Block Azan : ಏಪ್ರಿಲ್ 13 ರೊಳಗೆ ಮಸೀದಿ ಧ್ವನಿವರ್ಧಕಕ್ಕೆ ಬ್ರೇಕ್ ಹಾಕಿ : ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲು

ಬೆಂಗಳೂರು : ರಾಜ್ಯದಲ್ಲಿ ಸದ್ಯ ಕೋಮು ಸೌಹಾರ್ದತೆ ಬೆಳೆಸುವ ಪ್ರಯತ್ನ ವ್ಯರ್ಥವೇ ಎಂಬಂತ ಸ್ಥಿತಿ ನಿರ್ಮಾಣವಾಗಿದ್ದು, ಒಂದಾದ ಮೇಲೊಂದರಂತೆ ವಿವಾದಗಳು ಬಲಗೊಳ್ಳುತ್ತಲೇ ಇದೆ. ಹಿಜಾಬ್ ವಿವಾದ ತಾರ್ತಿಕ ಅಂತ್ಯಕಾಣುವ ಹೊತ್ತಿನಲ್ಲೇ ಹಲಾಲ್ ವಿವಾದ ಬಲಗೊಂಡಿದೆ. ಇನ್ನೇನು ಹಲಾಲ್ ತಣ್ಣಗಾಗುತ್ತಿದೆ ಎನ್ನುವಾಗ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಬೇಕೆನ್ನುವ ಒತ್ತಡ ಬಲಗೊಂಡಿದೆ. ಈ ಹೋರಾಟದಲ್ಲಿ ಒಂದು ಹೆಜ್ಜೆ ಮುಂದೇ ಹೋಗಿರುವ ಶ್ರೀರಾಮಸೇನೆ ಮಸೀದಿ ಮೈಕ್ (Block Azan ) ನಿಷೇಧಕ್ಕೆ ಸರಕಾರಕ್ಕೆ ಕಾಲಾವಕಾಶ ನೀಡಿದೆ.

ರಾಜ್ಯದಲ್ಲಿ ಮಸೀದಿಗಳ ಧ್ವನಿವರ್ಧಕದ ಮೇಲೆ ನಿರ್ಬಂಧ ಹೇರಲು ಒತ್ತಾಯಿಸಿ ಶ್ರೀರಾಮಸೇನೆ ಸರ್ಕಾರಕ್ಕೆ ಮನವಿ ನೀಡಿದೆ.‌ಮಾತ್ರವಲ್ಲ ಮಸೀದಿಗಳ ಧ್ವನಿವರ್ಧಕದಿಂದ ಅತಿಯಾದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ತಕ್ಷಣ ಮಸೀದಿಗಳಲ್ಲಿ ಮೈಕ್ ನಿರ್ಬಂಧಕ್ಕೆ ಕ್ರಮಕೈಗೊಳ್ಳಬೇಕು ಎಂದಿರುವ ಶ್ರೀರಾಮ ಸೇನೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 13 ರ ತನಕ ಗಡುವು ನೀಡಿದೆ.

ಸರ್ಕಾರ ಏಪ್ರಿಲ್ 13 ರ ಒಳಗೆ ರಾಜ್ಯದಲ್ಲಿ ಆಜಾನ್ ನಿಷೇದಕ್ಕೆ ಕ್ರಮಕೈಗೊಳದೇ ಇದ್ದಲ್ಲಿ ಏಪ್ರಿಲ್ 14 ರಿಂದ ರಾಜ್ಯದಲ್ಲಿ ಉಗ್ರ ಹೋರಾಟ ‌ಮಾಡೋದಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಅಲ್ಲದೇ ಏಪ್ರಿಲ್ 14 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಆಜಾನ್ ನಿಷೇಧಿಸುವಂತೆ ಒತ್ತಡ ಹೇರಲಾಗುವುದು ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಸಿಂಗಸ್ವಾಮಿ ಹೇಳಿದ್ದಾರೆ.

ಮಸೀದಿ ಗಳಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಹಚ್ಚುವಂತಿಲ್ಲ ಎಂದು ಆದೇಶಿಸಲಾಗಿದೆ. ಹೀಗಿದ್ದರೂ ಮುಸ್ಲಿಂ ಮರು ಮಸೀದಿಗಳಲ್ಲಿ ಮೈಕ್ ಬಳಸುತ್ತಾರೆ. ಇನ್ನಾದರೂ ಮಸೀದಿಗಳಲ್ಲಿ ಮೈಕ್ ಬಳಕೆ ನಿಯಂತ್ರಿಸಬೇಕು.‌ ನ್ಯಾಯಾಲಯದ ಆದೇಶ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಬಹುತೇಕ ಮಸೀದಿಗಳು ಮೈಕ್ ಬಳಕೆಗೆ ಅನುಮತಿ ಪಡೆದಿಲ್ಲ. ಇದೆಲ್ಲವನ್ನೂ ಸರ್ಕಾರ ಗಮನಿಸಬೇಕು ಹಾಗೂ ನಿಯಂತ್ರಿಸಬೇಕು ಎಂದು ಶ್ರೀರಾಮಸೇನೆ ಒತ್ತಾಯಿಸಿದೆ‌

ಆದರೆ‌ ಸದ್ಯ ಈ ನಿಯಮ‌ಜಾರಿಗೆ ತರಲು ಸರ್ಕಾರ ಪ್ರಯತ್ನ ನಡೆಸೋದು ಅನುಮಾನ ಎನ್ನಲಾಗುತ್ತಿದ್ದು, ಚುನಾವಣೆ ಹಾಗೂ ಮತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಸೀದಿಗಳ ಧ್ವನಿವರ್ಧಕದ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸದೇ ಇರುವ ಸಾಧ್ಯತೆ ಇದೆ. ಆದರೂ ಶ್ರೀರಾಮಸೇನೆ ಮಾತ್ರ ಮಸೀದಿ ಮೈಕ್ ವಿರುದ್ಧ ತನ್ನ ಸಮರ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಬೆಲ್ಲ! ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ಇದನ್ನೂ ಓದಿ : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

Pramod Muthalik has given deadline to Karnataka government till April 13 to Block Azan

Comments are closed.