Oxygen Tragedy Rahul Gandhi Meeting : ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮರುಜೀವ: ಸಂತ್ರಸ್ಥರ ಕುಟುಂಬದ ಜೊತೆ ರಾಹುಲ್‌ ಗಾಂಧಿ ಸಂವಾದ

ಬೆಂಗಳೂರು : Oxygen Tragedy Rahul Gandhi Meeting : ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಬಿಜೆಪಿಯ ಅವಾಂತರಗಳು,ಭ್ರಷ್ಟಾಚಾರವನ್ನು ಬಿಚ್ಚಿಡೋದರ ಜೊತೆಗೆ ಬಿಜೆಪಿಯ ತಪ್ಪುಗಳನ್ನು ಜನರ ಮುಂದೇ ತೆರೆದಿಡೋ ಒಂದೇ ಒಂದು ಅವಕಾಶವನ್ನು ಕಾಂಗ್ರೆಸ್ ಕಳೆದುಕೊಳ್ಳಲು ಸಿದ್ಧವಿಲ್ಲ. ಈಗ ಇದೇ ಪ್ರಯತ್ನದಲ್ಲಿರೋ ಕಾಂಗ್ರೆಸ್ ಭಾರತ ಜೋಡೋ ಯಾತ್ರೆಯಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತವನ್ನು ಮತ್ತೆ ಜನರಿಗೆ ನೆನಪಿಸಲು ಮುಂದಾಗಿದೆ.

ಹೌದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಕೈಪಡೆ, ಭಾರತ್ ಜೋಡೋ ಯಾತ್ರೆ ವೇಳೆ ಸರ್ಕಾರಕ್ಕೆ ಮುಜಗರ ಮಾಡಲು ಸಜ್ಜಾಗುತ್ತಿದೆ.ಇದರ ಭಾಗವಾಗಿ ಶುಕ್ರವಾರ ಚಾಮರಾಜನಗರದ ಗುಂಡ್ಲುಪೇಟೆಯನ್ನು ಪ್ರವೇಶಿಸುವ ಭಾರತ ಜೋಡೋ ಯಾತ್ರೆಯಲ್ಲೂ ಕಾಂಗ್ರೆಸ್ ಆಕ್ಸಿಜನ್ ದುರಂತ ಪ್ರತಿಧ್ವನಿಸಲಿದೆ.ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳೋ ರಾಹುಲ್ ಗಾಂಧಿ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಮೃತಪಟ್ಟ ಕುಟುಂಬದ ಸದಸ್ಯರ ಜೊತೆ ಸಂವಾದ ನಡೆಸಲಿದ್ದಾರೆ. ಪಾದಯಾತ್ರೆ ಬಿಡುವಿನ ವೇಳೆಯಲ್ಲಿ ಸಂವಾದ ನಡೆಯಲಿದೆ.

ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ರೋಗಿಗಳು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದಕ್ಕೆ ಆಕ್ಸಿಜನ್ ಪೊರೈಕೆಯಲ್ಲಿ ಉಂಟಾದ ವ್ಯತ್ಯಯವೇ ಕಾರಣ ಎನ್ನಲಾಗಿತ್ತು. ರಾಜ್ಯ ಕಾಂಗ್ರೆಸ್ ಪಾದಯಾತ್ರೆ ನಡುವೆ ಆಯೋಜಿಸಿರುವ ಸಂವಾದದ ಹಿಂದೆ ಭಾರೀ ಲೆಕ್ಕಾಚಾರವಿದೆ. ಕೋವಿಡ್ ಸಂದರ್ಭದಲ್ಲಿನ ಭ್ರಷ್ಟಾಚಾರ ಪ್ರಸ್ತಾಪಿಸುವುದು ಆಕ್ಸಿಜನ್ ಕೊರತೆಯಿಂದ ಮೃತಪಟ್ಟರು ಪರಿಹಾರ ಇಲ್ಲ ಎಂಬುದನ್ನು ಬಿಂಬಿಸುವುದು, ಸರ್ಕಾರದ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬುದನ್ನು ಜನರಿಗೆ ಮತ್ತೆ ನೆನಪಿಸುವುದು.

ಎಲ್ಲದಕ್ಕಿಂತ ಮುಖ್ಯವಾಗಿ ಈ ಸಂತ್ರಸ್ಥರ ಕುಟುಂಬದ ಜೊತೆ ಕಾಂಗ್ರೆಸ್ ನಿಂತಿದೆ ಎಂಬ ಸಂದೇಶ ರವಾನಿಸುವುದು. ಈ ಹಿಂದೆ ಸಂತ್ರಸ್ಥರ ಕುಟುಂಬದವರಿಗೆ ಒಂದು ಲಕ್ಷ ಪರಿಹಾರ ಕಾಂಗ್ರೆಸ್ ನೀಡಿದ್ದ ಕಾಂಗ್ರೆಸ್ ಆಗಲೂ ಬಿಜೆಪಿ ವಿರುದ್ದ ಹರಿಹಾಯ್ದಿತ್ತು. ಈಗ ಮತ್ತೊಮ್ಮೆ ರಾಹುಲ್ ಗಾಂಧಿ ಎದುರಿನಲ್ಲಿ ಬಿಜೆಪಿ ವೈಫಲ್ಯ ಪ್ರಸ್ತಾಪಿಸಿ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಎಷ್ಟು ಸಕ್ರಿಯವಾಗಿ ನಿಂತಿದೆ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನ ಕೆಪಿಸಿಸಿ ಅಧ್ಯಕ್ಷರದ್ದು ಎನ್ನಲಾಗ್ತಿದೆ.

ಕೇವಲ ಆಕ್ಸಿಜನ್ ದುರಂತ ಸಂತ್ರಸ್ಥರು ಮಾತ್ರವಲ್ಲ ಚಾಮರಾಜನಗರದ ಬುಡಕಟ್ಟು ಸಮುದಾಯದ ಜನರೊಂದಿಗೂ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದು, ಮೂಲಭೂತ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರಂತೆ. ಒಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಭಾರತ ಜೋಡೋವನ್ನು ಅಸ್ತ್ರವಾಗಿ ಬಳಸಲಿದೆ.

ಇದನ್ನೂ ಓದಿ : Praveen Nettaru wife : ನುಡಿದಂತೆ ನಡೆದ ಬಿಜೆಪಿ ಸರ್ಕಾರ: ಪ್ರವೀಣ್ ನೆಟ್ಟಾರು ಪತ್ನಿಗೆ ಸರಕಾರಿ ಉದ್ಯೋಗ

ಇದನ್ನೂ ಓದಿ : Siddaramaiah : ಆರ್​​ಎಸ್​ಎಸ್ ಬ್ಯಾನ್​ ಮಾಡಿ ಎನ್ನುವ ಸಿದ್ದರಾಮಯ್ಯ ಸೂಕ್ತ ಕಾರಣ ನೀಡಲಿ : ಹೆಚ್​ಡಿಕೆ

Bharat Jodo yatra Rahul Gandhi Meeting with Chamarajanagar Oxygen Tragedy Death Family

Comments are closed.