No Honking Rules : ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್ ರೂಲ್ಸ್

ಬೆಂಗಳೂರು: ಕಬ್ಬನ್ ಪಾರ್ಕ್ ಅಂದ್ರೇ ಅದು ಬೆಂಗಳೂರಿನ ಹಸಿರು ಪ್ರಿಯರ ಹಾಟ್ ಸ್ಪಾಟ್. ವಾಕಿಂಗ್ ನಿಂದ ಆರಂಭಿಸಿ, ಪೋಟೋಶೂಟ್ ವರೆಗೆ ಎಲ್ಲದಕ್ಕೂ ಕಬ್ಬನ್ ಪಾರ್ಕ್ ಫೆವರಿಟ್ ಪ್ಲೇಸ್. ಆದರೆ ಇಲ್ಲಿ ಶಾಂತಿ ನೆಮ್ಮದಿ ಅರಸಿ ಬರೋ ಜನರ ಒಂದೇ ಒಂದು ಕಂಪ್ಲೆಂಟ್ ಅಂದ್ರೇ ಇಲ್ಲಿ ಸಂಚರಿಸೋ ವಾಹನ ಸವಾರರು ತಮ್ಮ ಗಾಡಿಯ ಹಾರ್ನ್ ಮೇಲಿಟ್ಟ ಕೈತೆಗೆಯೋದಿಲ್ಲ ಅನ್ನೋದು. ಇದೇ ಕಾರಣಕ್ಕೆ ಇದೀಗ ಕಬ್ಬನ್‌ ಪಾರ್ಕ್‌ನಲ್ಲಿ(Cubbon Park) ನೋ ಹಾಂಕಿಂಗ್‌ ರೂಲ್ಸ್‌ (No Honking Rules) ಜಾರಿ ಮಾಡಲು ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಪ್ರತಿನಿತ್ಯ ವಾಕಿಂಗ್ ಗೆ ಬರೋರಂತು ಈ ಹಾರ್ನ್ ಮಾಡೀ ವಾಹನಗಳ ವಿರುದ್ಧ ಸಮರಕ್ಕೆ ನಿಂತಿದ್ದಾರೆ. ಹಾರ್ನ್ ವಿರುದ್ಧ ಹೋರಾಟಕ್ಕೆ ನಿಂತಿರೋ ಕಬ್ಬನ್ ಪಾರ್ಕ್ ಪ್ರಿಯರಿಗೆ, ಜನರ ಕ್ಷೇಮಾಭಿವೃದ್ಧಿಗೆ ಅಂತನೇ ರಚನೆಯಾಗಿರುವ ಸಿಟಿಜನ್ ಫಾರ್ ಸಿಟಿಜನ್ ಅಸೋಸಿಯೇಶನ್ ಕೂಡ ಕೈ ಜೋಡಿಸಿದೆ. ದೇಶದಲ್ಲಿ ಬೇಕಾಬಿಟ್ಟಿಯಾಗಿ ಗಾಡಿಗಳು ಹಾರ್ನ್ ಹಾಕುವ‌ ಕ್ರಮ ರೂಢಿಸಿಕೊಂಡಿವೆ. ಸಿಗ್ನಲ್ ಗಳಲ್ಲಿ,ಆಸ್ಪತ್ರೆಯ ಆವರಣದಲ್ಲಿ, ಶಾಲಾ ಆವರಣದಲ್ಲಿ, ಕಬ್ಬನ್ ಪಾರ್ಕ್ ಅಂತಹ ಪ್ರಶಾಂತ ಸ್ಥಳಗಳಲ್ಲಿ ಹಾರ್ನ್ ಹಾಕಬಾರದು ಎಂಬ ನಿಯಮವಿದೆ. ಹೀಗಿದ್ದರೂ ವಾಹನ ಸವಾರರು ಅವರಿಗೆ ಮನಸ್ಸಿಗೆ ಬಂದಂತೆ ಹಾರ್ನ್ ಒತ್ತೋದನ್ನು ಮಾತ್ರ ನಿಲ್ಲಿಸಿಲ್ಲ.

ಹೀಗಾಗಿ ಈ ವಿಚಾರವನ್ನು ಸಂಚಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಕಬ್ಬನ್ ಪಾರ್ಕ್ (Cubbon Park) ಆವರಣದಲ್ಲಿ ಹೊಂಕಿಂಗ್ ನಿಲ್ಲಿಸಬೇಕು ಅಂತಾ ಸಿಟಿಜನ್ಸ್ ಫಾರ್ ಸಿಟಿಜನ್ ವೇದಿಕೆ ವತಿಯಿಂದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವ್ರಿಗೆ ಈಗಾಗಲೇ ಮನವಿ ಕೂಡ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿರುವ ನಗರ ಸಂಚಾರಿ ಪೊಲೀಸರು, ಸದ್ಯ ಕಬ್ಬನ್ ಪಾರ್ಕ್ ಅಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಈ ಕೆಲಸ ಮುಗಿದ ಬಳಿಕ No honking zone/Silent zone ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಿಯಮ ಪಾಲನೆ ಮಾಡಲು ಸೂಚಿಸಲಾಗುವುದು ಅಂತ ಭರವಸೆ ಕೂಡ ನೀಡಿದ್ದಾರೆ.

ಕಬ್ಬನ್ ಪಾರ್ಕ್ ಕೇವಲ ಮನುಷ್ಯರ ಓಡಾಟಕ್ಕೆ ಮಾತ್ರವಲ್ಲ ಹಲವಾರು ಪ್ರಾಣಿ ಪಕ್ಷಿಗಳ ವಾಸಸ್ಥಾನ ಕೂಡ ಆಗಿದೆ. ಆದರೆ ಹೀಗೆ ಸಾರ್ವಜನಿಕರು ಸದಾ ಕಾಲ ಹಾರ್ನ್ ಹೊಡೆದು ಹೊಡೆದು ಶಬ್ದ ಮಾಲಿನ್ಯ ಮಾಡೋದರಿಂದ ಮನುಷ್ಯರಿಗೆ ಬಿಪಿ, ಶ್ರವಣ ದೋಷ ಇತ್ಯಾದಿ ಕಾಯಿಲೆ ಅಟ್ಯಾಕ್ ಮಾಡುತ್ತೆ.

ಆದರೆ ಪ್ರಾಣಿ ಪಕ್ಷಿಗಳ ಸಂತತಿಯೇ ನಾಶವಾಗುವ ಭೀತಿ ಇದೆ. ಹೀಗಾಗಿ ಪೊಲೀಸರು ಹೊರಡಿಸುವ ಸೂಚನಾ ಫಲಕಗಳಿಗೆ ಕಾದು ಕುಳಿತು ಕೊಳ್ಳದೇ ಜನ ಸಾಮಾನ್ಯರೇ ಎಚ್ಚೆತ್ತು ಕೊಂಡು ಸ್ವಯಂ ಪ್ರೇರಿತರಾಗಿ ಶಬ್ದ ಮಾಲಿನ್ಯ ತಡೆಗೆ ಮುಂದಾಗಬೇಕು. ಆ ಮೂಲಕ ಕಬ್ಬನ್ ಪಾರ್ಕ್ ನ ಸೌಂದರ್ಯ ಹಾಗೂ ಸಹಜತೆಯನ್ನು ಚಿರಕಾಲ ಉಳಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ಇದನ್ನೂ ಓದಿ : BBMP Budget : ಅಧಿಕಾರಿಗಳ ದರ್ಬಾರ್‌ : ಸದ್ದಿಲ್ಲದೇ ಪಾಸಾಯ್ತು ಬಿಬಿಎಂಪಿ ಬಜೆಟ್

ಇದನ್ನೂ ಓದಿ : ಆಹಾರ ಪ್ರಿಯರಿಗೆ ಕಾದಿದೆ ಶಾಕ್ : ದುಬಾರಿಯಾಗಲಿದೆ ಹೋಟೆಲ್‌ ಊಟ, ತಿಂಡಿ

No Honking Rules will be implemented soon in Cubbon Park

Comments are closed.