ಭಾನುವಾರ, ಏಪ್ರಿಲ್ 27, 2025
HomeCrimeಕೋಟ : ಇಸ್ಪೀಟು ಅಡ್ಡದ ಮೇಲೆ ದಾಳಿ ಪೊಲೀಸರ ದಾಳಿ : 4 ಮಂದಿ ಅರೆಸ್ಟ್

ಕೋಟ : ಇಸ್ಪೀಟು ಅಡ್ಡದ ಮೇಲೆ ದಾಳಿ ಪೊಲೀಸರ ದಾಳಿ : 4 ಮಂದಿ ಅರೆಸ್ಟ್

- Advertisement -

ಕೋಟ : Kota Police : ಹಣವನ್ನು ಪಣವಾಗಿಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು (ಜುಗಾರಿ) ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿಯಲ್ಲಿರುವ ಹಾಡಿಯಲ್ಲಿ ನಡೆದಿದೆ.

ಶಿರಿಯಾರ ಗ್ರಾಮದ ಸೈಬ್ರಕಟ್ಟೆಯ ಜನತಾ ಕಾಲೋನಿಯ ನಿವಾಸಿ ಮಂಜುನಾಥ (31 ವರ್ಷ), ಅಚ್ಲಾಡಿ ಗ್ರಾಮದ ಗಿರಿಕೆಮಠದ ನಿವಾಸಿ ಪಳನಿಕುಮಾರ್ (31 ವರ್ಷ), ಅಚ್ಲಾಡಿ ಗ್ರಾಮದ ಗಿರಿಕೆಮಠದ ನಿವಾಸಿ ಬಸವರಾಜ್ ( 41 ವರ್ಷ), ಅಚ್ಲಾಡಿ ಗ್ರಾಮದ ಗಿರಿಕೆಮಠದ ನಿವಾಸಿ ನಾಗರಾಜ್ (46 ವರ್ಷ) ಎಂಬವರೇ ಬಂಧನಕ್ಕೆ ಒಳಗಾದವರು.

ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಧು ಬಿ.ಇ ಅವರ ನೇತೃತ್ವದ ಪೊಲೀಸರ ತಂಡ ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗಿರಿಕೆಮಠದ ಬಳಿಯಲ್ಲಿರುವ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೇ ಅವರ ಬಳಿಯಲ್ಲಿದ್ದ 4,350 ರೂಪಾಯಿ ಹಾಗೂ ಜುಗಾರಿ ಆಟಕ್ಕೆ ಬಳಸಿದ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಆಟೋ ಟ್ರಕ್‌ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ 8 ಮಂದಿ ಸಾವು

ಆಟೋ ರಿಕ್ಷಾ ಹಾಗೂ ಟ್ರಕ್‌ ನಡುವೆ ಮುಖಾಮುಖಿ ಢಿಕ್ಕಿಯಾಗಿ ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಕತಿಹಾರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಖೆರಿಯಾದ ಅರುಣ್‌ ಠಾಕೂರ್‌, ಅವರ ಪತ್ನಿ ಊರ್ಮಿಳಾ ದೇವಿ, ಸೊಸೆ ಪಲ್ಲವಿ ಕುಮಾರಿ, ಎರಡು ವರ್ಷದ ಮೊಮ್ಮಗಳು, ಸೋದರ ಮಾವ ಧನಂಜಯ್‌ ಠಾಕೂರ್‌ ಹಾಗೂ ಮುಖರ್ಜಿ ಎನ್ನುವವರು ಮೃತಪಟ್ಟವರು. ಇವರ ಜೊತೆಗೆ ಆಟೋ ಚಾಲಕ ಪಟ್ಟು ಪಾಸ್ವಾನ್‌ ಹಾಗೂ ಗೋಲು ಕುಮಾರ್‌ ಕೂಡ ಮೃತಪಟ್ಟಿದ್ದಾರೆ.

ಆಟೋದಲ್ಲಿ ಕುಟುಂಬ ಸದಸ್ಯರು ಖೇರಿಯಾದಿಂದ ಕತಿಹಾರ್‌ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಟ್ರಕ್‌ ಒಂದು ಆಟೋಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ಪರಿಣಾಮ ಆಟೋ ಚಾಲಕರು ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಹೊರಗೆ ಬಂದು ನೋಡಿದ್ದಾರೆ. ಅಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಘಟನೆಗೆ ಕಾರಣವಾದ ಟ್ರಕ್‌ ಚಾಲಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : illegal liquor Sale: ಉಡುಪಿಯಲ್ಲಿ ಅಕ್ರಮ ಮಧ್ಯ ಮಾರಾಟ: ನಾಲ್ವರು ವಶಕ್ಕೆ

ಇದನ್ನೂ ಓದಿ : LLB student suicide: ಪ್ರಿನ್ಸಿಪಾಲ್‌ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಲ್.ಎಲ್‌.ಬಿ ವಿದ್ಯಾರ್ಥಿ ಅತ್ಮಹತ್ಯೆ

Playing With Cards Illegal 4 arrested Kota Police Udupi news

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular