Zomato Delivery Boy: ಸುರಿಯುವ ಮಳೆಯಲ್ಲೂ ಮಾನವೀಯತೆ ಮೆರೆದ ಝೋಮ್ಯಾಟೋ ಡೆಲಿವರಿ ಏಜೇಂಟ್

ಮಧ್ಯರಾತ್ರಿಯ ಧಾರಾಕಾರ ಮಳೆಯಲ್ಲಿ ಅನಾರೋಗ್ಯದ ಮಗುವಿಗೆ ಔಷಧಿಯನ್ನು ತಲುಪಿಸಿದ ಡೆಲಿವರಿ ಏಜೆಂಟ್‌ನ ಸೇವೆಯನ್ನು ಝೊಮಾಟೊ ಗ್ಯಾಲಂಟ್ರಿ ಪ್ರಶಸ್ತಿಯೊಂದಿಗೆ ಗುರುತಿಸಿದೆ. ಕೇರಳದ ಕೊಚ್ಚಿಯ ಜಿತಿನ್ ವಿಜಯನ್ ಧಾರಾಕಾರ ಮಳೆಯಲ್ಲಿ 12 ಕಿಲೋಮೀಟರ್ ತಮ್ಮ ಬೈಕ್ ಅನ್ನು ಓಡಿಸಿ ತಡರಾತ್ರಿ ಊಟದ ಆರ್ಡರ್ ಡೆಲಿವೆರಿ ಮಾಡಿದರು. ಅವರು ಡೆಲಿವರಿ ಸ್ಥಳಕ್ಕೆ ಬಂದಾಗ, ಮಹಿಳೆಯೊಂದಿಗೆ ಅನಾರೋಗ್ಯದ ಒಂದು ವರ್ಷದ ಮಗುವನ್ನು ಕಂಡರು. ಮಗುವಿಗೆ ಔಷಧಿಯನ್ನು ತರಲು ಸುರಿಯುತ್ತಿರುವ ಮಳೆಯಲ್ಲಿ ವಿಜಯನ್ ಅವರು ಕರ್ತವ್ಯದ ಕರೆಯನ್ನು ಮೀರಿ ರಾತ್ರಿಯಲ್ಲಿ ಧಾರಾಕಾರ ಮಳೆಗೆ ಲೆಕ್ಕಿಸದೆ ಧೈರ್ಯಶಾಲಿಯಾಗಿ ಇನ್ನೂ 10 ಕಿಲೋಮೀಟರ್ ಪ್ರಯಾಣಿಸಿ ಅಸ್ವಸ್ಥಗೊಂಡ ಮಗುವಿಗೆ ಮೆಡಿಸಿನ್ಸ್ ಅನ್ನು ತಲುಪಿಸಿದರು .ಹೀಗೆ ಜಿತಿನ್ ವಿಜಯನ್ ತಮ್ಮ ಮಾನವೀಯತೆ ಮತ್ತು ಔದಾರ್ಯವನ್ನು ಮೆರೆದಿದ್ದಾರೆ. ಅವರ ಔದಾರ್ಯವನ್ನು ಗುರುತಿಸಿ ಅವರಿಗೆ ಈಗ ಝೊಮಾಟೊ ಗ್ಯಾಲಂಟ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ(Zomato Delivery Boy).

ಫುಡ್ ಡೆಲಿವರಿ ಕಂಪನಿ ಝೋಮ್ಯಾಟೋ ನಿನ್ನೆ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಗ್ಯಾಲಂಟ್ರಿ ಪ್ರಶಸ್ತಿಗಳು ಡೆಲಿವರಿ ಪಾರ್ಟನರ್ಸ್ ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸುತ್ತದೆ ಎಂದು ಹೇಳಿದೆ .”ನಾವು ಕೇಳಿದ ಎಲ್ಲಾ ಗಮನಾರ್ಹ ಕಥೆಗಳಲ್ಲಿ, ಇವರು ತಮ್ಮ ಕೆಲಸದ ನೀತಿ ಮತ್ತು ಕರ್ತವ್ಯದ ಕರೆಗೆ ಮೀರಿ ಜನರಿಗೆ ಸೇವೆ ಸಲ್ಲಿಸುವುದು ಎದ್ದು ಕಾಣುತ್ತವೆ” ಎಂದ ಝೊಮಾಟೊ ಜಿತಿನ್ ವಿಜಯನ್ ಅವರ ಔದಾರ್ಯವನ್ನು ಗುರುತಿಸಿ ಬಹುಮಾನ ಘೋಷಿಸಿದ್ದಾರೆ.

ವಿಜಯನ್ ಜೊತೆಗೆ ಶಿವಾಜಿ ಬಾಲಾಜಿ ಪವಾರ್ ‘ಗೋಯಿಂಗ್ ಎಬೋವ್ ಅಂಡ್ ಬಿಯಾಂಡ್’ ಕಲ್ಪನೆಗಾಗಿ ಗುರುತಿಸಲ್ಪಟ್ಟರಾಗಿದ್ದಾರೆ.ಪವಾರ್ 2023 ರಲ್ಲಿ ಏಷ್ಯಾ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. “ಪೋಲಿಯೊ ಸೋಂಕಿನೊಂದಿಗೆ ಜನಿಸಿರುವುದು ಶಿವಾಜಿಯನ್ನು ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಆಡುವುದನ್ನು ತಡೆಯಲಿಲ್ಲ” ಎಂದು ಝೊಮಾಟೊ ಕೊಂಡಾಡಿದ್ದಾರೆ. ಇದರೊಂದಿಗೆ ಝೋಮ್ಯಾಟೋ ತನ್ನ ಇಬ್ಬರು ‘ಅತ್ಯಂತ ಕಾನ್ಸಿಸ್ಟನ್ಟ್ ಪಾರ್ಟ್ನರ್ ‘ ಮತ್ತು ಮೂರು ‘ಅತ್ಯುತ್ತಮ ಸಾಧಕರನ್ನು’ ಗೌರವಿಸಿದೆ.ಝೋಮ್ಯಾಟೋ ನ 14 ನೇ ವಾರ್ಷಿಕೋತ್ಸವದಂದು ಬಹುಮಾನಗಳನ್ನು ನೀಡಲಾಗಿದೆ , ಇದರೊಂದಿಗೆ 14 ಅದೃಷ್ಟಶಾಲಿ ಗ್ರಾಹಕರಿಗೆ ಉಚಿತ ಊಟವನ್ನು ಕೊಡುಗೆಯಾಗಿ ನೀಡಲಿದೆ.

ಇದನ್ನೂ ಓದಿ : ಸಿಂಗಾಪುರ್ ಓಪನ್ ಫೈನಲ್ ಪ್ರಶಸ್ತಿ ಗೆದ್ದ ಪಿವಿ ಸಿಂಧು

ಇದನ್ನೂ ಓದಿ : Assam Floods :ಅಸ್ಸಾಂನಲ್ಲಿ ಪತ್ತೆಯಾಯ್ತು ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು

ಇದನ್ನೂ ಓದಿ: Badminton Health Benefits:ಬ್ಯಾಡ್ಮಿಂಟನ್ ಆಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ !

(Zomato Delivery Boy)

Comments are closed.