Price Hike Fear : ಕೊರೋನಾ ಆಯ್ತು ಬೆಲೆ ಏರಿಕೆ ಗುಮ್ಮ: ಸುಡುತ್ತಿದೆ ತರಕಾರಿ, ಸಿಲಿಂಡರ್, ಐಟಂ ದರ

ಬೆಂಗಳೂರು : ಕೊರೋನಾ ಕರಿನೆರಳಿನಿಂದ ಹೊರಬಂದು ಹಬ್ಬ ಆಚರಿಸುತ್ತಿರೋ ಬಡ ಜನರಿಗೆ ಬೆಲೆ ಏರಿಕೆ (Price Hike Fear ) ಗುಮ್ಮ ಜೋರಾಗಿ ಕಾಡಲಾರಂಭಿಸಿದ್ದು, ಹಬ್ಬದ ಸಂಭ್ರಮದ ನಡುವೆ ಸಾಮಾನ್ಯನಿಗೆ ಬೆಲೆ ಏರಿಕೆ ಬರೆ ತಟ್ಟಿದೆ. ರೆಡಿಮೇಡ್ ಐಟಂನಿಂದ ಆರಂಭಿಸು ರೆಡಿ ಮಾಡಿ ಮಾರಾಟ ಮಾಡೋ ಐಟಂ ವರೆಗೂ ಎಲ್ಲವೋ ಗಗನಮುಖಿಯಾಗಿದೆ. ಕೊವೀಡ್ ಹೊಡೆತದ ಚೇತರಿಕೆ ಮುನ್ನವೆ ಬೆಲೆ ಏರಿಕೆ ಕಾಡಲಾರಂಭಿಸಿದ್ದು ಈ ಬಾರಿ ಯುಗಾದಿಗೆ ಬೆಲ್ಲದ ಸಿಹಿಗಿಂತ ಜನರಿಗೆ ಬೇವಿನ ಕಹಿಯೇ ಹೆಚ್ಚು ಕಾಡುತ್ತಿದೆ‌

ಪೆಟ್ರೋಲ್, ಕಮರ್ಷಿಯಲ್ ಸಿಲಿಂಡರ್, ಆಟೋ ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲವೋ ಅಳತೆ‌ ಮೀರಿ ಏರಿಕೆಯಾಗಿದೆ. ಮಾರ್ಚ್ 2 ರಿಂದ ಏಪ್ರಿಲ್ 2 ಎಷ್ಟಿತ್ತು ಬೆಲೆ ಎಷ್ಟಾಯ್ತು ಅನ್ನೋದನ್ನು ನೋಡೋದಾದರೇ,

Price Hike Fear After Corona Virus Effect

ಹೇಗಿದೆ ಬೆಲೆ ಏರಿಕೆಯ ಏಫೆಕ್ಟ್‌ (Price Hike Fear)

1. ಗೃಹ ಬಳಕೆ ಸಿಲಿಂಡರ್ ಬೆಲೆ
902- 950 / ಮಾರ್ಚ್ 2 ರಿಂದ ಏಪ್ರಿಲ್ 2 ರವರೆಗೆ 48 ರೂ. ಏರಿಕೆ.

2. ಕಮರ್ಷಿಯಲ್ ಸಿಲಿಂಡರ್ ಬೆಲೆ
2012-2253. / ಮಾರ್ಚ್ 2 ರಿಂದ ಏಪ್ರಿಲ್ 2 ರವರೆಗೆ 241 ರೂ ಜಾಸ್ತಿ ಆಗಿದೆ.

3.ಪೆಟ್ರೋಲ್ ಬೆಲೆ
1
00.56. – 107.28 / ಮಾರ್ಚ್ 2 ರಿಂದ ಏಪ್ರಿಲ್ 2 ರವರೆಗೆ 6.28 ಪೈಸಾ ಜಾಸ್ತಿಯಾಗಿದೆ.

4. ಡಿಸೇಲ್ ಬೆಲೆ
85.01 – 91.27 / ಮಾರ್ಚ್ 2 ರಿಂದ ಏಪ್ರಿಲ್ 2 ರವರೆಗೆ 6.26 ಪೈಸಾ ಏರಿಕೆಯಾಗಿದೆ.

Price Hike Fear After Corona Virus Effect

5.ಅಟೋ ಸಿಲಿಂಡರ್
ಮಾರ್ಚ್ ನಲ್ಲಿ 66 ರೂ ಕೆಜಿಗೆ – ಏಪ್ರಿಲ್ ನಲ್ಲಿ 74 ರೂ./ 8ರೂ ನಷ್ಟು ಏರಿಕೆ

6. ಅಡುಗೆ ಎಣ್ಣೆ 200 ರ ಗಡಿಯಲ್ಲಿ

  • ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ 175- 195. ರೂ.‌
  • ತಾಳೆ ಎಣ್ಣೆ 155 – 175 ರೂ.‌
  • ಕಡಲೆ ಎಣ್ಣೆ ಬೆಲೆ 165 – 190. ರೂ.
  • ಅಕ್ಕಿ ಹೊಟ್ಟು ಎಣ್ಣೆ 165 – 190 ರೂ.
Price Hike Fear After Corona Virus Effect

7. ಹೊಟೇಲ್ ದರ

  • ಮಸಾಲೆ ದೋಸೆ 60 ರಿಂದ 65 ರೂ.ಗೆ ಏರಿಕೆ
  • ಇಡ್ಲಿ, ವಡೆ 35 ರಿಂದ 40 ರೂ.ಗೆ ಏರಿಕೆ
  • ಕಾಫೀ, ಟೀ ಬೆಲೆ 10 ರಿಂದ 12 ರೂ.ಗೆ ಏರಿಕೆ
  • ಚೌಚೌ ಬಾತ್ 40 ರಿಂದ 45 ರೂ.ಗೆ ಏರಿಕೆ
  • ಸೌಥ್ ಇಂಡಿಯನ್ ಊಟ 70 ರಿಂದ 75 ರೂ. ಗೆ ಏರಿಕೆ
  • ರೈಸ್ ಬಾತ್ 35 ರಿಂದ 40 ರೂ.ಗೆ ಹೆಚ್ಚಳ
  • ರವಾ ಇಡ್ಲಿ 30 ರಿಂದ 40 ರೂ.ಗೆ ಏರಿಕೆ
  • ಅಕ್ಕಿ ರೊಟ್ಟಿ 35 ರಿಂದ 40 ರೂ.ಗೆ ಏರಿಕೆ
Price Hike Fear After Corona Virus Effect

ಇದರ ಸನಿಹದಲ್ಲೇ ಸಧ್ಯ ಹಾಲಿನ ದರವೂ ಏರಿಕೆಯಾಗಲಿದ್ದು ಬಡವರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಇದನ್ನೂ ಓದಿ : ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಆಗಿದೆಯಾ ? ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಇದನ್ನೂ ಓದಿ : ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ : ಎಷ್ಟಿದೆ ಗೊತ್ತಾ ಇಂದಿನ ದರ

Price Hike Fear After Corona Virus Effect

Comments are closed.