DA For State Govt Employees : ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಬೆಲ್ಲ! ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಯುಗಾದಿ ನಂತರ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಹು ದಿನಗಳ ಬೇಡಿಕೆ, ಒತ್ತಾಯದ ಫಲಶೃತಿ ಎಂಬಂತೆ ಜನವರಿ 1, 2022ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2.75ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ(DA For State Govt Employees ). ಇದಕ್ಕಾಗಿ ಸರ್ಕಾರ ವಾರ್ಷಿಕವಾಗಿ 1447 ಕೋಟಿ ರೂ. ವೆಚ್ಚವನ್ನು ಭರಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.

ಹಿಂದಿನ ಮೂರು ಅವಧಿಯ ಲೆಕ್ಕಾಚಾರ ಮಾಡಿದರೆ ತುಟ್ಟಿಭತ್ಯೆಯ ಪ್ರಮಾಣ ಶೇ.11ರಷ್ಟು ಹೆಚ್ಚಾಗಿದೆ. ಅತಿ ಶೀಘ್ರದಲ್ಲಿ ತುಟ್ಟಿಭತ್ಯೆ ಹೆಚ್ಚಳದ ಆದೇಶವನ್ನು ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮಾರ್ಚ್ 30ರಂದು ತನ್ನ ನೌಕರರಿಗೆ ಶೇ.4ರಷ್ಟು ತುಟ್ಟಿ ಭತ್ಯೆ ಘೋಷಣೆ ಮಾಡಿತ್ತು. ಜುಲೈ 1, 2021ರಿಂದ ಅನ್ವಯವಾಗುವಂತೆ ಆದೇಶನೀಡಿತ್ತು. ಇದರಿಂದ ಕೇಂದ್ರ ಸರ್ಕಾರಕ್ಕೆ 9.5 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಕೇಂದ್ರ ಸರ್ಕಾರ ತುಟ್ಟಿಭತ್ಯೆ ಘೋಷಣೆ ಮಾಡಿದ ಒಂದೇ ವಾರದಲ್ಲಿ ರಾಜ್ಯಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಈ ಹಿಂದೆ ರಾಜ್ಯಸರ್ಕಾರ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರಬರೆಯುವ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಅಧಿವೇಶನದಲ್ಲಿ ಮಾತನಾಡಿದ ಸಿ.ಎಂ. ಬೊಮ್ಮಾಯಿ ಅವರು, ವೇತನ ಪರಿಷ್ಕರಣಾ ಸಮಿತಿ ರಚಿಸುವುದಾಗಿ ಭರವಸೆ ಕೂಡ ನೀಡಿದ್ದರು. ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸ್ಸಿನಿಂದಾಗಿ ಪ್ರತಿ ನೌಕಕರಿಗೆ ಸರಾಸರಿ 2ಲಕ್ಷಕ್ಕೂ ಹೆಚ್ಚು ಬಾಕಿಮೊತ್ತ ಸಿಗಲಿದೆ ಎಂದು ಅಂದಾಜಿಸಿ, ರಾಜ್ಯ ಸರ್ಕಾರ ಕೂಡ ಇಂಥದೇ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘ ಆಗ್ರಹಿಸಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ವಿಧಾನ ಮಂಡಲದ ಅಧಿವೇಶನದಲ್ಲಿ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದಾರೆ. ಈ ಬಗ್ಗೆ ಅಂತಿಮ ಆದೇಶವನ್ನು ಹೊರಡಿಸಲಾಗುವುದು ಎಂದು ಮಂಗಳವಾರ ಸಿ.ಎಂ. ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Hotel Food Price Hike : ಇಂದಿನಿಂದ ಹೊಟೇಲ್ ಬಲು ದುಬಾರಿ : ಊಟ, ತಿಂಡಿ ದರ ಶೇಕಡಾ 10 ರಷ್ಟು ಏರಿಕೆ

ಇದನ್ನೂ ಓದಿ: Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

(DA For State Govt Employees the state government has decided to do a hike DA from this new year)

Comments are closed.