Lifestyle After Age 50: ವರ್ಷ 50ರ ನಂತರ ಆರೋಗ್ಯ ಕಾಪಾಡಿಕೊಳ್ಳಿ; ಜೀವನಶೈಲಿಯನ್ನು ಹೀಗೆ ಬದಲಿಸಿಕೊಳ್ಳಿ

ಐವತ್ತು ವಯಸ್ಸು ಪ್ರಾರಂಭವಾಯಿತು ಎಂದರೆ ಸಾಕು ದೇಹದಲ್ಲಿ ಹಲವಾರು ಬದಲಾವಣೆ ಕಾಣಿಸುತ್ತದೆ. ಡಯಾಬಿಟಿಸ್, ಪ್ರೆಶರ್, ಬೊಜ್ಜು, ಕೊಲೆಸ್ಟ್ರಾಲ್ ಪ್ರಮಾಣ ಸಹ ಮಿತಿ ಮಿರುತ್ತದೆ. ಇದರ ಜೊತೆಗೆ ಗಂಟು ನೋವು, ಹೃದಯ ಸಂಬಂಧಿ ಕಾಯಿಲೆಗಳು (Heart Problem) ಅಂಟಿಕೊಂಡು ಬಿಡುತ್ತವೆ. ಈ ವಯಸ್ಸಿನಲ್ಲಿ ಇದನ್ನೆಲ್ಲ ಕಂಟ್ರೋಲ್ ಮಾಡಿ ಆರೋಗ್ಯಕರ ಜೀವನ ನಡೆಸುವುದು (Lifestyle After Age 50) ತೀರ ಕಷ್ಟದ ವಿಷಯವೇನಲ್ಲ. ಈ ಕೆಳಗಿನ ಸಲಹೆಗಳನ್ನು ಅನುಸರಿಸಿ (Lifestyle After Age 50) ಆರೋಗ್ಯಕರ ಜೀವನ ಮತ್ತು ಸಾಧ್ಯ.

ಆರೋಗ್ಯಕರ ಕೊಬ್ಬಿನ ಆಹಾರ ಸೇವಿಸಿ
ಅತಿಯಾದ ಕೊಬ್ಬಿನ ಸೇವನೆ ಮೆದುಳು, ಹೃದಯ ಹಾಗೂ ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಹೀಗಾಗಿ ಬೆಣ್ಣೆ, ಮಾಂಸ, ಎಣ್ಣೆ ತಿಂಡಿಗಳನ್ನು ತ್ಯಜಿಸಿ. ಇದರ ಬದಲು ಫ್ಲ್ಯಾಕ್ಸ್ ಸೀಡ್ಸ್, ಧಾನ್ಯಗಳು, ಡ್ರೈ ಫ್ರೂಟ್ಸ್ ಸೇವಿಸಿ.

ಗಂಟು ನೋವು ಬರದಂತೆ ನೋಡಿಕೊಳ್ಳಿ
ವಯಸ್ಸಾದಂತೆ ಗಂಟು ನೋವು ಕಾಣಿಸಿಕೊಳ್ಳುವುದು ಸಹಜ. ಹಾಗೆಂದು, ಮನೆಯಲ್ಲಿ ಕುರುವ ಬದಲು ಬೆಳಿಗ್ಗೆ ಜಾಗಿಂಗ್ ಮಾಡುವುದು ಒಳ್ಳೆಯದು. ಇದು ಗಂಟುಗಳು ಸಡಿಲವಾಗಿ ನೋವು ಕಡಿಮೆಯಾಗಲು ಸಹಕಾರಿ.

ಹೊಸ ಬದುಕು ಪ್ರಾರಂಭಿಸಿ
ಬಹುತೇಕ ಜನರು50 ದಾಟಿದ ಮೇಲೆ ನಿರುತ್ಸಾಹದಿಂದ ಜೀವನ ಸವೆಸುತ್ತಾರೆ. ಅದರ ಬದಲು ಹೊಸ ಹೊಸ ಗೆಳೆಯರನ್ನು ಭೇಟಿ ಮಾಡುವುದು, ಓದುವುದು, ಸಂಗೀತ ಕೇಳುವುದು ಹೀಗೆ ಇಷ್ಟವಿರುವ ಹವ್ಯಾಸಗಳನ್ನು ಮತ್ತೆ ರೂಢಿಸಿಕೊಳ್ಳಬೇಕು.

ಡಯೆಟ್ ಪ್ರಾರಂಭಿಸಿ
ವಯಸ್ಸಾದಂತೆ ಹಲವು ಬಗೆಯ ರೋಗಗಳು ಕಾಣಿಸಿಕೊಳ್ಳಬಹುದು. ಇದನ್ನು ತಡೆಯಲು ಹೆಲ್ತಿ ಡಯೆಟ್ ಅತೀ ಅಗತ್ಯ. ದಿನಾಲು ಸೇವಿಸುವ ಆಹಾರದಲ್ಲಿ ಧಾನ್ಯಗಳನ್ನು, ಹಣ್ಣು, ತರಕಾರಿ ಅಧಿಕ ಪ್ರಮಾಣದಲ್ಲಿ ಸೇವಿಸಿ. (Lifestyle After Age 50 must follow for better health)

ಉತ್ತಮ ನಿದ್ರೆಯನ್ನು ರೂಢಿಸಿಕೊಳ್ಳಿ (Sleep)
ನಿದ್ರೆಯೂ ಪ್ರತಿ ವ್ಯಕ್ತಿಗೂ ಅತೀ ಅಗತ್ಯ. ಇಳಿ ವಯಸ್ಸಿನಲ್ಲಿ ಸ್ವಲ್ಪ ಜಾಸ್ತಿಯೇ ನಿದ್ರೆಯನ್ನು ಪಡೆಯುವುದು ಉತ್ತಮ. ನಿದ್ರಾಹೀನತೆಯಿಂದ ಮಾನಸಿಕ ಹಾಗೂ ಶಾರೀರಿಕ ಅಸಮತೋಲನ ಉಂಟಾಗಬಹುದು. ಹೀಗಾಗಿ ದಿನಕ್ಕೆ 8ರಿಂದ 10 ಗಂಟೆ ನಿದ್ರಿಸಿ.

ದುಶ್ಚಟಗಳಿಂದ ದೂರವಿರಿ
ಆಲ್ಕೋಹಾಲ್, ಸಿಗರೇಟು ಮುಂತಾದ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಹಾನಿಕರ. ಇದನ್ನು ಬಳಸುತ್ತಿದ್ದರೆ, ತಕ್ಷಣ ನಿಲ್ಲಿಸಿ. ಇದರ ಬದಲು ಆರೋಗ್ಯಕರ ಜ್ಯುಸ್ ಕುಡಿಯಬಹುದು.

ನಿಯಮಿತವಾಗಿ ಹೆಲ್ತ್ ಚೆಕಪ್ ಮಾಡಿ
ಕಾನ್ಸರ್, ಡಯಾಬಿಟಿಸ್, ಬಿಪಿ, ಅರ್ಥರೈಟಿಸ್ ಮುಂತಾದ ಹಲವು ರೋಗಗಳು 50ರ ನಂತರ ಕಾಣಿಸಿಕೊಳ್ಳುತ್ತವೆ. ಹೀಗಾಗಿ ವೈದ್ಯರನ್ನು ಭೇಟಿ ನೀಡಿ, ಹೆಲ್ತ್ ಚೆಕಪ್ ಮಾಡಬೇಕು.

ಇದನ್ನೂ ಓದಿ: How to build Own App: ನಿಮ್ಮದೇ ಸ್ವಂತ ಆ್ಯಪ್ ರೂಪಿಸುವುದು ಹೇಗೆ?

ಇದನ್ನೂ ಓದಿ: Work From Home Gadgets: ವರ್ಕ್ ಫ್ರಂ ಹೋಂ ಮಾಡುವವರೇ ಗಮನಿಸಿ; ಈ ಉಪಕರಣಗಳು ನಿಮ್ಮಲ್ಲಿರಲಿ

(Lifestyle After Age 50 must follow for better health)

Comments are closed.