Exclusive Virat Kohli: ಭಾರತ ತಂಡದ ಜೊತೆ ಕೋಲ್ಕತ್ತಾಗೆ ಕಿಂಗ್ ಕೊಹ್ಲಿ ಬರಲಿಲ್ಲ.. ಅವಸರವಸರವಾಗಿ ಮುಂಬೈಗೆ ತೆರಳಿದ ವಿರಾಟ್, ಕಾರಣ ಏನು ಗೊತ್ತಾ?

ಮುಂಬೈ: Virat Kohli : ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿರುವ ರನ್ ಮಷಿನ್ ವಿರಾಟ್ ಕೊಹ್ಲಿ ಕೋಲ್ಕತಾದಲ್ಲಿ ಗುರುವಾರ ನಡೆಯುವ 2ನೇ ಏಕದಿನ ಪಂದ್ಯದಲ್ಲೂ (India Vs Sri Lanka ODI series) ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ. ಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬುಧವಾರವೇ ಕೋಲ್ಕತಾ ತಲುಪಿತ್ತು. ಆದರೆ ಟೀಮ್ ಇಂಡಿಯಾ ಜೊತೆ ಕಿಂಗ್ ಕೊಹ್ಲಿ ಕಾಣಿಸಲಿಲ್ಲ. ಗುವಾಹಟಿಯಲ್ಲಿ ಮಂಗಳವಾರ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಕೊಹ್ಲಿ ಬುಧವಾರ ಗುವಾಹಟಿಯಿಂದ ನೇರವಾಗಿ ಮುಂಬೈಗೆ ತೆರಳಿದ್ದರು. ಟೀಮ್ ಇಂಡಿಯಾ ಕೋಲ್ಕತಾಗೆ ಬಂದಿಳಿದಾಗ ತಂಡದ ಜೊತೆ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳದಿರಲು ಕಾರಣವೇನು? ಕಿಂಗ್ ಕೊಹ್ಲಿ ಅಸ್ಸಾಂನ ಗುವಾಹಟಿಯಿಂದ ತರಾತುರಿಯಲ್ಲಿ ಮುಂಬೈಗೆ ಹಾರಿದ್ದೇಕೆ..? ಕಾರಣ ಪುತ್ರಿಯ ಹುಟ್ಟುಹಬ್ಬ (Virat Kohli daughter’s birthday).

ಬುಧವಾರ ವಿರಾಟ್ ಕೊಹ್ಲಿ ಮತ್ತು ಅನುಶ್ಕಾ ಶರ್ಮಾ ದಂಪತಿಯ ಪುತ್ರಿ ವಾಮಿಕಾ ಕೊಹ್ಲಿಯ ಹುಟ್ಟುಹಬ್ಬ. 2 ವರ್ಷ ಪೂರ್ತಿಗೊಳಿಸಿದ ಕೊಹ್ಲಿ ಪುತ್ರಿ 3ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಪುತ್ರಿಯ ಹುಟ್ಟುಹಬ್ಬದಲ್ಲಿ ಭಾಗಿಯಾಗಲು ವಿರಾಟ್ ಕೊಹ್ಲಿ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಗುವಾಹಟಿಯಿಂದ ಮುಂಬೈಗೆ ತೆರಳಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ ಬುಧವಾರ ಮಗಳ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ, ಗುರುವಾರ ಬೆಳಗ್ಗೆ ಮುಂಬೈನಿಂದ ಕೋಲ್ಕತಾಗೆ ಆಗಮಿಸಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ.

34 ವರ್ಷದ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 45ನೇ ಸೆಂಚುರಿ ಸಿಡಿಸಿದ್ದರು. ಅಷ್ಟೇ ಅಲ್ಲ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಾರೆ 73ನೇ ಶತಕ ಪೂರ್ತಿಗೊಳಿಸಿದ್ದರು. 2023ನೇ ವರ್ಷವನ್ನು ಶತಕದೊಂದಿಗೆ ಆರಂಭಿಸಿರುವ ಕಿಂಗ್ ಕೊಹ್ಲಿ, ಲಂಕಾ ವಿರುದ್ಧದ 2ನೇ ಪಂದ್ಯದಲ್ಲೂ ಶತಕದ ನಿರೀಕ್ಷೆಯಲ್ಲಿದ್ದಾರೆ.

ಶ್ರೀಲಂಕಾ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್’ನಲ್ಲಿ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದರೆ ಹ್ಯಾಟ್ರಿಕ್ ಏಕದಿನ ಶತಕ ಸಿಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಕೊಹ್ಲಿ ಭರ್ಜರಿ ಸೆಂಚುರಿ ಬಾರಿಸಿದ್ದರು.

ಇದನ್ನೂ ಓದಿ : Prithvi Shaw triple hundred : ರಣಜಿ ಟ್ರೋಫಿಯಲ್ಲಿ 379 ರನ್ ಚಚ್ಚಿದ ಪೃಥ್ವಿ ಶಾ, ಬಿಸಿಸಿಐಗೆ ಖಡಕ್ ಮೆಸೇಜ್ ಕೊಟ್ಟ ಮುಂಬೈ ಆಟಗಾರ

ಇದನ್ನೂ ಓದಿ : International Hundreds without dropped Catches : ಒಂದೇ ಒಂದು “ಲೈಫ್” ಪಡೆಯದೆ ವಿರಾಟ್ ಕೊಹ್ಲಿ ಬಾರಿಸಿದ್ದಾರೆ 55 ಸೆಂಚುರಿ, ಸಚಿನ್ ಬಾರಿಸಿದ ಶತಕ ಎಷ್ಟು?

English News Click Here

Exclusive Virat Kohli did not come to Kolkata with the Indian team Virat Kohli daughter’s birthday rushed to Mumbai, do you know the reason

Comments are closed.