Raid by ACB : ರಾಜ್ಯದಲ್ಲಿ ಯಾವೆಲ್ಲ ಅಧಿಕಾರಿಗಳ ಮೇಲೆ ಎಸಿಬಿ ದಾಳಿ : ಇಲ್ಲಿದೆ ಮಾಹಿತಿ

ಬೆಂಗಳೂರು : Raid by ACB : ಆದಾಯಕ್ಕೂ ಅಧಿಕ ಆಸ್ತಿ ಗಳಿಕೆ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಇಂದು ಎಸಿಬಿ ಬಲೆ ಬೀಸಿದೆ. ರಾಜ್ಯದ 80ಕ್ಕೂ ಅಧಿಕ ಕಡೆಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸುವ ಮೂಲಕ ಶಾಕ್​ ನೀಡಿದೆ. 300ಕ್ಕೂ ಅಧಿಕ ಎಸಿಬಿ ಸಿಬ್ಬಂದಿ ತಂಡವು ಅಕ್ರಮ ಹಣ ಗಳಿಕೆಯ ಬಗ್ಗೆ ದಾಖಲೆಗಳನ್ನು ಜಾಲಾಡುತ್ತಿದೆ.

ಎಲ್ಲೆಲ್ಲಿ ದಾಳಿ (Raid by ACB) ನಡೆದಿದೆ :

ರಾಯಚೂರಿನಲ್ಲಿ ಸಿಪಿಐ ಉದಯ ರವಿ ನಿವಾಸ :

ಪೊಲೀಸ್​ ಅಧಿಕಾರಿಯಾಗಿರುವ ಉದಯ್​ ರವಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ರಾಯಚೂರಿನಲ್ಲಿ ದಾಳಿ ನಡೆಸಿದ್ದಾರೆ. ಲಿಂಗಸಗೂರು ತಾಲೂಕಿನ ಮುದಗಲ್​​ನಲ್ಲಿರುವ ಉದಯ ರವಿ ನಿವಾಸದ ಮೇಲೆ ಈ ದಾಳಿ ನಡೆದಿದೆ. ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ದಾಖಲಾಗಿತ್ತು. ಬೆಳ್ಳಂ ಬೆಳಗ್ಗೆ 7 ಜನರಿದ್ದ ಎಸಿಬಿ ಅಧಿಕಾರಿಗಳ ತಂಡವು ಉದಯ ರವಿ ನಿವಾಸಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಕೊಪ್ಪಳದಲ್ಲಿ ಸಿಪಿಐ ಆಗಿದ್ದ ಉದಯ ರವಿ ಕೆಲ ಸಮಯದ ಹಿಂದಷ್ಟೇ ಬೆಂಗಳೂರು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆ ಪಡೆದಿದ್ದರು.

ಉಡುಪಿಯಲ್ಲಿರುವ ಇಂಜಿನಿಯರ್​ ಹರೀಶ್​ ನಿವಾಸ :

ಸಣ್ಣ ನೀರಾವರಿ ಅಸಿಸ್ಟಂಟ್​ ಇಂಜಿನಿಯರ್​ ಆಗಿರುವ ಹರೀಶ್​​ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಅಕ್ರಮ ಆಸ್ತಿ ಗಳಿಕೆ ಆರೋಪವನ್ನು ಎದುರಿಸುತ್ತಿರುವ ಅಸಿಸ್ಟಂಟ್​ ಇಂಜಿನಿಯರ್​ ಹರೀಶ್​​ಗೆ ಸೇರಿದ ಉಡುಪಿಯ ಕೊರಂಗ್ರಪಾಡಿಯಲ್ಲಿರುವ ನಿವಾಸಕ್ಕೆ ತೆರಳಿದ ಎಸಿಬಿ ತಂಡ ದಾಳಿ ನಡೆಸಿದ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ.

ಕನಕಪುರದಲ್ಲಿರುವ ಡಿ.ಎಸ್​ ಶ್ರೀಧರ್​ ನಿವಾಸ :

ಕಾರವಾರ ಜಿಲ್ಲೆಯ ಡಿಆರ್​​ ಆಗಿ ಸೇವೆ ಸಲ್ಲಿಸುತ್ತಿರುವ ಡಿ.ಎಸ್​ ಶ್ರೀಧರ್​ಗೂ ಎಸಿಬಿ ಶಾಕ್​ ನೀಡಿದೆ. ಕನಕಪುರದ ಹಾರೋಹಳ್ಳಿಯಲ್ಲಿರುವ ಡಿ.ಎಸ್​ ಶ್ರೀಧರ್​ ಫಾರ್ಮ್​ ಹೌಸ್​​ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ಹೆಚ್​ಎಸ್​ ಆರ್​ ಲೇ ಔಟ್​ನಲ್ಲಿಯೂ ಶ್ರೀಧರ್​ ಮನೆಯಿದ್ದು ಅಲ್ಲಿಯೂ ದಾಳಿ ನಡೆದಿದೆ. ಶ್ರೀಧರ್​ಗೆ ಸೇರಿದ ಫಾರ್ಮ್​ ಹೌಸ್​ನಲ್ಲಿ ಚಿನ್ನ ಹಾಗೂ ಆಸ್ತಿ ಪತ್ರ ಪತ್ತೆಯಾಗಿದೆ ಎನ್ನಲಾಗಿದ್ದು ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಈ ಹಿಂದೆ‌ ರಾಮನಗರ ಜಿಲ್ಲೆಯಲ್ಲಿ‌ ಜಿಲ್ಲಾ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಿದ್ದ ವೇಳೆಯಲ್ಲಿ ಶ್ರೀಧರ್​​ ಅಕ್ರಮ ಆಸ್ತಿ ಗಳಿಸಿದ್ದರು ಎನ್ನಲಾಗಿದೆ. ರಾಮನಗರ ಎಸಿಬಿ ಡಿವೈಎಸ್ಪಿ ಗೋಪಾಲನ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆದಿದೆ.

​​ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ನಿವಾಸದಲ್ಲಿ ಎಸಿಬಿ ದಾಳಿ :

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್​ ಆಗಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವರ್​ಗೂ ಎಸಿಬಿ ಬೆಳ್ಳಂ ಬೆಳಗ್ಗೆ ಶಾಕ್​ ನೀಡಿದೆ. ಹಗರಬೊಮ್ಮನಹಳ್ಳಿಯಲ್ಲಿರುವ ಪರಮೇಶ್ವರ್​ ನಿವಾಸ, ಚಿತ್ರದುರ್ಗದ ವಿದ್ಯಾನಗರದಲ್ಲಿರುವ ಪರಮೇಶ್ವರ್​ ಮಾಲೀಕತ್ವದ ಮನೆ, ಹಾಗೂ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಇಂಜಿನಿಯರ್ ರಾಜೀವ್ ಪುರಸೈಯ್ಯ ನಾಯ್ಕ ಎಸಿಬಿ ಶಾಕ್​ :

ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ ಬೃಂದಾವನ ಅಪಾರ್ಟ್​ಮೆಂಟ್​ನಲ್ಲಿರುವ ಪಿಡಬ್ಲ್ಯುಡಿ ಇಂಜಿನಿಯರ್ ರಾಜೀವ್ ಪುರಸೈಯ್ಯ ನಾಯ್ಕ ಎಂಬವರ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಬಾಗಲಕೋಟೆಯಲ್ಲಿ ಆರ್​​ಟಿಓ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ :

ಬಾಗಲಕೋಟೆ ಜಿಲ್ಲೆಯ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶಂಕರಲಿಂಗ ಗೋಗಿ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಶಂಕರಲಿಂಗ ಗೋಗಿ ಅವರ ಸಂಬಂಧಿಕರ ಮನೆಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಡಿಎಸ್ ಪಿ ಸುರೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಇದರ ಜೊತೆಯಲ್ಲಿ ಬಾಗಲಕೋಟೆಯಲ್ಲಿ ಆರ್​ಟಿಓ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ರೇಡ್ ಮಾಡಲಾಗಿದೆ

ಇನ್ನುಳಿದಂತೆ ಕಲಬುರಗಿಯಲ್ಲಿರುವ ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರುಪಣಾಧಿಕಾರಿಯಾಗಿರುವ ತಿಪ್ಪಣ್ಣ ಸಿರಸಗಿ ನಿವಾಸ, ಬೆಳಗಾವಿಯಲ್ಲಿರುವ ನಿವೃತ್ತಿ ಅಂಚಿನಲ್ಲಿರುವ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಬಿ.ವೈ.ಪವಾರ ಅವರ ಮನೆ ಮೇಲೆ ಇಂದು ದಾಳಿ ನಡೆದಿದೆ.

ಇದನ್ನು ಓದಿ : IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್

ಇದನ್ನೂ ಓದಿ : ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್

Raid by ACB officials in many parts of the state

Comments are closed.