ಪಾಸ್ ಪೋರ್ಟ್ ಅಥಾರಿಟಿ ಕೈಯಲ್ಲಿ ಪ್ರಜ್ವಲ್ ಭವಿಷ್ಯ: ವಿದೇಶದಲ್ಲೇ ಅರೇಸ್ಟ್ ಆಗ್ತಾರಾ ಜೆಡಿಎಸ್ ಸಂಸದ

Prajwal Revanna Passport Cancel : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಪ್ರಕರಣದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ತಮ್ಮ‌ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಕೇವಲ ಎಸ್ಐಟಿ ಮಾತ್ರವಲ್ಲ ದೇಶವೇ ಸಮರ ಸಾರಿದ್ದು,

Prajwal Revanna Passport Cancel : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಪ್ರಕರಣದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ತಮ್ಮ‌ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಕೇವಲ ಎಸ್ಐಟಿ ಮಾತ್ರವಲ್ಲ ದೇಶವೇ ಸಮರ ಸಾರಿದ್ದು, ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದುಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಹಾಗಿದ್ದರೇ, ಪಾಸ್ ಪೋರ್ಟ್ (Passport) ‌ರದ್ದುಗೊಳಿಸುವ ಪ್ರಕ್ರಿಯೆ ಹೇಗಿರುತ್ತೆ, ಪಾಸ್ ಪೋರ್ಟ್ ರದ್ದಿನ ಬಳಿಕ ಏನಾಗುತ್ತೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

Prajwal Revanna Passport Cancel Passport Authority JDS MP arrest in abroad
Image Credit to Original Source

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದು ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ‌ತಂಡ ಎಸ್ಐಟಿ (SIT) ರಚನೆ ಮಾಡಿದೆ. ಈ ತನಿಖಾ ತಂಡಗಳು ಈಗಾಗಲೇ ಸಂತ್ರಸ್ಥೆಯರ ವಿಚಾರಣೆ ನಡೆಸಿದ್ದು, ಅವರಿಂದ ಪ್ರಜ್ವಲ್ ರೇವಣ್ಣ ನಡೆಸಿದ ದೌರ್ಜನ್ಯ,ಬೆದರಿಕೆ ಹಾಗೂ ಬ್ಲಾಕ್‌ಮೇಲ್ ನ ಮಾಹಿತಿ ಪಡೆದಿದ್ದು ಚಾರ್ಜಶೀಟ್ (Chargesheet) ಸಲ್ಲಿಕೆಗೆ ಸಿದ್ಧತೆ ನಡೆಸಿದೆ.

ಈ‌ ಮಧ್ಯೆ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕಾಗಿರೋ ಆರೋಪಿ ಪ್ರಜ್ವಲ್ ರೇವಣ್ಣನೇ ತಲೆಮರೆಸಿಕೊಂಡಿರೋದು ತನಿಖಾ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ಹೈಪ್ರೊಫೈಲ್ ಕೇಸ್ ಆಗಿರೋದರಿಂದ ಸ್ವತಂತ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲು ಎಸ್ಐಟಿ ಪರದಾಡುತ್ತಿದೆ.

ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿರೋದರಿಂದ ಅವನನ್ನು ಕರೆಸಲು ಎಸ್ಐಟಿ ಸರ್ಕಾರದ ಮೊರೆ ಹೋಗಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರೋ ಕಾಂಗ್ರೆಸ್ ಮಾಜಿಪ್ರಧಾನಿ ದೇವೇಗೌಡ (HD Deve Gowda) ರ ಕುಟುಂಬದ ತೇಜೋವಧೆಗೆ ವಿರುದ್ಧ ಸಿಗೋ ಒಂದು ಅವಕಾಶವನ್ನು ಬಿಡಲು ಸಿದ್ಧವಿಲ್ಲದಂತೆ ತನಿಖಾಸ್ತ್ರ ಬಳಕೆಗೆ ಸಿದ್ಧವಾಗಿದೆ.

ಇದನ್ನೂ ಓದಿ : Prajwal Revanna : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಡಿಕೆ‌ ಶಿವಕುಮಾರ್‌ ಪ್ಲ್ಯಾನ್: ದೇವರಾಜೇಗೌಡ ಸ್ಪೋಟಕ ಹೇಳಿಕೆ

ಹೀಗಾಗಿ ಶತಾಯ ಗತಾಯ ಸಂಸದ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲೇಬೇಕೆಂದು ನಿರ್ಧರಿಸಿರೋ ರಾಜ್ಯ ಸರ್ಕಾರ ಪ್ರಕರಣ ಮುಂದಿಟ್ಟುಕೊಂಡು ಪ್ರಜ್ವಲ್ ರನ್ನು ದೇಶಕ್ಕೆ ಕರೆಸಲು ಮುಂದಾಗುವಂತೆ ರೇವಣ್ಣ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರ ಹಾಗೂ ಸಿಎಂ ಬರೆದಿರೋ ಪತ್ರ ಆಧರಿಸಿ ಸದ್ಯ ಕೇಂದ್ರ ವಿದೇಶಾಂಗ ಇಲಾಖೆ ಸಂಸದ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪ್ರಕರಣದ ತನಿಖೆಗೆ ಹಾಜರಾಗುವಂತೆ ನಾವು ನೊಟೀಸ್ ನೀಡಿದ್ದೇವೆ. ಬ್ಲೂ ಕಾರ್ನರ್ ನೊಟೀಸ್ ಕೂಡ ಹೊರಡಿಸಲಾಗಿದೆ.

Prajwal Revanna Passport Cancel Passport Authority JDS MP arrest in abroad
Image Credit to Original Source

ಆದರೂ ಇದಕ್ಕೆ ಪ್ರಜ್ವಲ್ ರೇವಣ್ಣ ಸ್ಪಂದಿಸಿಲ್ಲ. ಹೀಗಾಗಿ ತನಿಖೆಗೆ ಅಗತ್ಯವಾಗಿರುವ ಆರೋಪಿ ಬಂಧನಕ್ಕೆ ಅವಕಾಶ ಮಾಡಿಕೊಡಿ ಎಂದು ದಾಖಲೆಗಳ ಸಮೇತ ಎಸ್ ಐಟಿ ಪತ್ರ ಬರೆದಿತ್ತು. ಇದೆಲ್ಲವನ್ನು ಆಧರಿಸಿ ಈಗ ವಿದೇಶಾಂಗ ಇಲಾಖೆಯಿಂದ ಪ್ರಕ್ರಿಯೆ ಆರಂಭವಾಗಿದೆ. ಪಾಸ್ ಪೋರ್ಟ್ ಅಥಾರಿಟಿ ಅಫ್ ಇಂಡಿಯಾ ಭಾರತೀಯ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತೆ. ಈಗ ಪಾಸ್ ಪೋರ್ಟ್ ರದ್ದಿಗೆ ಈ ಎಸ್ ಐ ಟಿಯಿಂದ ಬಂದಿರುವ ಪತ್ರವನ್ನ ಧೃಡಿಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ಪಾಸ್ ಪೋರ್ಟ್ ಅಥಾರಿಟಿ ರವಾನೆ ಮಾಡುತ್ತೆ.

ಇದನ್ನೂ ಓದಿ : ಅವಧಿಗೂ ಮುನ್ನ ಶಾಲಾರಂಭ: ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳ ಹಕ್ಕು ಆಯೋಗದಿಂದ ಶಾಕ್

ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ್ರೆ ಪಾಸ್ ಪೋರ್ಟ್ ನ್ನು ಭಾರತೀಯ ವಿದೇಶಾಂಗ ಇಲಾಖೆ ರದ್ದು ಮಾಡುತ್ತದೆ. ಅಲ್ಲದೇ ಯಾವ ವ್ಯಕ್ತಿಯ ಪಾಸ್ ಪೋರ್ಟ್ ರದ್ದಾಗಿದೆಯೋ ಆ ವ್ಯಕ್ತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಾಸ್ ಪೋರ್ಟ್ ಅಥಾರಿಟಿ ಎಲ್ಲ ದೇಶಗಳ ಇಮಿಗ್ರೇಷನ್ ಗೂ ರವಾನೆಮಾಡುತ್ತದೆ. ಆಗ ಎಲ್ಲ ದೇಶದ ಇಮಿಗ್ರೇಶನ್ ಪ್ರಜ್ವಲ್ ಮಾಹಿತಿ ಸಂಗ್ರಹಿಸಿ ದೇಶದಿಂದ ಹೊರಕ್ಕೆ ಕಳಿಸುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಒಂದೊಮ್ಮೆ ಪಾಸ್ ಪೋರ್ಟ್ ರದ್ದಾದರೇ,ಪ್ರಜ್ವಲ್ ರೇವಣ್ಣ ಬರಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವೇ ಯಾವ ದೇಶದಲ್ಲಿದ್ದಾರೂ ಅದೇ ದೇಶದ ಪೊಲೀಸ್ ಅಥವಾ ಭದ್ರತಾ ವ್ಯವಸ್ಥೆ ಪ್ರಜ್ವಲ್ ರನ್ನು ಹಿಡಿದು ಭಾರತಕ್ಕೆ ಒಪ್ಪಿಸಿದರೂ ಒಪ್ಪಿಸಬಹುದು.

ಇದನ್ನೂ ಓದಿ : ನವಯುಗ ಟೋಲ್ ಹಗಲು ದರೋಡೆ: ಸರ್ವೀಸ್ ರೋಡ್ ನಲ್ಲೂ ಶುಲ್ಕ ಪಡಿತೀರೋ ಆರೋಪ

Prajwal Revanna Passport Cancel Passport Authority JDS MP arrest in abroad

Comments are closed.