ಉಮ್ರಾನ್ ಮಲಿಕ್‌ಗೆ ಅವಕಾಶ ಸಿಗದಿರಲು ಕೋಚ್ ದ್ರಾವಿಡ್ ಅವರೇ ಕಾರಣ

ಬೆಂಗಳೂರು: ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ (Team India Head Coach Rahul Dravid) ಹಲವಾರು ಯುವ ಕ್ರಿಕೆಟಿಗರ ಭವಿಷ್ಯ ನಿರ್ಮಿಸಿದ್ದಾರೆ. ಯುವ ಆಟಗಾರರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕರ್ನಾಟಕದ ರಾಬಿನ್ ಉತ್ತಪ್ಪ, ಉತ್ತರ ಪ್ರದೇಶದ ಸುರೇಶ್ ರೈನಾರಂತಹ ಆಟಗಾರರು ಪ್ರವರ್ಧಮಾನಕ್ಕೆ ಬಂದದ್ದೇ ದ್ರಾವಿಡ್ ಟೀಮ್ ಇಂಡಿಯಾ ನಾಯಕರಾಗಿದ್ದಾಗ. ಆದರೆ ಉಮ್ರಾನ್‌ ಮಲ್ಲಿಕ್‌ ಗೆ (Umran Malik )ಅವಕಾಶ ಸಿಗದೇ ಇರೋದಕ್ಕೆ ದ್ರಾವಿಡ್‌ ಕಾರಣವಂತೆ

ಇನ್ನು ಐಪಿಎಲ್’ನಲ್ಲೂ ದ್ರಾವಿಡ್ ಸಾಕಷ್ಟು ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಅಜಿಂಕ್ಯ ರಹಾನೆ, ಕರ್ನಾಟಕದ ಕರುಣ್ ನಾಯರ್.. ಹೀಗೆ ಹಲವು ಕ್ರಿಕೆಟಿಗರ ಐಪಿಎಲ್ ಯಶಸ್ಸಿನಲ್ಲಿ ದ್ರಾವಿಡ್ ಪಾತ್ರ ದೊಡ್ಡದು. ಆದರೆ ಅದೇ ದ್ರಾವಿಡ್ ಈಗ ಜಮ್ಮು ಎಕ್ಸ್”ಪ್ರೆಸ್ ಉಮ್ರಾಮ್ ಮಲಿಕ್”ಗೆ (Umran Malik) ಭಾರತ ಪರ ಪದಾರ್ಪಣೆ ಮಾಡುವ ಅವಕಾಶ ಸಿಗದಿರಲು ಕಾರಣರಾಗಿದ್ದಾರೆ. ಹೀಗಂತ ಹೇಳಿರುವುದು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ (Mohammad Kaif).

22 ವರ್ಷದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಶರವೇಗದ ಬೌಲಿಂಗ್”ಗೆ ಹೆಸರಾಗಿದ್ದಾರೆ. ಐಪಿಎಲ್’ನಲ್ಲಿ ಗಂಟೆಗೆ 150+ ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದ ಉಮ್ರಾನ್, ಅದೇ ಪ್ರದರ್ಶನದ ಮಾನದಂಡದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರು. ಆದರೆ ಆಡಿದ ಐದೂ ಪಂದ್ಯಗಳಲ್ಲಿ ಉಮ್ರಾನ್ ಮಲಿಕ್”ಗೆ ಅವಕಾಶ ಸಿಕ್ಕಿರಲಿಲ್ಲ. ಐದೂ ಪಂದ್ಯಗಳಲ್ಲಿ ಮಲಿಕ್”ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಗದಿರಲು ಕಾರಣವೇನು ಎಂಬುದನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿವರಿಸಿದ್ದಾರೆ.

“ಒಂದಲ್ಲ ಒಂದು ದಿನ ಉಮ್ರಾನ್ ಮಲಿಕ್ ಭಾರತ ಪರ ಆಡುವುದನ್ನು ನೋಡಲು ಬಯಸುತ್ತೇನೆ. ಆದರೆ ಆ ವಿಚಾರದಲ್ಲಿ ನನಗೆ ಅವಸರವಿಲ್ಲ. ಆತ ಡಗೌಟ್’ನಲ್ಲಿ ಕುಳಿತು ಆಟವನ್ನು ಹೊರಗಿನಿಂದ ನೋಡುವಂತೆ ಮಾಡುವುದು ದ್ರಾವಿಡ್ ಅವರ ತಂತ್ರಗಾರಿಕೆ. ಆ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಆತನಿಗೆ ದ್ರಾವಿಡ್ ಅನುವು ಮಾಡಿಕೊಟ್ಟಿದ್ದಾರೆ. ಆತನ ಬೌಲಿಂಗ್”ನಲ್ಲಿ ವೇಗವಿದೆ, ಆತ ದೈಹಿಕವಾಗಿ ಬಲಿಷ್ಠನಾಗಿದ್ದಾನೆ. ಉತ್ತಮ ಫಾರ್ಮ್”ನಲ್ಲಿದ್ದಾನೆ. ಆತ ಭಾರತ ಪರ ಆಡುವುದನ್ನು ನೋಡಲು ನಾನಷ್ಟೇ ಅಲ್ಲ, ಇಡೀ ದೇಶವೇ ಕಾಯುತ್ತಿದೆ.
ಮೊಹಮ್ಮದ್ ಕೈಫ್, ಮಾಜಿ ಕ್ರಿಕೆಟಿಗ.

ಇದನ್ನೂ ಓದಿ : Rahul Dravid : ಆ ಆಟಗಾರನ ಪರ ನಿಂತಿದ್ದಕ್ಕೆ ಕೋಚ್ ದ್ರಾವಿಡ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ

ಇದನ್ನೂ ಓದಿ : Coach Rahul Dravid : ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಕೋಚ್ ದ್ರಾವಿಡ್

Dravid is the reason why Umran Malik didn’t get chance

Comments are closed.