂಗಳೂರು ಮೆಟ್ರೋ ವ್ಯವಸ್ಥೆ ಈಗಾಗಲೇ ನಗರ ಪೊಲೀಸ ಆಯುಕ್ತರಿಗೂ ಮನವಿ ಮಾಡಿತ್ತು. ಅಲ್ಲದೇ ನಮ್ಮ‌ಮೆಟ್ರೋ ಪ್ರಯಾಣಿಕರಿಗೆ ಮನೆಗೆ ತೆರಳಲು ಆಗುವ ಸಮಸ್ಯೆ ಕುರಿತು ಚರ್ಚಿಸಿ ನಮ್ಮ‌ಮೆಟ್ರೋ ಎಂಡಿ‌ಅಂಜುಂ ಪರ್ವೇಜ್ ನಗರ ಸಂಚಾರ ಆಯುಕ್ತ ರವಿಕಾಂತೇ ಗೌಡರಿಗೆ ಪತ್ರ ಬರೆದು ಈ ಬಗ್ಗೆ ಚರ್ಚಿಸಿದ್ದರು.
.ಇದಾದ ಬಳಿಕ ಮೆಟ್ರೋ ನಿಲ್ದಾಣದಲ್ಲೇ ಫ್ರೀಪೇಯ್ಡ್ ಅಟೋ ಸರ್ವಿಸ್ ಆರಂಭಿಸಲು ನಗರ ಪೊಲೀಸ್ ಆಯುಕ್ತರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗ್ತಿದೆ.

ಹೀಗಾಗಿ ಸದ್ಯದಲ್ಲೇ ನಗರದ ಮೆಟ್ರೋ ನಿಲ್ದಾಣದಲ್ಲಿ ಫ್ರೀಪೇಯ್ಡ್ ಅಟೋ ಸರ್ವೀಸ್ ಆರಂಭವಾಗಲಿದೆ. ಯಾವ ಯಾವ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ ಈ ಯೋಜನೆ ಜಾರಿಯಾಗಲಿದೆ? ಪ್ರತಿ ಕಿಲೋಮೀಟರ್ ಗೆ ಪ್ರಯಾಣದರ ಎಷ್ಟು? ಎಷ್ಟು ಗಂಟೆಯವರೆಗೆ ಅಟೋ ಸೇವೆ ಲಭ್ಯವಾಗಲಿದೆ ಎಂಬ ಎಲ್ಲ ವಿಚಾರಗಳ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಆದರೆ ಸದ್ಯದಲ್ಲೇ ಮೆಟ್ರೋ ಪ್ರಯಾಣಿಕರಿಗೆ ಲಿಂಕ್ ಸೇವೆ ಒದಗಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರಲು ನಮ್ಮ ಮೆಟ್ರೋ ಸಜ್ಜಾಗಿದ್ದು ಲಕ್ಷಾಂತರ ಜನರಿಗೆ ನೆಮ್ಮದಿ ತಂದಿರೋದಂತು ನಿಜ.

ಇದನ್ನೂ ಓದಿ : Next Chief Minister Murugesh Nirani : ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ: ಏನಿದು ವೈರಲ್ ಪೋಸ್ಟರ್ ನ ಅಸಲಿಯತ್ತು?

ಇದನ್ನೂ ಓದಿ : BS Yeddyurappa : ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ: ರಾಜಾಹುಲಿ ಮನವೊಲಿಕೆಗೆ ಹೈಕಮಾಂಡ್ ಹೊಸ ತಂತ್ರ

Namma Metro prepaid Auto Our metro plan to prepaid auto movement will start soon in Bangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular