Orange alert Karnataka : ವರುಣನ ಅಬ್ಬರ : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಆರೆಂಜ್​ ಅಲರ್ಟ್​

ಬೆಂಗಳೂರು : Orange alert Karnataka : ರಾಜ್ಯದಲ್ಲಿ ವರುಣನ ಅಬ್ಬರ ಮಿತಿಮೀರಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಂತೂ ಮಳೆಯಿಂದಾದ ಹಾನಿ ಅಷ್ಟಿಷ್ಟಲ್ಲ. ಮಳೆಗಾಲ ಮುಗಿಯಲು ಇನ್ನೂ ಕೆಲವು ತಿಂಗಳುಗಳು ಬಾಕಿ ಇರುವಾಗಲೇ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆಯು ಹವಾಮಾನ ಇಲಾಖೆಯು ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಐದು ಜಿಲ್ಲೆಗಳಲ್ಲಿ (Orange alert Karnataka) ಆರೆಂಜ್​ ಅಲರ್ಟ್ :

ಕರಾವಳಿ ಭಾಗದಲ್ಲಿ ಈ ಬಾರಿ ಅತೀ ಹೆಚ್ಚು ಮಳೆ ಹಾನಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಜನತೆಯ ಜೀವನ ಸಂಪೂರ್ಣ . ಜಿಲ್ಲಾಅಸ್ತವ್ಯಸ್ತಗೊಂಡಿದೆಡಳಿತಗಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಮಾಡುತ್ತಿವೆ. ಹವಾಮಾನ ಇಲಾಖೆಯು ಇಂದು ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ. ನಾಳೆ ಹಾಗೂ ನಾಡಿದ್ದು ಕೂಡ ಈ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಮುಂದುವರಿಯಲಿದೆ. ಕೊಡಗು ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಆರೆಂಜ್​ ಅಲರ್ಟ್​ ಘೋಷಣೆಯಾಗಿರುವ ಜಿಲ್ಲೆಗಳಲ್ಲಿ 115 ಮಿ.ಮೀಯಿಂದ 204 ಮಿ.ಮೀವರೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ನಿರೀಕ್ಷೆ ಮಾಡಿದೆ . ಅಲ್ಲದೇ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆ ಉಂಟಾಗುವ ನಿರೀಕ್ಷೆ ಕೂಡ ಇದೆ. ಸಧ್ಯಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ವಿಪರೀತ ಮಳೆಯಾಗುತ್ತಿದೆ.

ಆರೆಂಜ್​ ಅಲರ್ಟ್​ ಘೋಷಣೆಯಾದ ಜಿಲ್ಲೆಗಳ ಹೆಸರು :

  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಕೊಡಗು
  • ಚಿಕ್ಕಮಗಳೂರು

ಇದರ ಜೊತೆಯಲ್ಲಿ, ಆಗಸ್ಟ್ 11 ಮತ್ತು ಆಗಸ್ಟ್ 12ರಂದು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಯೆಲ್ಲೋ ಅಲರ್ಟ್​ ಘೋಷಣೆಯಾದ ಜಿಲ್ಲೆಗಳ ವಿವರ

ಬಾಗಲಕೋಟೆ

ಬೆಳಗಾವಿ

ಬೀದರ್

ಕಲಬುರಗಿ

ವಿಜಯಪುರ

ಯಾದಗಿರಿ

ಹಾಸನ

ಶಿವಮೊಗ್ಗ

ಇದನ್ನು ಓದಿ : India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”

ಇದನ್ನೋ ಓದಿ : JEE Main Result 2022 Session 2 : ಜೆಇಇ ಸೆಷನ್ 2 ಫಲಿತಾಂಶ ಬಿಡುಗಡೆ : ಕಟ್​ಆಫ್​ ಘೋಷಣೆ

Orange alert Karnataka alert for three more days in coastal Karnataka and malenadu

Comments are closed.