ಬೆಂಗಳೂರು : ಸಿನಿಮಾ ಹಾಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿರೋ ನಟಿ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟಿವ್ ಆಗಿದ್ದಾರೆ. ಸಿನಿಮಾ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಷನ್ ಕೊಡೋ ರಮ್ಯ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ರಾಜ್ಯ ಪ್ರವಾಸದ ಬಗ್ಗೆ ಕಮೆಂಟ್ ಮಾಡೋ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದರು. ಯೋಗ ದಿನಾಚರಣೆ ಯಲ್ಲಿ ಪಾಲ್ಗೊಂಡು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ದೆಹಲಿಗೆ ಮರಳಿದ್ದಾರೆ.
ಆದರೆ ಇದೆಲ್ಲ ಕಾರ್ಯಕ್ರಮ ಮುಗಿದ ಮೇಲೆ ಮೋದಿಗೆ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಮೋದಿ ಏನೆಲ್ಲ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ. ನೀವು ರಸ್ತೆಗಳನ್ನು ಉದ್ಘಾಟಿಸಿದ್ದೀರಿ. ನಿಜಕ್ಕೂ ಇದು ಒಳ್ಳೆಯ ಕೆಲಸ. ಇದರ ಅಗತ್ಯವಿತ್ತು. ಅದಕ್ಕಾಗಿ ನಾವು ನಿತಿನ್ ಗಡ್ಕರಿಯವರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದಿದ್ದಾರೆ. ಮಾತ್ರವಲ್ಲ ಮೈಸೂರಿನ ಮೈಲಾರಿ ಬೆಣ್ಣೆ ದೋಸೆಯನ್ನು ಸವಿಯಿರಿ. ಇಷ್ಟು ಮೆತ್ತಗಿನ ದೋಸೆಯನ್ನು ನೀವೆಂದೂ ಸವಿದಿರಲೂ ಸಾಧ್ಯವಿಲ್ಲ ಎಂದು ರಮ್ಯ ಮೋದಿಯವರಿಗೆ ಸಜೇಶನ್ ನೀಡಿದ್ದಾರೆ.
ಅಷ್ಟೇ ಅಲ್ಲ ಮೈಸೂರಿನ ಹಿರಿಮೆ, ಮೈಸೂರಿನ ಕಲ್ಚರ್, ಸಾಂಸ್ಕೃತಿಕ ಹಿನ್ನೆಲೆಯನ್ನು ನೀವು ಅರಿಯಬೇಕು ಎಂದರೇ, ಯುವ ಉತ್ಸಾಹಿಗಳು ಸಿದ್ಧಪಡಿಸಿರುವ ಆಕ್ರೇಸ್ಟ್ರಾ ಮೈಸೂರು ಟ್ರೇಲರ್ ಕೂಡ ನೋಡಬಹುದು ಎಂದು ಮೋದಿಗೆ ರಮ್ಯ ಸಲಹೆ ನೀಡಿದ್ದಾರೆ. ಇನ್ನು ರಮ್ಯ ಮೋದಿಗೆ ನೀಡಿರೋ ಸಲಹೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು,ಕೆಲವರು ರಮ್ಯ ಅವರನ್ನು ಬೆಂಬಲಿಸಿ ಕೇವಲ ಮೈಲಾರಿ ದೋಸೆ ಮಾತ್ರವಲ್ಲ ಹನುಮಂತು ಬಿರಿಯಾನಿ ಕೂಡ ಸವಿಯಬೇಕಿತ್ತು ಎಂದಿದ್ದಾರೆ.
Welcome to Namma Mysuru @narendramodi avare
— Divya Spandana/Ramya (@divyaspandana) June 21, 2022
A list of things to do in Mysuru if time permits-
1.Innaugurate roads. Ofcourse. We badly need them.
Also, thank you @nitin_gadkari ji
2.Please try our famous Mylari Benne Dose. Softest dose you will ever have 1/2
ಇನ್ನು ಬಹುತೇಕರು ರಮ್ಯಗೆ ಟಾಂಗ್ ನೀಡಿದ್ದು, ನೀವು ರಾಹುಲ್ ಗಾಂಧಿಯನ್ನು ಅವರನ್ನು ಬಿಟ್ಟು ನರೇಂದ್ರ ಮೋದಿಗೆ ಸಿನಿಮಾ ಟ್ರೇಲರ್ ನೋಡುವಂತೆ ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನೀವು ಮಾಡೋ ಕೆಲಸಕ್ಕೆ ನಿಮ್ಮನ್ನು ಕಾಂಗ್ರೆಸ್ ಪಕ್ಷದವರೇ ಓಡಿಸಿದ್ದಾರೆ. ಹೀಗಾಗಿ ಕೆಲಸ ಮಾಡೋರನ್ನು ಕಂಡ್ರೇ ನಿಮಗೆ ಹೊಟ್ಟೆ ಕಿಚ್ಚು ಎಂದಿದ್ದಾರೆ. ಮಾತ್ರವಲ್ಲ ನಿಮ್ಮ ಯುವರಾಜ್ ನನ್ನು ಇಡಿ ಪರೀಕ್ಷೆ ತಗೊಳ್ತಿದೆ. ಪ್ರಶ್ನೆ ಪತ್ರಿಕೆ ಹೇಗಿತ್ತು ಹೇಳಿ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಸದಾ ಕಾಲ ಸೋಷಿಯಲ್ ಮೀಡಿಯಾದ ಮೂಲಕವೇ ಚರ್ಚೆಗೆ ಗ್ರಾಸವಾಗೋ ರಮ್ಯ ಮತ್ತೊಮ್ಮೆ ಮೋದಿ ಕೆಣಕಿ ಭಕ್ತರ ಹಾಗೂ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : Indian Bank : ಗರ್ಭಿಣಿಯರು ಕೆಲಸಕ್ಕೆ ಅರ್ಜಿ ಸಲ್ಲಿಸುವಂತಿಲ್ಲ: ವಿವಾದಾತ್ಮಕ ಆದೇಶ ಹೊರಡಿಸಿದ ಇಂಡಿಯನ್ ಬ್ಯಾಂಕ್
ಇದನ್ನೂ ಓದಿ : Yashwant Sinha : ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಧಿಕೃತ ಘೋಷಣೆ
Please try our famous Mylari Benne Dose Ramya Divya Spandana Suggest PM Narendra Modi