Stunning facility : ಹಲಾಲ್, ಜಟ್ಕಾ ನಡುವೆ ಹೊಸ ಆದೇಶ : ಇನ್ಮುಂದೇ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ

ಬೆಂಗಳೂರು : ರಾಜ್ಯದಲ್ಲಿ ಸದ್ಯ ಹಲಾಲ್‌ ಮತ್ತು ಜಟ್ಕಾ ಕಟ್ ನಡುವೆ ಫೈಟ್ ಜೋರಾಗಿದೆ. ತಿನ್ನುವ ಆಹಾರಕ್ಕೂ ಧರ್ಮದ ನಂಟು ಬೆಸೆಯಲಾಗಿದ್ದು, ಹಬ್ಬದ ಸಂಭ್ರಮದ ನಡುವೆ ಬಾಯ್ಕಾಟ್ ಹಲಾಲ್‌ಅಭಿಯಾನವೂ ಜೋರಾಗಿದೆ. ಈ ಮಧ್ಯೆ ಹಲಾಲ್, ಜಟ್ಕಾ ಕಟ್ ಯಾವುದೇ ಇದ್ದರೂ ನಿಯಮ ಉಲ್ಲಂಘಿಸುವ ಮಾಂಸ ಮಾರಾಟಗಾರರಿಗೆ ಈಗ ಪಶು ಸಂಗೋಪನಾ ಇಲಾಖೆ ಶಾಕ್‌ (Stunning facility) ನೀಡಿದೆ.

ಹೌದು ಇನ್ಮುಂದೆ ಪ್ರಾಣಿ ವಧೆಯನ್ನು ಹಿಂಸಾತ್ಮಕವಾಗಿ ಮಾಡುವಂತಿಲ್ಲ. ಇಂತಹದೊಂದು ಆದೇಶವನ್ನು ಪಶು ಸಂಗೋಪನಾ ಇಲಾಖೆ ಹೊರಡಿಸಿದೆ. ಇನ್ಮುಂದೆ ಪ್ರಾಣಿ ಆಹಾರಕ್ಕಾಗಿ ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಿದೆ. ಪ್ರಾಣಿಗೆ ಹಿಂಸೆ ಮಾಡದೇ ವಧೆ ಮಾಡೋದು ಹೇಗೆ ಅಂತ ನೀವು ಕನಪ್ಯೂಸ್ ಆದ್ರಾ. ಅಂದ್ರೇ‌ಪಶುಸಂಗೋಪನಾ ಇಲಾಖೆ‌‌ ಆದೇಶದ‌ ಪ್ರಕಾರ ಇನ್ಮುಂದೇ ಬೆಂಗಳೂರಿನಲ್ಲಿ ಪ್ರಾಣಿ ವಧೆಗೆ stunning ಕಡ್ಡಾಯ.

ಈ ಬಗ್ಗೆ ಪಶುಸಂಗೋಪನಾ‌ ಇಲಾಖೆ ಈಗಾಗಲೇ ಕೋಳಿ, ಕುರಿ ಅಂಗಡಿಗಳಿಗೆ ಸುತ್ತೋಲೆ ಹೊರಡಿಸಿದೆ.‌ ಹಾಗಿದ್ದರೇ‌ ಪಶುಸಂಗೋಪನಾ ಇಲಾಖೆ ಹೊರಡಿಸಿರೋ ಆದೇಶದ ಪ್ರಕಾರ Stunning ಎಂದರೆ ಎನು ಅನ್ನೋದನ್ನು ನೋಡೋದಾದರೇ, ಪ್ರಾಣಿಗಳನ್ನು ವಧೆ ಮಾಡೋ ಮೊದಲು ಪ್ರಜ್ಞೆ ತಪ್ಪಿಸುವ ವಿಧಾನ. ಹೌದು, ಆಹಾರಕ್ಕಾಗಿ ಯಾವುದೇ ಪ್ರಾಣಿಯನ್ನು ವಧಿಸುವ ಮೊದಲು ಅದಕ್ಕೆ ಹಿಂಸೆ ನೀಡುವಂತಿಲ್ಲ.‌ಬದಲಾಗಿ ಪ್ರಜ್ಞೆ ತಪ್ಪಿಸಿ ಅವುಗಳನ್ನು ವಧೆ ಮಾಡಬೇಕು. ಇದರಿಂದ ಪ್ರಾಣಿಗಳಿಗೆ ಸಾಯಿಸುವಾಗ‌ ನೋವು ತಿಳಿಯೋದಿಲ್ಲ.

ಎಲ್ಲಾ ಪ್ರಾಣಿವಧಾ ಸ್ಥಳಗಳಲ್ಲಿ ಇದೇ ನಿಯಮವಿದ್ದರೂ ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಪಶು ಸಂಗೋಪನಾ ಇಲಾಖೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರೋ ಪಶುಸಂಗೋಪನಾ ಇಲಾಖೆ ಇನ್ಮುಂದೆ ಕೋಳಿ ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ stunning facility ಕಡ್ಡಾಯ ಎಂದಿದೆ ಎಂದು ಇಲಾಖೆ ಅಧಿಕಾರಿ ಉಮಾಪತಿ ಮಾಹಿತಿ ನೀಡಿದ್ದಾರೆ.

ಅಲ್ಲದೇ Stunning facility ಇಲ್ಲದೆ ಹೋದರೆ ಪ್ರಾಣಿವಧಾ ಅಂಗಡಿಗಳಿಗೆ ಪರವಾನಗಿ ನೀಡಬಾರದು ಬಿಬಿಎಂಪಿಗೂ ಪಶುಸಂಗೋಪನಾ ಇಲಾಖೆ ಆದೇಶಿಸಿದೆ. ಅಲ್ಲದೇ 2001 ರ ಸೆಕ್ಷನ್ 6 ಮತ್ತು 4 ರ ಅಡಿಯಲ್ಲಿ stunning ನಿಯಮ ಇದೆ. ರೂಲ್ಸ್ ಬ್ರೇಕ್ ಮಾಡೋರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲು ನಿಯಮದಲ್ಲಿ ಅವಕಾಶವಿದೆ.

ಇದನ್ನೂ ಓದಿ : ಮುಗಿಯದ ಸಂಪುಟ ಸಂಕಟ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಕಹಿಯಾದ ಯುಗಾದಿ

ಇದನ್ನೂ ಓದಿ : ಲಕ್ಕಿಡಿಪ್ ಸಿಎಂ ಕುಮಾರಸ್ವಾಮಿ : ಎಚ್.ಡಿಕೆ. ಗೆ ಬಿಜೆಪಿ ಟ್ವೀಟ್ ಟಾಂಗ್

Stunning facility Compulsory in animal slaughter After Halal Jhatka Controversy

Comments are closed.