Nandini Products : ಗ್ರಾಹಕರಿಗೆ ಬಿಗ್‌ಶಾಕ್‌ : ನಾಳೆಯಿಂದ ನಂದಿನಿ ಉತ್ಪನ್ನಗಳ ದರ ಹೆಚ್ಚಳ

ಬೆಂಗಳೂರು : ರಾಜ್ಯದ ಜನತೆಗೆ ಕೆಎಂಎಫ್‌ ಬಿಗ್‌ ಶಾಕ್‌ ಕೊಟ್ಟಿದೆ. ಹಾಲಿನ ಉತ್ಪನಗಳ ದರ ಪರಿಷ್ಕರಣೆಯನ್ನು(Nandini Products) ಮಾಡಲಾಗುತ್ತಿದ್ದು, ಹಾಲು, ಮಜ್ಜಿಗೆ ಸೇರಿದಂತೆ ನಂದಿನಿಯ ಇತರ ಉತ್ಪನ್ನಗಳ ದರದಲ್ಲಿ ಏರಿಕೆಯಾಗಲಿದೆ ಎಂದು ಕೆಎಂಎಫ್‌ ತಿಳಿಸಿದೆ. ಕೇಂದ್ರ ಸರಕಾರ ಅಗತ್ಯ ವಸ್ತುಗಳ ದರದಲ್ಲಿ ಏರಿಕೆ ಯನ್ನು ಮಾಡಲಾಗುತ್ತಿದ್ದು, ಇದರ ಬೆನ್ನಲ್ಲೇ ಕೆಎಂಎಫ್‌ ಕೂಡ ಗ್ರಾಹಕರಿಗೆ ಶಾಕ್‌ ಕೊಡಲು ಸಜ್ಜಾಗಿದೆ. ಜುಲೈ 18 ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಈ ಕುರಿತು ಕೆಎಂಎಫ್‌ ಮಾಹಿತಿಯ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಈಗಾಗಲೇ ನಂದಿನಿ ಉತ್ಪನ್ನಗಳನ್ನು ಹಳೆಯ ದರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಹಳೆಯ ದಾಸ್ತಾನು ಮುಗಿಯುವವರೆಗೂ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್‌ ಹೇಳಿದೆ.

ಕೆಎಂಎಫ್‌ ಹೊಸ ದರ ಪರಿಷ್ಕರಣೆಯಿಂದಾಗಿ ಯಾವೆಲ್ಲಾ ಉತ್ಪನ್ನಗಳ ದರ ಎಷ್ಟಾಗಲಿವೆ ?

ಮೊಸರು
200 ಗ್ರಾಂ : ರೂ.10 ರಿಂದ 12 ರೂ.
500 ಗ್ರಾಂ : ರೂ.22 ರಿಂದ 24 ರೂ.
ಮಜ್ಜಿಗೆ
ಸ್ಯಾಚೆ 200 ಮಿಲಿ ರೂ.7 ರಿಂದ 8 ರೂ.
ಟೆಟ್ರಾ ಪ್ಯಾಕ್ 10ರೂ ನಿಂದ 11 ರೂ.
ಪೆಟ್ ಬಾಟಲ್ ರೂ.12 ರಿಂದ 13 ರೂ.
ಲಸ್ಸಿ
200 ಮಿಲಿ ಸ್ಯಾಚೆ ರೂ.10ರಿಂದ 11ರೂ.
ಟೆಟ್ರಾ ಪ್ಯಾಕ್ ಸಾದ ರೂ.20 ರಿಂದ 21 ರೂ.
ಟೆಟ್ರಾ ಪ್ಯಾಕ್ ಮ್ಯಾಂಗೋ ರೂ.25 ರಿಂದ 27ರೂ.
ಪೆಟ್ ಬಾಟಲ್ ಸಾದ ರೂ.15 ರಿಂದ 16ರೂ.
ಪೆಟ್ ಬಾಟಲ್ ಮ್ಯಾಂಗೋ ರೂ.20 ರಿಂದ 21 ರೂಪಾಯಿ ಹೆಚ್ಚಳವಾಗಲಿದೆ.

ಇದನ್ನೂ ಓದಿ : Interesting Virat Kohli tweet : ನಾನು ಬಿದ್ದರೇನಂತೆ..’’ ಕುತೂಹಲ ಮೂಡಿಸಿದ ವಿರಾಟ್ ಕೊಹ್ಲಿ ಟ್ವೀಟ್

ಇದನ್ನು ಓದಿ : Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್

ಇದನ್ನೂ ಓದಿ : Interesting Virat Kohli tweet : ನಾನು ಬಿದ್ದರೇನಂತೆ..’’ ಕುತೂಹಲ ಮೂಡಿಸಿದ ವಿರಾಟ್ ಕೊಹ್ಲಿ ಟ್ವೀಟ್

ಇದನ್ನೂ ಓದಿ : Assam Floods :ಅಸ್ಸಾಂನಲ್ಲಿ ಪತ್ತೆಯಾಯ್ತು ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು

Price increase of Nandini products from tomorrow

Comments are closed.