ಶಿವಮೊಗ್ಗ : KS Eshwarappa RSS: ದೇಶದಲ್ಲಿ ಮುಂದಿನ ಐದು ವರ್ಷಗಳ ಕಾಲ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ದೇಶದ್ರೋಹಿ ಆಗಿರುವ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ದೇಶ ಭಕ್ತ ಮುಸ್ಲಿಂ ನಾಯಕರು ಬೆಂಬಲ ನೀಡಬೇಕು. ಪಿಎಫ್ಐ ಕಾರ್ಯಕರ್ತರಿಗೆ ಬುದ್ಧಿ ಹೇಳುವ ಕಾರ್ಯ ಮಾಡಬೇಕು. ಪಿಎಫ್ಐ ಮರುಜನ್ಮ, ಮತ್ತೆ ಬರುತ್ತೇವೆ ಎಂಬ ಗೋಡೆ ಬರಹಗಳನ್ನು ಬರೆಯುತ್ತಿದ್ದಾರೆ. ಮುಂದೆ ಬಂದು ಈ ರೀತಿ ಮಾಡಿದರೆ ಸರ್ಕಾರ ಸರಿಯಾಗಿ ಸರ್ಕಾರ ಬುದ್ಧಿ ಕಲಿಸುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಚಡ್ಡಿಗಳಿಗೆ ಬುದ್ಧಿ ಕಲಿಸುವ ಕುರಿತು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಆಕ್ರೋಶ ಹೊರ ಹಾಕಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಆರ್ಎಸ್ಎಸ್ನವರನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಅವರ ಅಪ್ಪನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲ. ಈ ರೀತಿ ಸಂಘಟನೆಗಳು ಮತ್ತೆ ಹುಟ್ಟಿಕೊಂಡರೆ ಅಂತವರ ಸೊಂಟ ಬೆನ್ನು ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪರೇಶ್ ಮೆಸ್ತಾ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಸರ್ಕಾರದ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ನಾನು ಕೂಡ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಆ ಸಂದರ್ಭದಲ್ಲಿ ಸರಿಯಾದ ತನಿಖೆ ಆಗಿಲ್ಲ ಎನ್ನುವುದು ಕುಟುಂಬಸ್ಥರು ಹಾಗೂ ಹಿಂದೂ ಯುವಕರ ಒತ್ತಾಯವಾಗಿದೆ, ಈ ಹಿನ್ನೆಲೆಯಲ್ಲಿ ಮರು ತನಿಖೆ ನಡೆಸಬೇಕು. ಅದಾದ ನಂತರ ಯಾವುದೇ ವರದಿ ಬಂದರೂ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇದನ್ನು ಓದಿ : Mallikarjun Kharge:ಎಐಸಿಸಿ ಚುನಾವಣೆಗೆ ಯಾರೂ ಬೇಕಾದರೂ ಸ್ಪರ್ಧಿಸಬಹುದು: ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟನೆ
ಇದನ್ನೂ ಓದಿ : Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ
ಇದನ್ನೂ ಓದಿ : Uttarakhand avalanche: ಉತ್ತರಾಖಂಡ ಹಿಮಪಾತದಲ್ಲಿ ಸಿಲುಕಿದ ಕನ್ನಡಿಗರು
‘No one can teach RSS’: KS Eshwarappa