Virat Kohli vs Sachin Tendulkar : ದಿಗ್ಗಜರಲ್ಲಿ ಯಾರು ಗ್ರೇಟ್? “45 ಶತಕಗಳು ಸುಮ್ ಸುಮ್ನೆ ಬರಲ್ಲ”; ದಾದಾ ಬಿಗ್ ಸ್ಟೇಟ್ಮೆಂಟ್

ಬೆಂಗಳೂರು: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮಧ್ಯೆ ಯಾರು ಗ್ರೇಟ್ (Virat Kohli vs Sachin Tendulkar) ಎಂಬ ಚರ್ಚೆ ಮತ್ತೆ ಶುರುವಾಗಿದೆ. ವಿರಾಟ್ ಕೊಹ್ಲಿ 45ನೇ ಏಕದಿನ ಶತಕ ಬಾರಿಸಿದ ಬೆನ್ನಲ್ಲೇ ಈ ಚರ್ಚೆ ಜೋರಾಗಿ ನಡೆಯುತ್ತಿದೆ.

ಶ್ರೀಲಂಕಾ ವಿರುದ್ಧ ಮಂಗಳವಾರ ಗುವಾಹಟಿಯಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಅಮೋಘ 113 ರನ್ ಸಿಡಿಸಿದ್ದರು. ಆ ಮೂಲಕ ಏಕದಿನ ಕ್ರಿಕೆಟ್’ನಲ್ಲಿ 45ನೇ ಶತಕ ಪೂರ್ತಿಗೊಳಿಸಿದ್ದರು. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತೀ ಹೆಚ್ಚು ಶತಕಗಳ ವಿಶ್ವದಾಖಲೆಯನ್ನು (Most centuries in ODI cricket) ಸರಿಗಟ್ಟಲು ವಿರಾಟ್ ಕೊಹ್ಲಿಗೆ ಬೇಕಿರುವುದಿನ್ನು ಕೇವಲ 4 ಶತಕ ಮಾತ್ರ.

ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಿಂದ 49 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 266 ಏಕದಿನ ಪಂದ್ಯಗಳಿಂದ 45 ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಹೋಲಿಕೆ ಸರಿಯಲ್ಲ ಎಂದು ಈಗಾಗ್ಲೇ ಟೀಮ್ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. “ಸಚಿನ್ ಜೊತೆ ವಿರಾಟ್ ಕೊಹ್ಲಿ ಅವರನ್ನು ಹೋಲಿಸಲು ಸಾಧ್ಯವೇ ಇಲ್ಲ. ಸಚಿನ್ ಆಡುತ್ತಿದ್ದಾಗ 30 ಯಾರ್ಡ್ ಒಳಗೆ 5 ಫೀಲ್ಡರ್’ಗಳನ್ನು ನಿಲ್ಲಿಸುವ ನಿಯಮವಿರಲಿಲ್ಲ” ಎಂದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ 45 ಶತಕಗಳನ್ನು ಬಾರಿಸಿರುವುದು ದೊಡ್ಡ ವಿಚಾರವಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಆದರೆ ಟೀಮ್ ಇಂಡಿಯಾದ ಮತ್ತೊಬ್ಬ ಎಡಗೈ ಓಪನರ್, ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಬೇರೆಯದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.”ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ. ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ಇಂತಹ ಹಲವರು ಇನ್ನಿಂಗ್ಸ್’ಗಳನ್ನು ಕೊಹ್ಲಿ ಆಡಿದ್ದಾರೆ. 45 ಶತಕಗಳು ಸುಮ್ ಸುಮ್ನೆ ಬರುವುದಿಲ್ಲ. ಅವರು ವಿಶೇಷ ಪ್ರತಿಭೆ” ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ : Exclusive Virat Kohli: ಭಾರತ ತಂಡದ ಜೊತೆ ಕೋಲ್ಕತ್ತಾಗೆ ಕಿಂಗ್ ಕೊಹ್ಲಿ ಬರಲಿಲ್ಲ.. ಅವಸರವಸರವಾಗಿ ಮುಂಬೈಗೆ ತೆರಳಿದ ವಿರಾಟ್, ಕಾರಣ ಏನು ಗೊತ್ತಾ?

ಇದನ್ನೂ ಓದಿ : Prithvi Shaw triple hundred : ರಣಜಿ ಟ್ರೋಫಿಯಲ್ಲಿ 379 ರನ್ ಚಚ್ಚಿದ ಪೃಥ್ವಿ ಶಾ, ಬಿಸಿಸಿಐಗೆ ಖಡಕ್ ಮೆಸೇಜ್ ಕೊಟ್ಟ ಮುಂಬೈ ಆಟಗಾರ

ಇದನ್ನೂ ಓದಿ : International Hundreds without dropped Catches : ಒಂದೇ ಒಂದು “ಲೈಫ್” ಪಡೆಯದೆ ವಿರಾಟ್ ಕೊಹ್ಲಿ ಬಾರಿಸಿದ್ದಾರೆ 55 ಸೆಂಚುರಿ, ಸಚಿನ್ ಬಾರಿಸಿದ ಶತಕ ಎಷ್ಟು?

34 ವರ್ಷದ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಾರೆ 73ನೇ ಶತಕ ಪೂರ್ತಿಗೊಳಿಸಿದ್ದರು. 2023ನೇ ವರ್ಷವನ್ನು ಶತಕದೊಂದಿಗೆ ಆರಂಭಿಸಿರುವ ಕಿಂಗ್ ಕೊಹ್ಲಿ, ಲಂಕಾ ವಿರುದ್ಧದ 2ನೇ ಪಂದ್ಯದಲ್ಲೂ ಶತಕದ ನಿರೀಕ್ಷೆಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್’ನಲ್ಲಿ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದರೆ ಹ್ಯಾಟ್ರಿಕ್ ಏಕದಿನ ಶತಕ ಸಿಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಕೊಹ್ಲಿ ಭರ್ಜರಿ ಸೆಂಚುರಿ ಬಾರಿಸಿದ್ದರು.

Virat Kohli vs Sachin Tendulkar : Who is the greatest of the legends? “45 Centuries Sum Sumne Bara Lala”; Dada Big Statement

Comments are closed.