Guidelines announced for Ganesh festival :ಪಿಓಪಿ ಗಣೇಶ್, ಪ್ಲ್ಯಾಸ್ಟಿಕ್ ಬ್ಯಾನ್, ನಿಯಮ ಉಲ್ಲಂಘಿಸಿದ್ರೆ ಕ್ರಿಮಿನಲ್‌ ಕೇಸ್‌ : ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : (Guidelines announced for Ganesh festival) ರಾಜ್ಯದಲ್ಲಿ ಸದ್ಯ ಗಣೇಶೋತ್ಸವ ಭಾರಿ ಸದ್ದು ಮಾಡ್ತಿದೆ. ಈದ್ಘಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ, ಗಣೇಶೋತ್ಸವ ಪೆಂಡಾಲ್ ನಲ್ಲಿ ವೀರ ಸಾವರ್ಕರ್ ಭಾವಚಿತ್ರ ಸ್ಥಾಪನೆ ಸೇರಿದಂತೆ ಹಲವು ವಿಚಾರಕ್ಕೆ ಗಣೇಶೋತ್ಸವ ವಿವಾದಕ್ಕೆ ಕಾರಣವಾಗೋ ಮುನ್ಸೂಚನೆ ನೀಡಿದೆ.‌ ಇದೆಲ್ಲದರ ಮಧ್ಯೆ ಬೆಂಗಳೂರು ಮಹಾನಗರ ಪಾಲಿಕೆ ಗಣೇಶೋತ್ಸವಕ್ಕೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ನಿಯಮ ಉಲ್ಲಂಘಿಸಿದ್ರೇ ಕ್ರಿಮಿನಲ್ ಮೊಕದ್ದಮೆ ದಾಖಲಿಸೋದಾಗಿ ಎಚ್ಚರಿಸಿದೆ. ನಗರದಲ್ಲಿ ನಿಧಾನಕ್ಕೆ ಸಾರ್ವಜನಿಕ ಗಣೇಶೋತ್ಸವದ ಸಿದ್ಧತೆಗಳು ಆರಂಭವಾಗಿದೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದಲೂ ಗೈಡ್ ಲೈನ್ಸ್ ಬಿಡುಗಡೆಯಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಂದ ಅಧಿಕೃತ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು, ಸರ್ಕಾರದ ಸೂಚನೆಯಂತೆ ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಅನುಮತಿ ಪಡೆಯಲು ಬಿಬಿಎಂಪಿಯ 8 ವಲಯಗಳಲ್ಲಿ ಬರೋಬ್ಬರಿ 63 ಏಕಗವಾಕ್ಷಿ( ಸಿಂಗಲ್ ವಿಂಡೋ) ವ್ಯವಸ್ಥೆ ಆರಂಭಿಸಲು ಸೂಚಿಸಿದೆ. ಸರ್ಕಾರದ ಆದೇಶದಂತೆ ಬಿಬಿಎಂಪಿ 63 ಸಿಂಗಲ್ ವಿಂಡೋ ಕೇಂದ್ರಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

ಈ ಮಧ್ಯೆ ಗಣೇಶೋತ್ಸವಕ್ಕೆ ಬಿಬಿಎಂಪಿ ರೂಪಿಸಿರುವ ನಿಯಮಗಳು ಏನೇನು ಅನ್ನೋದನ್ನು ಗಮನಿಸೋದಾದರೇ,

  • ಸ್ಥಾಪಿಸುವ ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು.
  • ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಈ ಬಾರಿಯೂ ಬ್ಯಾನ್
  • ನಿಷೇಧಿತ ಗಣೇಶನ ಮೂರ್ತಿ ಬಳಸಿದರೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ
  • ಗಣೇಶಮೂರ್ತಿ ತಯಾರಿಸುವವರು ಪರಿಸರ ಸ್ನೇಹಿ ಮೂರ್ತಿಯನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು
  • ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಲು ವ್ಯವಸ್ಥೆ ಮಾಡುವುದು
  • ಬಕೆಟ್, ಡ್ರಮ್ ಮುಂತಾದವುಗಳಿಗೆ ವಿಸರ್ಜಿಸುವುದು
  • ದೊಡ್ಡ ಗಾತ್ರದ ಗಣೇಶನ ಮೂರ್ತಿ ವಿಸರ್ಜನೆಯನ್ನು ಪಾಲಿಕೆ‌ ಗುರುತಿಸುವ ಜಾಗದಲ್ಲೇ/ಕಲ್ಯಾಣಿಯಲ್ಲೇ ಮಾಡುವುದು ಕಡ್ಡಾಯ
  • ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ, ಕೆರೆಗಳಲ್ಲಿ ಬಿಬಿಎಂಪಿ ವತಿಯಿಂದಲೇ ನುರಿತ ಈಜುಗಾರರು ಹಾಗೂ NDRF ತಂಡ ನೇಮಕ
  • ಗಣೇಶೋತ್ಸವ ಸುಸೂತ್ರವಾಗಿ ನಡೆಯಲು ಬಿಬಿಎಂಪಿಯಿಂದಲೇ ವಾರ್ಡ್ ಗೆ ಒಬ್ಬರಂತೆ ನೋಡಲ್ ಅಧಿಕಾರಿಯ ನೇಮಕ
  • ಗಣೇಶೋತ್ಸವ ಆಚರಣೆ ವೇಳೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ

ಇನ್ನು ಬಿಬಿಎಂಪಿ, ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳು ಸೇರಿದಂತೆ ಸಮಿತಿ ರಚನೆ ಮಾಡಲಾಗಿದ್ದು, ಒಟ್ಟು ನಗರದ 63 ಕಡೆಗಳಲ್ಲಿ ಏಕಗವಾಕ್ಷಿ ಸಮಿತಿ ರಚಿಸಿದ ಬಿಬಿಎಂಪಿ ಎಲ್ಲಾ ಸಮಿತಿಯಲ್ಲೂ ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಬೆಸ್ಕಾಂ ಸಿಬ್ಬಂದಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ : Namma Metro prepaid Auto : ಪ್ರಯಾಣಿಕರ ಸಹಾಯಕ್ಕೆ ನಮ್ಮ ಮೆಟ್ರೋ ಪ್ಲ್ಯಾನ್ : ಸದ್ಯದಲ್ಲೇ ಆರಂಭವಾಗಲಿದೆ ಫ್ರೀಪೇಯ್ಡ್ ಅಟೋ ಸಂಚಾರ

ಇದನ್ನೂ ಓದಿ : first steel bridge : 108 ವಿಘ್ನದ ಬಳಿಕ ರಾಜ್ಯದ ಮೊದಲ ಸ್ಟೀಲ್ ಬ್ರಿಡ್ಜ್ ನಲ್ಲಿ ಏಕಮುಖ ಸಂಚಾರ ಆರಂಭ

POP Ganesh plastic ban criminal case if rules are violated Guidelines announced for Ganesh festival

Comments are closed.