SP Balasubrahmanyam : ಸಂಗೀತ ಮಾಂತ್ರಿಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ

SP Balasubrahmanyam : ಎಸ್​.ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಲೋಕದ ಮಾಂತ್ರಿಕ ಎಂದು ಹೇಳಿದರೆ ತಪ್ಪಾಗಲಾರದು. ಅನೇಕ ಭಾಷೆಗಳಲ್ಲಿ ಗಾಯನವನ್ನು ಮಾಡಿ ಸೈ ಎನಿಸಿಕೊಂಡಿದ್ದ ಈ ಅದ್ಭುತ ಪ್ರತಿಭೆ ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದೆ. ಗಾಯನ ಮಾತ್ರವಲ್ಲದೇ ನಟನೆಯಲ್ಲಿಯೂ ಎಸ್​ಪಿಬಿ ಸೈ ಎನಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಎಸ್​.ಪಿ ಬಾಲಸುಬ್ರಹ್ಮಣ್ಯಂ ಇನ್ನಿತರ ಗಾಯಕರಿಗೂ ಹೀಗೆ ಹೊಸ ಪ್ರಯೋಗಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ಪ್ರೇರಣೆಯನ್ನು ನೀಡುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಎಸ್​ಪಿಬಿ ಹೊಸ ಪ್ರಯೋಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಂತಹ ಒಬ್ಬ ಪ್ರತಿಭೆ.


ಎಸ್​.ಪಿ ಬಾಲಸುಬ್ರಹ್ಮಣ್ಯಂ ಸಿನಿಮಾಗಳು ನಟಿಸೋದು ಹಾಗಿರಲಿ. ಇವರ ಜೀವನ ಕೂಡ ಸಿನಿಮೀಯ ಸ್ಟೈಲ್​ನಲ್ಲಿಯೇ ಇತ್ತು ಎಂದರೆ ತಪ್ಪಾಗಲಾರದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇದ್ದದ್ದು ಇವರ ಮದುವೆ ಕತೆ. ಸಾವಿತ್ರಿಯನ್ನು ಎಸ್​ಪಿ ಬಾಲಸುಬ್ರಹ್ಮಣ್ಯಂ ಪ್ರೀತಿಸಿ ಮದುವೆಯಾಗಿದ್ದರು. ಸಾವಿತ್ರಿ ಹಾಗೂ ಬಾಲಸುಬ್ರಹ್ಮಣ್ಯಂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಇವರ ಪ್ರೇಮಕ್ಕೆ ಎರಡೂ ಕುಟುಂಬಸ್ಥರಿಂದ ವಿರೋಧವಿತ್ತು.


ಪೋಷಕರ ವಿರೋಧ ಕಟ್ಟಿಕೊಂಡು ಹೇಗೆ ಮದುವೆಯಾಗುವುದು ಎಂಬ ಆತಂಕ ಸಾವಿತ್ರಿ ಹಾಗೂ ಎಸ್​ಪಿಬಿ ಇಬ್ಬರಲ್ಲಿಯೂ ಇತ್ತು. ಎಸ್​ಪಿಬಿ ಬೆಂಗಳೂರಿನಲ್ಲಿದ್ದರು, ಇದೇ ಸಮಯದಲ್ಲಿ ಸಾವಿತ್ರಿ ಕೂಡ ತಮ್ಮ ಸಹೋದರನ ಜೊತೆಯಲ್ಲಿ ಬೆಂಗಳೂರಿಗೆ ಬಂದು ಅವರ ಮನೆಯಲ್ಲಿಯೇ ನೆಲೆಸಿದ್ದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಎಸ್​ಪಿಬಿ ಸಾವಿತ್ರಿಯನ್ನು ಕಿಡ್ನಾಪ್​ ಮಾಡಿದ್ದರಂತೆ..!


ಹೌದು..! ಗೆಳೆಯರಾದ ವಿಠ್ಠಲ್​ ಹಾಗೂ ಮುರುಳಿ ಸಾವಿತ್ರಿಯನ್ನು ಭೇಟಿಯಾಗಿ ಅವರ ಮನವೊಲಿಸಿ ಅವರನ್ನು ಸಿಂಹಾಚಲಂಗೆ ಕರೆದುಕೊಂಡು ಬಂದಿದ್ದರು. ಇಲ್ಲಿ ಸುಬ್ರಹ್ಮಣ್ಯಂ ಸ್ನೇಹಿತರೇ ಎಲ್ಲಾ ಸೇರಿ ಎಸ್​ಪಿಬಿ ಹಾಗೂ ಸಾವಿತ್ರಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಾಕ್ಷಿಯಾಗಿದ್ದರು. ಮಕ್ಕಳು ಈ ರೀತಿ ಓಡಿ ಹೋಗಿ ಮದುವೆಯಾಗಿದ್ದು ಎರಡೂ ಕುಟುಂಬಗಳಿಗೆ ಸರಿ ಎನಿಸಿರಲಿಲ್ಲ. ಹೀಗಾಗಿ ಬರೋಬ್ಬರಿ ಎರಡು ವರ್ಷಗಳ ಕಾಲ ಪೋಷಕರ ದ್ವೇಷವನ್ನು ಎಸ್​ಪಿಬಿ ದಂಪತಿ ಎದುರಿಸಿದ್ದರು. ಎಸ್​ಪಿಬಿ ದಂಪತಿಗೆ ಮೊದಲ ಮಗುವಿನ ಜನನವಾದ ಬಳಿಕ ಎರಡೂ ಕುಟುಂಬಗಳು ಇವರನ್ನು ಒಪ್ಪಿಕೊಂಡಿದ್ದರು.

ಇದನ್ನು ಓದಿ : Rahul Dravid Plan : ಟಿ20 ವಿಶ್ವಕಪ್ ಗೆಲ್ಲಲು ಕೋಚ್ ದ್ರಾವಿಡ್ ಜಬರ್ದಸ್ತ್ ಪ್ಲಾನ್; ದ್ರೋಣಾಚಾರ್ಯನ ಬೊಂಬಾಟ್ ಪ್ಲಾನ್’ಗೆ ಬಿಸಿಸಿಐ ಗ್ರೀನ್ ಸಿಗ್ನಲ್

ಇದನ್ನೂ ಓದಿ : fake lokayukta officer :ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಬಂದು ತಹಶೀಲ್ದಾರ್​ ಕಚೇರಿಯಲ್ಲಿ ತಲಾಶ್​ : ದಾಖಲೆ ಕೇಳುತ್ತಿದ್ದಂತೆಯೇ ಎಸ್ಕೇಪ್​

SP Balasubrahmanyam married Savitri against the opposition of family members

Comments are closed.