psi recruitment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಎತ್ತಂಗಡಿ

ಬೆಂಗಳೂರು : psi recruitment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಹೊರ ಬರುತ್ತಲೇ ಇದೆ. ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು ಭೇದಿಸುವತ್ತ ಗಮನ ನೆಟ್ಟಿದ್ದು ದಿನಕ್ಕೊಬ್ಬರು ಆರೋಪಿಗಳನ್ನು ಖೆಡ್ಡಾಗೆ ಕೆಡವುತ್ತಲೇ ಇದ್ದಾರೆ. ರಾಜಕೀಯ ಆರೋಪ – ಪ್ರತ್ಯಾರೋಪ, ಚುರುಕುಗೊಂಡ ತನಿಖೆ , ಅಭ್ಯರ್ಥಿಗಳ ಅಳಲು ಈ ಎಲ್ಲದರ ನಡುವೆ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್​ ಪೌಲ್​ ಮೊದಲ ತಲೆದಂಡ ತೆತ್ತಿದ್ದಾರೆ. 1995ರ ಬ್ಯಾಚ್​​ನ ಅಮೃತ್​ ಪೌಲ್​ರನ್ನು ನೇಮಕಾತಿ ವಿಭಾಗದಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.


ಸರ್ಕಾರದ ಆದೇಶದ ಬಳಿಕ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್​ ಪೌಲ್​ ಇದೀಗ ಭದ್ರತಾ ದಳದ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಹಾಗೂ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಆರ್​. ಹಿತೇಂದ್ರರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.


ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿರುವ ಆರ್​.ಹಿತೇಂದ್ರ ಪ್ರಸ್ತುತ ಅಪರಾಧ ಹಾಗೂ ತಾಂತ್ರಿಕ ಸೇವೆ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈಗ ಅಮೃತ್​ ಪೌಲ್​ ನೇಮಕಾತಿ ವಿಭಾಗದಿಂದ ಭದ್ರತಾ ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಹಿನ್ನೆಲೆಯಲ್ಲಿ ಹಿತೇಂದ್ರರಿಗೆ ಹೆಚ್ಚುವರಿ ಹೊಣೆಯೊಂದು ಹೆಗಲೇರಿದೆ.


ಪಿಎಸ್​ಐ ನೇಮಕಾತಿ ಅಕ್ರಮದ ವಿಚಾರದಲ್ಲಿ ಆರೋಪಗಳ ಸುರಿಮಳೆಯನ್ನೇಗೈಯುತ್ತಿರುವ ಕಾಂಗ್ರೆಸ್​ ನಾಯಕರು ಎಡಿಜಿಪಿ ಅಮೃತ್​ ಪೌಲ್​ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡುತ್ತಲೇ ಬಂದಿದ್ದರು. ಅಮೃತ್​ ಪೌಲ್​ ವಿರುದ್ಧ ಕಾಂಗ್ರೆಸ್​ ಆರೋಪದ ಬಳಿಕ ಇದೀಗ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : SSLC Marks Card : ಎಸ್‌ಎಸ್‌ಎಲ್‌ ಸಿ ಅಂಕಪಟ್ಟಿಯಲ್ಲಿ ಶಾಲೆಗಳ ಹೆಸರು ನಮೂದಿಸಿ : ಹೈಕೋರ್ಟ್‌ ಆದೇಶ

psi recruitment scam karnataka government transfers ips officer amrit paul

Comments are closed.