CT Ravi : ‘ಪರೇಶ್​ ಮೇಸ್ತಾ ಕುಟುಂಬಸ್ಥರ ಪರವಾಗಿ ನಾವು ಎಂದಿಗೂ ನಿಲ್ಲುತ್ತೇವೆ’ :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಯ

ಚಿಕ್ಕಮಗಳೂರು : CT Ravi Paresh Mesta : ಪರೇಶ್​ ಮೆಸ್ತಾ ಪ್ರಕರಣದಲ್ಲಿ ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪರೇಶ್​ ಮೇಸ್ತಾ ಕುಟುಂಬದ ಪರವಾಗಿ ನಾವು ಆವತ್ತು ನಿಂತಿದ್ದೇವೆ. ನಾಳೆಯೂ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಪರೇಶ್​ ಮೇಸ್ತಾ ಕುಟುಂಬದ ಪರವಾಗಿ ನಾವು ನಿಂತುಕೊಳ್ತೇವೆ. ಅದ್ರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಪರೇಶ್​ ಮೇಸ್ತಾ ಸಾವು ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಅದು ಹತ್ಯೆಯಲ್ಲಿ ಸಾಮಾನ್ಯ ಸಾವು ಎಂದು ತನಿಖಾ ವರದಿ ನೀಡಿದ್ದಾರೆ. ಕುಟುಂಬಸ್ಥರು ಮರು ವಿಚಾರಣೆ ಆಗಬೇಕು ಅಂದರೆ ಅದರ ಪರ ಕೂಡ ನಿಲ್ಲುತ್ತೇವೆ. ಡಿವೈಎಸ್ಪಿ ಗಣಪತಿ ಓಪನ್ ಸ್ಟೇಟ್ ಮೆಂಟ್ ಕೊಟ್ಟಿದ್ರು.ಆದು ಬಿ ರಿಪೋರ್ಟ್ ಹಾಕಿದ್ರು..ನಾನು ಲೈವ್ ಸ್ಟೇಟ್ ಮೆಂಟ್ ಡೆತ್ ಸ್ಟೇಟ್ ಮೆಂಟ್ ಅಂತಾ ಕನ್ಸಿಡರ್ ಮಾಡ್ತಾರೆ..55, 60 ವರ್ಷ ಕೇಂದ್ರದಲ್ಲಿ ಅಡಳಿತ ನಡೆಸಿದ ಪಾರ್ಟಿ ಅವ್ರಿಗೆ ಅವ್ರ ಬೇರುಗಳು ಬಾಹುಗಳು ವ್ಯಾಪಿಸಿದ್ದೀಯೋ ಹೇಳಕ್ಕೆ ಬರಲ್ಲ ಎಂದಿದ್ದಾರೆ.

ಪರೇಶ್​ ಮೇಸ್ತಾ ಪ್ರಕರಣದ ವರದಿಯನ್ನು ಕುಟುಂಬಸ್ಥರು ಒಪ್ಪುತ್ತಾರಾ..? ಅವತ್ತಿನ ಸಾಂದರ್ಭಿಕ ಸನ್ನಿವೇಶ ಆಕಸ್ಮಿಕ ಅನ್ನೋ ರೀತಿ ಭಾವಿಸುವಂತಿರಲಿಲ್ಲ. ಗಲಭೆ ಎಬ್ಬಿಸಿದ್ದು ಆ ಜಾಗದಲ್ಲಿಯೇ. ಅದೇ ಜಾಗದಿಂದಲೇ ನಾಪತ್ತೆಯಾಗಿದ್ದ ಪರೇಶ್​ ಮೇಸ್ತಾ ಬಳಿಕ ಶವವಾಗಿ ಪತ್ತೆಯಾಗಿದ್ದ. ಈ ಪ್ರಕರಣ ಅನುಮಾನಾಸ್ಪದ ಎಂಬಂತೆಯೇ ಇತ್ತು. ಸಾಂಧರ್ಬಿಕ ಕೊಲೆ ಎಂಬುದನ್ನೇ ಬಿಂಬಿಸುತ್ತಿತ್ತು. ಎಷ್ಟೋ ಪ್ರಕರಣಗಳಲ್ಲಿ ಬಿ ರಿಪೋರ್ಟ್​ ಸಲ್ಲಿಸಿದ ಬಳಿಕ ಕೇಸ್​ ರೀ ಓಪನ್​ ಆಗಿ ಆರೋಪಿಗಳನ್ನು ಬಂಧಿಸಿದ ಘಟನೆಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್​ಐ ಬರಹದ ಕುರಿತಾಗಿಯೂ ಇದೇ ವೇಳೆ ಮಾತನಾಡಿದ ಅವರು, ಪಿಎಫ್​ಐ ನೆಪಕ್ಕೆ ಮಾತ್ರ ಆರ್​ಎಸ್​ಎಸ್​ ಟಾರ್ಗೆಟ್​ ಮಾಡುತ್ತವೆ. ಆದರೆ ಅವರ ಉದ್ದೇಶ ಇರೋದು ಭಾರತೀಯರ ಮೇಲೆ. ಇಸ್ಲಾಮಿಕ್​ ದೇಶವನ್ನು ಸ್ಥಾಪನೆ ಮಾಡಬೇಕು ಎಂಬುದು ಅವರ ಯೋಚನೆಯಾಗಿದೆ. ಅವರಲ್ಲಿ ಮತ್ತೊಂದು ಮತ, ಧರ್ಮ, ದೇವರನ್ನು ಒಪ್ಪದಂತಹ ಮನೋಭಾವನೆಯಿದೆ. ಪ್ರತಿಯೊಬ್ಬರೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಪಿಎಫ್​ಐನಂತಹ ಸಂಘಟನೆಗಳನ್ನು ಎದುರಿಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನು ಓದಿ : KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ

‘We will always stand by the family of Paresh Mesta : BJP National General Secretary CT Ravi

Comments are closed.