ಬೆಂಗಳೂರುಉ : ಉಕ್ರೇನ್‌ನಲ್ಲಿ ಕಳೆದ 20 ದಿನಗಳ ಹಿಂದೆ ಸಾವನ್ನಪ್ಪಿದ ರಾಜ್ಯದ ಹಾವೇರಿ ಜಿಲ್ಲೆ ಚಳಗೇರಿ ಮೂಲದ ವಿದ್ಯಾರ್ಥಿ ನವೀನ್ (Naveen Shekarappa)ಶವ. ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪಲಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಹುಟ್ಟೂರು ತಲುಪಲಿದೆ. ಹುಟ್ಟೂರಿನಲ್ಲಿ ಅಂತಿಮ ವಿಧಿವಿಧಾನಗಳ ಬಳಿಕ ನವೀನ್ ದೇಹ ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಹಸ್ತಾಂತರಗೊಳ್ಳಲಿದೆ. ಈ ಮಧ್ಯೆ ಶವತರೋದಿಕ್ಕೆ ನೆರವಾದ ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಧನ್ಯವಾದ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಇದರಿಂದ ಕರ್ನಾಟಕವೂ ಸೇರಿದಂತೆ ಭಾರತದಿಂದ ಮೆಡಿಕಲ್ ಹಾಗೂ ಎಂಬಿಎ ಓದಲು ಹೋದ ಸಾವಿರಾರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರು. ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಅಲ್ಲಿನ ಬಂಕರ್ ಗಳಲ್ಲಿ ಈ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಲಾಗಿತ್ತು. ಈ ವೇಳೆ ಮೆಡಿಕಲ್ ವಿದ್ಯಾರ್ಥಿಗಳು ಊಟ ತಿಂಡಿ ಇಲ್ಲದೇ ಪರದಾಡಿ ಸಂಕಷ್ಟಕ್ಕೆ ತುತ್ತಾಗಿ ಕಣ್ಣೀರಿಟ್ಟಿದ್ದರು.

ಈ ಮಧ್ಯೆ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿದ ಕೇಂದ್ರ ಸರ್ಕಾರ ಆಫರೇಶನ್ ಗಂಗಾ ಹೆಸರಿನಲ್ಲಿ ಈ ವಿದ್ಯಾರ್ಥಿಗಳನ್ನು ಭಾರತಕ್ಕೆ ಏರ್ ಲಿಪ್ಟ್ ಮಾಡಿತ್ತು. ಈ ಏರ್ ಲಿಪ್ಟ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯಲ್ಲೇ ಆಹಾರ ಪದಾರ್ಥ ಖರೀದಿಸಲು ಬಂಕರ್ ನಿಂದ ಆಚೆ ಹೋಗಿದ್ದ ಹಾವೇರಿ ಚಳಗೇರಿಯ ನಾಲ್ಕನೇಸೆಮ್ ನ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಶೆಲ್ ದಾಳಿಯಲ್ಲಿ ಗಾಯಗೊಂಡು ಸಾವನ್ನಪ್ಪಿದ. ಸುದ್ದಿ ತಿಳಿದು ಕಣ್ಣೀರಿಟ್ಟ ಪೋಷಕರು ಕನಿಷ್ಠ ಮಗನ ಮುಖ ನೋಡಲು ಅವಕಾಶ ಕಲ್ಪಿಸಿ, ಹೆಣ ತರಿಸಿಕೊಡಿ ಎಂದು ಮನವಿ ಮಾಡಿದ್ದರು.
ಉಕ್ರೇನ್ ನಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರಿನ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಶ್ರೀ @BSBommai ಅವರು ಇಂದು ಬೆಂಗಳೂರಿನಲ್ಲಿ ಬರಮಾಡಿಕೊಂಡು ಗೌರವ ನಮನಗಳನ್ನು ಸಲ್ಲಿಸಿದರು.
— CM of Karnataka (@CMofKarnataka) March 20, 2022
ಈ ಸಂದರ್ಭದಲ್ಲಿ @mla_sudhakar, @shivkumarudasi, ಶಾಸಕ ಅರುಣಕುಮಾರ, ಸಲಿಂ ಅಹ್ಮದ್ ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/Lc1MuctvaI
ನವೀನ್ ಪೋಷಕರ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಎಲ್ಲರೂ ಪಾರ್ಥೀವ ಶರೀರ ತರಿಸಿಕೊಡುವ ಭರವಸೆ ನೀಡಿದ್ದರು. ಈ ಕೊಟ್ಟ ಮಾತಿನಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ನವೀನ್ ಮೃತದೇಹ ತಾಯ್ನಾಡಿಗೆ ತರಿಸಿದೆ. ಈ ಮಧ್ಯೆ ನವೀನ್ ಗ್ಯಾನಗೌಡರ್ ಮೃತದೇಹ ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಿಎಂ ಬೊಮ್ಮಾಯಿ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.
"Hon'ble @narendramodi ji with your efforts the mortal remains of Naveen Shekharappa is reaching Bengaluru at 2:45 am on Monday.
— CM of Karnataka (@CMofKarnataka) March 20, 2022
Myself and people of Karantaka are grateful to your deep concern" : CM @BSBommai pic.twitter.com/EWl9tTs9gm
ಈ ಸಂಬಂಧ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ ಸಿಎಂ ನಿಮ್ಮ ಪರಿಶ್ರಮದಿಂದಲೇ ನವೀನ್ ಮೃತದೇಹ ಭಾರತ ದೇಶಕ್ಕೆ ಬರಲಿದೆ.ಇದಕ್ಕೆ ನಿಮ್ಮ ಕಾಳಜಿಯೇ ಕಾರಣ ನಿಮ್ಮ ಈ ಕಾಳಜಿಗೆ ನಾನು ಮತ್ತು ಕರ್ನಾಟಕದ ಜನತೆ ನಿಮಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆಎಂದು ಟ್ವೀಟ್ ನಲ್ಲಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ : ದುಬಾರಿ ಡೊನೇಷನ್ ಹಾಗೂ ಮೀಸಲಾತಿ ವ್ಯವಸ್ಥೆ ಇನ್ನಾದರೂ ಬದಲಾಗಲಿ : ನವೀನ್ ತಂದೆ ಆಕ್ರೋಶ
ಇದನ್ನೂ ಓದಿ : ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ ಪಿಎಂ ನರೇಂದ್ರ ಮೋದಿ
( Naveen Shekarappa Dead Body Reach Birth Place, CM Basavaraj Bommai Thanks to PM Narendra Modi)