ನವಯುಗ ಟೋಲ್ ಹಗಲು ದರೋಡೆ: ಸರ್ವೀಸ್ ರೋಡ್ ನಲ್ಲೂ ಶುಲ್ಕ ಪಡಿತೀರೋ ಆರೋಪ

Navayuga toll daylight robbery : ಸುವ್ಯವಸ್ಥಿತ ರಸ್ತೆಗಳನ್ನು ಒದಗಿಸೋ ಹೆದ್ದಾರಿ ಪ್ರಾಧಿಕಾರ ಅದರ ನಿರ್ವಹಣೆಗಾಗಿ ಹೆದ್ದಾರಿ ಶುಲ್ಕವನ್ನು ವಾಹನಗಳಿಂದ ವಸೂಲಿ ಮಾಡೋದು ಸಹಜ. ಅದಕ್ಕಾಗಿಯೇ ಟೋಲ್ (Toll) ಸಂಗ್ರಹಿಸಲಾಗುತ್ತದೆ.

Navayuga toll daylight robbery : ಸುವ್ಯವಸ್ಥಿತ ರಸ್ತೆಗಳನ್ನು ಒದಗಿಸೋ ಹೆದ್ದಾರಿ ಪ್ರಾಧಿಕಾರ ಅದರ ನಿರ್ವಹಣೆಗಾಗಿ ಹೆದ್ದಾರಿ ಶುಲ್ಕವನ್ನು ವಾಹನಗಳಿಂದ ವಸೂಲಿ ಮಾಡೋದು ಸಹಜ. ಅದಕ್ಕಾಗಿಯೇ ಟೋಲ್ (Toll) ಸಂಗ್ರಹಿಸಲಾಗುತ್ತದೆ. ಆದರೆ ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಮಾತ್ರ ಟೋಲ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಟೋಲ್ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡ್ತಿದ್ದಾರೆ ಅನ್ನೋ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

Navayuga toll daylight robbery Bangalore to Tumkur toll Allegation of tolling on service road as well
Image Credit to Original Source

ಹೌದು ಸೋಷಿಯಲ್ ಮೀಡಿಯಾದಲ್ಲಿ ತುಮಕೂರಿಗೆ ತುಮಕೂರು ರಸ್ತೆಯಲ್ಲಿ ಹೋಗೋ ವಾಹನ ಸವಾರರೇ ಎಚ್ಚರ ಎಚ್ಚರ…! ಅನ್ನೋ ಅವಾರ್ನೆಸ್ ಟ್ರೋಲ್ ಮತ್ತು ಪೋಸ್ಟ್ ಗಳು ಹೆಚ್ಚಾಗಿವೆ. ಇದಕ್ಕೆ ಕಾರಣ ಏನು ಅನ್ನೋದನ್ನು ಹುಡುಕಿದರೇ ಗೊತ್ತಾಗ್ತಿರೋದು ನವಯುಗ ಟೋಲ್ ಪ್ಲಾಜಾದಲ್ಲಿ ಹಗಲು ದರೋಡೆ.

ಸಾಮಾನ್ಯವಾಗಿ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸರ್ವೀಸ್ ರಸ್ತೆ ಸಾಮಾನ್ಯವಾಗಿರುತ್ತದೆ. ಸ್ಥಳೀಯರು, ಪಟ್ಟಣ, ಪೇಟೆ ಗಳಿಗೆ ಓಡಾಡುವವರು ಈ ಸರ್ವೀಸ್ ರಸ್ತೆಯನ್ನು ಬಳಸುತ್ತಾರೆ. ಅಲ್ಲದೇ ಎಲ್ಲ ಹೆದ್ದಾರಿಗಳ ಟೋಲ್ ಗಳಿಗೆ ಹೊಂದಿಕೊಂಡಿರೋ ಗ್ರಾಮದ ಜನರು ತಮ್ಮ ದಿನನಿತ್ಯದ ಓಡಾಟಕ್ಕೆ ಟೋಲ್ ಬಳಸೋ ಬದಲು ಈ ಸರ್ವೀಸ್ ರಸ್ತೆಯನ್ನು ಆಯ್ದುಕೊಳ್ಳೋದು ಕಾಮನ್. ಇದಕ್ಕಾಗಿ ಅವರು ಹಣ ಕಟ್ಟುವ ಅಗತ್ಯವಿಲ್ಲ.

ಇದನ್ನೂ ಓದಿ : Tinton Adventure Resort : ಪ್ರವಾಸಿಗರ ಪಾಲಿನ ಸ್ವರ್ಗ ಗೋಳಿಯಂಗಡಿಯ ಟಿಂಟನ್‌ ಅಡ್ವೆಂಚರ್ ರೆಸಾರ್ಟ್

ಅದರೆ ನೆಲಮಂಗಲದ‌ ನವಯುಗ ಟೋಲ್‌ನಲ್ಲಿ ಸರ್ವೀಸ್ ರಸ್ತೆಯಲ್ಲಿ ಹೋದ್ರೆ ದುಡ್ಡು ಕಟ್ಟಬೇಕು. ಟೋಲ್ ಕಾರಣಕ್ಕೆ ಸರ್ವಿಸ್ ರಸ್ತೆಯಲ್ಲಿ ಹೋದ್ರು ರೋಡ್ ಫೀ ಕಟ್ಟೋದು ತಪ್ಪುತ್ತಿಲ್ಲ. ಸರ್ವಿಸ್ ರಸ್ತೆಯಲ್ಲಿ ವಾಹನ ಹೋದ್ರೆ ದುಡ್ಡು ಕಟ್ ಆಗ್ತಿದ್ದು , ಫಾಸ್ಟ್ ಟ್ಯಾಗ್ ಮೂಲಕ 30 ರೂ. ಕಟ್ ಆದ ಸಂದೇಶ ರವಾನೆ ಬರ್ತಿರೋದರಿಂದ ಸ್ಥಳೀಯ ವಾಹನ ಸವಾರರು ಕಂಗಾಲಾಗಿದ್ದಾರೆ.

ತುಮಕೂರು ಟು ಬೆಂಗಳೂರು ಕಡೆ ಬರುವವರಿಗೆ ಟೋಲ್ ತಲೆನೋವಾಗಿ ಪರಿಣಮಿಸಿದೆ. ನಿಯಮದ ಪ್ರಕಾರ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಟೋಲ್ ಕಟ್ಟುವಂತಿಲ್ಲ.ಆದರೆ ನವಯುಗ ಅಂಚೆಪಾಳ್ಯ ಸರ್ವಿಸ್ ರಸ್ತೆಯಲ್ಲಿ ಟೋಲ್ ಶುಲ್ಕ ವಸೂಲಿಯಾಗ್ತಿದೆ. ಸ್ಥಳೀಯರಿಗೆ ಟೋಲ್ ಫ್ರೀ ಎಂದಿದ್ದರೂ ಹಣ ಕಟ್ ಆಗ್ತಿದೆ ಅನ್ನೋದು ದಿನಕ್ಕೆ ನಾಲ್ಕಾರು ಭಾರಿ ಈ ಟೋಲ್ ಬಳಸಿ ಓಡಾಡುವ ವಾಹನ ಸವಾರರ ನೋವು.

Navayuga toll daylight robbery Bangalore to Tumkur toll Allegation of tolling on service road as well
Image Credit to Original Source

ಬೆಂಗಳೂರಿನಿಂದ ತುಮಕೂರು ಕಡೆ ಹೋಗುವ ಸರ್ವಿಸ್ ರಸ್ತೆಯಲ್ಲಿಯೂ ಇದೇ ಸಮಸ್ಯೆಯಾಗಿದ್ದು,ಸೈಡ್ ಲ್ಲಿ ಸರ್ವಿಸ್ ರಸ್ತೆ ಹೋಗೋ ವಾಹನಗಳ ಸ್ಕ್ಯಾನ್ ಆಗಿ ದುಡ್ಡು ಕಟ್ ಆಗ್ತಿದೆ. ಆದರೆ ಇದಕ್ಕೆ ಟೋಲ್ ಸಿಬ್ಬಂದಿ ಸರಿಯಾಗಿ ಉತ್ತರ ಕೊಡ್ತಿಲ್ಲ. ಈ ರೀತಿ ಸರ್ವೀಸ್ ರಸ್ತೆಗೂ ಟೋಲ್ ಹಣ ಕಟ್ ಆಗ್ತಿರೋದರಿಂದ ಸ್ಥಳೀಯರಿಗೆ ದಿನನಿತ್ಯದ ಬಳಕೆಗೆ ಈ ರಸ್ತೆಯನ್ನು ಬಳಸೋದು ತಲೆನೋವಾಗಿ ಪರಣಮಿಸಿದೆ. ದಿನಕ್ಕೆ ನಾಲ್ಕಾರು ಭಾರಿ ಮೂವತ್ತು ರೂಪಾಯಿ ತೆತ್ತು ಓಡಾಡೋದು ಹೇಗೆ? ಈ ಹಗಲು ದರೋಡೆ ತಡೆಯೋದ್ಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : ಅವಧಿಗೂ ಮುನ್ನ ಶಾಲಾರಂಭ: ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳ ಹಕ್ಕು ಆಯೋಗದಿಂದ ಶಾಕ್

ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಈ ದರೋಡೆ ಬಗ್ಗೆ ಪೋಸ್ಟ್ ಗಳು ವೈರಲ್ ಆಗಿದ್ದು, ಜನರು ತಮಗೆ ದುಡ್ಡು ಕಟ್ ಆದ ಮೆಸೆಜ್ ಗಳ ಜೊತೆ ಪೋಸ್ಟ್ ಹಾಕಿ ಈ ನ್ಯಾಯ ಕೇಳ್ತಿದ್ದಾರೆ. ಇದಕ್ಕೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಅಥವಾ ಸಂಬಂಧಿಸಿದ ಇಲಾಖೆಯ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

Navayuga toll daylight robbery Bangalore to Tumkur toll Allegation of tolling on service road as well

Comments are closed.