IPL 2023 playoffs : ಐಪಿಎಲ್ 2023 ಪ್ಲೇಆಫ್‌ ಪ್ರವೇಶ, ರಾಜಸ್ಥಾನ್ ರಾಯಲ್ಸ್ ಗೂ ಇದೇ ಅವಕಾಶ

ಧರ್ಮಶಾಲಾ : Rajasthan Royals playoffs: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈಗಾಗಲೇ ಗುಜರಾತ್‌ ಟೈಟಾನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಪ್ಲೇ ಆಫ್‌ಗೆ (IPL 2023 playoffs) ಎಂಟ್ರಿ ಕೊಟ್ಟಿವೆ. ಉಳಿದಂತೆ ಎರಡು ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಐಪಿಎಲ್ 2023ರ 66ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ ಪ್ಲೇ ಆಫ್‌ ಪ್ರವೇಶವನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಲೀಗ್‌ ಹಂತದ ಪಂದ್ಯಗಳು ಅಂತಿಮ ಹಂತವನ್ನು ತಲುಪಿವೆ. ಆದರೆ ರಾಜಸ್ಥಾನ ರಾಯಲ್ಸ್‌ ತಂಡ ಲೀಗ್‌ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಜಯಿಸಿದ್ದು, 7 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್‌ ತಂಡ 14 ಅಂಕಗಳನ್ನು ಪಡೆದುಕೊಂಡಿದೆ. ಆದರೆ ಮುಂಬೈ, ಬೆಂಗಳೂರು, ಲಕ್ನೋ ತಂಡಗಳ ಸೋಲು ಗೆಲುವು ರಾಜಸ್ಥಾನ ತಂಡ ಮುಂದಿನ ಹಂತದ ಭವಿಷ್ಯ ನಿರ್ಧಾರ ಮಾಡಲಿವೆ.

ಸದ್ಯ ಮೂರು ಸ್ಥಾನಗಳಿಗೆ ಬಾರೀ ಪೈಪೋಟಿ ಏರ್ಪಟ್ಟಿದೆ. ಕೋಲ್ಕತ್ತಾ ವಿರುದ್ದ ಸೆಣೆಸಾಡಲಿರುವ ಲಕ್ನೋ ತಂಡ ಪ್ಲೇ ಆಫ್‌ (IPL 2023 playoffs) ಪ್ರವೇಶಿಸುವುದು ಬಹುತೇಕ ಖಚಿತ. ಆದರೆ ಮುಂಬೈ ಹಾಗೂ ಬೆಂಗಳೂರು ತಂಡ ಗೆಲುವು ಸೋಲು ರಾಜಸ್ಥಾನ ತಂಡಕ್ಕೆ ಮಹತ್ವದ್ದಾಗಿದೆ. ಒಂದೊಮ್ಮೆ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಮುಂದಿನ ಪಂದ್ಯದಲ್ಲಿ ಗೆದ್ದರೆ ಗರಿಷ್ಠ ನೆಟ್ ರನ್ ರೇಟ್ ಹೊಂದಿರುವ ತಂಡ ಟಾಪ್-4ರಲ್ಲಿ ಸ್ಥಾನ ಪಡೆಯಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೆ ಮತ್ತು ಗುಜರಾತ್ ಟೈಟಾನ್ಸ್ ಆರ್‌ಸಿಬಿಯನ್ನು ಸೋಲಿಸಿದರೆ, ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತದೆ.

ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ (Rajasthan Royals playoffs) ಗೆ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ತಂಡಗಳ ನಡುವಣ ಮುಂದಿನ ಪಂದ್ಯಗಳ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೆ ರಾಜಸ್ಥಾನ ರಾಯಲ್ಸ್ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯವನ್ನು ಎದುರು ನೋಡುತ್ತಿವೆ.

ಏಕೆಂದರೆ ಮುಂದಿನ ಪಂದ್ಯದಲ್ಲಿ ಮುಂಬೈ ಸೋತರೆ ರಾಜಸ್ಥಾನ್ ರಾಯಲ್ಸ್ ಗೆ ಗುಜರಾತ್ ಟೈಟಾನ್ಸ್ ಗೆಲ್ಲಲೇಬೇಕು. ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ 6 ರನ್ ಅಥವಾ 4 ಎಸೆತಗಳು ಬಾಕಿ ಇರುವಂತೆಯೇ ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಲಿದೆ. ಇದರಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡದ ಸೋಲನ್ನು ಎದುರು ನೋಡುತ್ತಿದೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್‌ಗೆ ಅಚ್ಚರಿ ಮೂಡಿಸಲಿದೆ.

ಇದನ್ನೂ ಓದಿ : ಬಾಕ್ಸಿಂಗ್‌: ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಲ್ಪೆಯ ಕಣ್ಣಿ ಹುಡುಗ ವಿರಾಜ್‌ ಮೆಂಡನ್‌

ಇದನ್ನೂ ಓದಿ : IPL 2023 RCB vs SRH : ಒಂದು ಪಂದ್ಯ ಗೆದ್ದರೂ ಕೂಡ ಪ್ಲೇ ಆಫ್‌ ಪ್ರವೇಶಿಸುತ್ತೆ ಆರ್‌ಸಿಬಿ

Comments are closed.