Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್​ ಅಶ್ವತ್ಥ ನಾರಾಯಣ

ರಾಮನಗರ : Siddaramautsava program : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಸಮಾರಂಭಕ್ಕೆ ಲೆಕ್ಕಕ್ಕೂ ಮೀರಿದ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಸದ್ಯದ ರಾಜಕೀಯ ಚರ್ಚೆಯ ಹಾಟ್ ಟಾಪಿಕ್​ ಆಗಿ ಬದಲಾಗಿದೆ. ಕಾಂಗ್ರೆಸ್ಸಿಗರಿಗೆ ಇದೊಂದು ಸಾಧನೆ ಎನಿಸಿದರೆ ಬಿಜೆಪಿಗರಿಗೆ ಎಲ್ಲೊ ಒಂದು ಕಡೆ ಚುನಾವಣಾ ದೃಷ್ಟಿಯಿಂದ ಹಿನ್ನೆಡೆ ಎನಿಸಿದೆ. ಬಿಜೆಪಿಯ ಈ ಭಯದ ಲಾಭವನ್ನು ಪಡೆದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ದರಾಮೋತ್ಸವ ಕಾರ್ಯಕ್ರಮ ದಿಂದ ಬಿಜೆಪಿಗರಿಗೆ ನಡುಕ ಶುರುವಾಗಿದೆ ಎಂದು ಟಾಂಗ್​ ನೀಡಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಗೆ ಇದೀಗ ಸಚಿವ ಡಾ.ಸಿ ಅಶ್ವತ್ಥ ನಾರಾಯಣ ಟಾಂಗ್​ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಂಕೀಘಟ್ಟದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಡಾ.ಸಿ ಅಶ್ವತ್ಥ ನಾರಾಯಣ, ಸಿದ್ದರಾಮೋತ್ಸವ ಕಾರ್ಯಕ್ರಮದ ಬಳಿಕ ಭಯ ಶುರುವಾಗಿರುವುದು ನಮಗಲ್ಲ, ಬದಲಾಗಿ ಕಾಂಗ್ರೆಸ್​ನಲ್ಲಿರುವ ನಾಯಕರಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್​ನಲ್ಲಿರುವ ಕೆಲವು ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಸಿಗುತ್ತೆ ಎಂಬ ನಡುಕ ಶುರುವಾಗಿದೆ. ಕಾಂಗ್ರೆಸ್​ ಪಕ್ಷ ಅಂದರೆ ಅದು ಸಿದ್ದರಾಮಯ್ಯ ಎಂಬಂತೆ ಆಗಿದೆ. ಹೀಗಾಗಿ ಬೇರೆ ನಾಯಕರು ಯಾಕೆ ಆ ಪಕ್ಷದಲ್ಲಿ ಇರ್ತಾರೆ..? ಕಾಂಗ್ರೆಸ್​​ನಲ್ಲಿ ಭವಿಷ್ಯ ಇಲ್ಲ, ಬರೀ ಸಿದ್ದರಾಮಯ್ಯ ಅನ್ನೋದಾದ್ರೆ ಈ ಪಕ್ಷ ನಮಗೇಕೆ ಬೇಕು ಎಂದು ಯೋಚಿಸ್ತಾರೆ ಅಂತಾ ಹೇಳಿದ್ರು.

ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಜೈಕಾರ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಜೈ ಎಂದ ಕ್ಷಣವೇ ಡಿಕೆಶಿ ಕೂಡ ಜೈ ಆಗಿದ್ದಾರೆ . ಕಾಂಗ್ರೆಸ್​ ಎಲ್ಲೋ ಒಂದು ಸಿದ್ದರಾಮಯ್ಯಗೆ ಸೀಮಿತಗೊಂಡಿದೆ. ಸಿದ್ದರಾಮಯ್ಯಗೂ ವಯಸ್ಸಾಗಿದೆ. ಪಾಪ ಅವರಿಗೂ 75 ವರ್ಷ ವಯಸ್ಸು. ಹೀಗಾಗಿ ಸಿದ್ದರಾಮಯ್ಯ ಕೂಡ ಸೂಕ್ತ ಸಿಎಂ ಅಭ್ಯರ್ಥಿಯಲ್ಲ ಎಂದು ಹೇಳಿದರು.

ಸಿದ್ದರಾಮೋತ್ಸವದ ಬಳಿಕ ವಿಶೇಷವಾಗಿ ಡಿ,ಕೆ ಶಿವಕುಮಾರ್​ರಿಗೆ ನಡುಕ ಹುಟ್ಟಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಏನೂ ಅನ್ನೋದನ್ನ ಸಿದ್ದರಾಮೋತ್ಸವದಲ್ಲಿ ತೋರಿಸಿಕೊಂಡಿದ್ದಾರೆ.ಕಾಂಗ್ರೆಸ್ ಅವರಿಗೆ ಯಾವುದೇ ರೀತಿಯ ನೆಲೆ ಇಲ್ಲ, ಜನರ ಬೆಂಬಲವೂ ಇಲ್ಲ .ಬರೀ ಹಗಲು ಕನಸು ಕಾಣೋದೇ ಕಾಂಗ್ರೆಸ್ ಅವರ ಸ್ಥಿತಿ ಎಂದು ವ್ಯಂಗ್ಯವಾಡಿದರು .

ಇದನ್ನು ಓದಿ : JEE Main Result 2022 Session 2 : ಜೆಇಇ ಸೆಷನ್ 2 ಫಲಿತಾಂಶ ಬಿಡುಗಡೆ : ಕಟ್​ಆಫ್​ ಘೋಷಣೆ

ಇದನ್ನೂ ಓದಿ : orange alert : ವರುಣನ ಅಬ್ಬರ : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಆರೆಂಜ್​ ಅಲರ್ಟ್​

Statement of Dr. CN Aswattha Narayan against the Siddaramautsava program

Comments are closed.