200 ಯುನಿಟ್ ಉಚಿತ ವಿದ್ಯುತ್ ಸೇರಿ ಯಾವ ಭರವಸೆಯೂ ಈಡೇರುವುದಿಲ್ಲ : ಶಾಸಕ ಕಾರ್ಕಳ ಸುನಿಲ್‌ ಕುಮಾರ್‌

ಕಾರ್ಕಳ : ರಾಜ್ಯದ ಎಲ್ಲಾ ಜನರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟಿರುವ ಕಾಂಗ್ರೆಸ್‌ ಸರಕಾರ ಯಾವುದೇ ಭರವಸೆಯನ್ನೂ ಈಡೇರಿಸುವುದಿಲ್ಲ. ಕನ್ನಡಿಗರೇ ನೆನಪಿಡಿ ಸುಳ್ಳೆ ಕಾಂಗ್ರೆಸಿಗರ ಮನೆ ದೇವರು ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ (MLA Karkala Sunil Kumar) ವ್ಯಂಗ್ಯವಾಡಿದ್ದಾರೆ. ಟ್ವೀಟ್‌ ಮೂಲಕ ಸರಕಾರದ ವಿರುದ್ದ ಕಿಡಿಕಾರಿರುವ ಸುನಿಲ್‌ ಕುಮಾರ್‌, ಚುನಾವಣೆಯ ವೇಳೆಯಲ್ಲಿ ಕೊಟ್ಟ ಭರವಸೆಯನ್ನು ಈ ಸರಕಾರ ಈಡೇರಿಸುವುದಿಲ್ಲ ಅನ್ನೋದು ಮೊದಲ ಸಂಪುಟ ಸಭೆಯಲ್ಲೇ ಸಿದ್ದಯಾಯ್ತು. ಕೊಟ್ಟ ಮಾತನ್ನು ಈಡೇರಿಸದೇ ಕಾಂಗ್ರೆಸ್‌ ರಾಜ್ಯದ ಜನರಿಗೆ ಮಂಕುಬೂದಿ ಎರಚಿದೆ ಎಂದ ಲೇವಡಿ ಮಾಡಿದ್ದಾರೆ.

ಹೇಳುವುದು ಒಂದು ಮಾಡುವುದು ಮತ್ತೊಂದು ಇದು ಕಾಂಗ್ರೆಸ್‌ ಗ್ಯಾರಂಟಿ. ಚುನಾವಣೆಗೆ ಮುನ್ನ ಎಲ್ಲವೂ ಉಚಿತ, ಉಚಿತ ಎಂದು ಜನರನ್ನು ನಂಬಿಸಿದವರು ಈಗ ಐದು ಗ್ಯಾರಂಟಿ ಜಾರಿ ಮಾಡುವ ಮಾರ್ಗೋಪಾಯ ಯೋಚಿಸುತ್ತಿದ್ದೇವೆ ಎಂದು ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರಿಗೆ ಸುನಿಲ್‌ ಕುಮಾರ್‌ ( MLA Karkala Sunil Kumar ಅಭಿನಂದನೆ ತಿಳಿಸಿದ್ದಾರೆ.

ರಾಜ್ಯದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ಮೊದಲು ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿತ್ತು. ಮೊದಲ ಸಂಪುಟ ಸಭೆಯಲ್ಲಿಯೇ ಐದು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಐದು ಭರವಸೆಗಳನ್ನು ಘೋಷಣೆ ಮಾಡಿದ್ದರು. ಆದರೆ ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳಿಗೆ ಕೇವಲ ತಾತ್ವಿಕ ಒಪ್ಪಿಗೆಯನ್ನು ಮಾತ್ರವೇ ನೀಡಲಾಗಿದ್ದು, ಜಾರಿಗೊಳಿಸುವ ಕುರಿತು ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ನಂತರದಲ್ಲಿ ಸರಕಾರದ ವತಿಯಿಂದ ಐದು ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿರುವ ಕುರಿತು ಆದೇಶ ಪ್ರತಿ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ : PM Kisan Yojana : ಪಿಎಂ ಕಿಸಾನ್‌ ಯೋಜನೆಯಡಿ ಪತಿ, ಪತ್ನಿ ಇಬ್ಬರೂ ಲಾಭವನ್ನು ಪಡೆಯಬಹುದೇ ?

ಇದನ್ನೂ ಓದಿ : ಮಹಿಳೆಯರ ಖಾತೆಗೆ 2 ಸಾವಿರ, ಬಸ್ಸುಗಳಲ್ಲಿ ಉಚಿತ ಪ್ರಯಾಣ : ಅಧಿಕೃತ ಆದೇಶ

Comments are closed.