CD Case‌ Supreme Court : ಸಾಹುಕಾರ್ ರಮೇಶ್‌ ಜಾರಕಿಹೊಳಿಗೆ ಮತ್ತೆ ಸಿಡಿ ಸಂಕಷ್ಟ : ಸುಪ್ರೀಂ ಕೋರ್ಟ್‌ ಮೊರೆ ಹೋದ ಸಂತ್ರಸ್ಥೆ

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ (CD Case‌ Supreme Court ) ಮತ್ತೆ ಜೀವಪಡೆದುಕೊಂಡಿದೆ. ಪ್ರಕರಣದಲ್ಲಿ ಇತ್ತೀಚಿಗಷ್ಟೇ ಸಚಿವ ರಮೇಶ್ ಜಾರಕಿಹೊಳಿಗೆ ರಿಲೀಫ್ ಸಿಕ್ಕಿತ್ತು. ಪ್ರಕರಣ ಖುಲಾಸೆಯಾದ ಖುಷಿಯಲ್ಲಿದ್ದ ಜಾರಕಿಹೊಳಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೈಕೋರ್ಟ್ ನಲ್ಲಿ ಖುಲಾಸೆಯಾದ ಪ್ರಕರಣದ ತನಿಖೆ ಕೋರಿ ಸಂತ್ರಸ್ಥ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ನನಗೆ ಮೋಸ ಮಾಡಿದ್ದಾರೆ. ಹಾಗೂ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಮೂಲದ ಯುವತಿಯೊರ್ವಳು ವಿಡಿಯೋ ಸಹಿತ ಗಂಭೀರ ಆರೋಪ ಮಾಡಿದ್ದಳು. ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಮಾತ್ರವಲ್ಲ ಈ ಪ್ರಕರಣ ದಿಂದ ಪಕ್ಷಕ್ಕಾಗುವ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಸಚಿವ ರಮೇಶ್ ಜಾರಕಿಹೊಳಿಯಿಂದ ರಾಜೀನಾಮೆ ಕೂಡ ಪಡೆದಿತ್ತು. ಇನ್ನು ಪ್ರಕರಣದ ತನಿಖೆಗಾಗಿ ರಚನೆ ಯಾಗಿದ್ದ ಎಸ್ ಐಟಿ ಕೆಲ ದಿನಗಳ ಹಿಂದೆಯಷ್ಟೇ ಪ್ರಕರಣದ ಕುರಿತು ತನಿಖಾ ವರದಿ ಸಲ್ಲಿಸಿತ್ತು.

ಪ್ರಕರಣದಲ್ಲಿ ಯುವತಿ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳಿಲ್ಲ. ಯುವತಿ ಹೇಳಿದಂತೆ ಸಚಿವರು ಉದ್ಯೋಗದ ಭರವಸೆ ನೀಡಿರುವ ಸಾಧ್ಯತೆಗಳು ಕಡಿಮೆ. ಅಲ್ಲದೇ ಯುವತಿ ತಮ್ಮ ಆರೋಪಕ್ಕೆ ಸೂಕ್ತ ದಾಖಲೆ ಒದಗಿಸಲು ವಿಫಲರಾಗಿದ್ದಾರೆ ಎಂದು ಎಸ್ಐಟಿ ಹೈಕೋರ್ಟ್ ಗೆ ವರದಿ ಸಲ್ಲಿಸಿತು. ಈ ವೇಳೆ ಮೌನವಾಗಿದ್ದ ಯುವತಿ ಈಗ ಎಸ್ ಐಟಿ ಕೊಟ್ಟಿರುವ ವರದಿ ಮಾತ್ರವಲ್ಲ ಎಸ್ಐಟಿ ರಚನೆಯನ್ನೇ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿರುವ ಎಸ್ ಐಟಿ ರಚನೆಯನ್ನೇ ಪ್ರಶ್ನಿಸಿರುವ ಸಂತ್ರಸ್ಥ ಯುವತಿ, ಎಸ್ಐಟಿ ರಚನೆಯೇ ಸರಿಯಿಲ್ಲ.ಸರ್ಕಾರ ಸ್ವಯಂ ಪ್ರೇರಿತವಾಗಿ ತನಿಖಾ ತಂಡ ವನ್ನೇ ರಚನೆ ಮಾಡಿಲ್ಲ ಎಂದ ಮೇಲೆ ಅದರ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿ ವಿಚಾರಣೆ ನಡೆಸುವುದು ಎಷ್ಟು ಸರಿ ಎಂದು ಸಂತ್ರಸ್ಥ ಯುವತಿ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ನನಗೆ ಎಸ್ ಐ ಟಿ ಸಲ್ಲಿಸಿದ ವರದಿಯ ಬಗ್ಗೆ ನಂಬಿಕೆ ಇಲ್ಲ ಎಂದು ಯುವತಿ ಸುಪ್ರೀಂ ಕೋರ್ಟ್ (CD Case‌ Supreme Court ) ಮೆಟ್ಟಿಲೇರಿದ್ದಾರೆ. ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರೋದರಿಂದ ರಮೇಶ್ ಜಾರಕಿಹೊಳಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಪ್ರಕರಣ ಬೆಳಕಿಗೆ ಬಂದಾಗ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಮತ್ತೊಮ್ಮೆ ಸಚಿವ ಸಂಪುಟ‌ಸೇರುವ ಪ್ರಯತ್ನ ಆರಂಭಿಸಿದ್ದರು. ಈಗ ಮತ್ತೆ ಪ್ರಕರಣ ಸುಪ್ರೀಂ ಅಂಗಳಕ್ಕೆ ಸೇರಿರೋದು ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯವನ್ನು ಆತಂಕಕ್ಕೆ ದೂಡಿದೆ.

ಇದನ್ನೂ ಓದಿ : CD Case ಕ್ಲೀನ್ ಚೀಟ್ : ಸಚಿವ ಸ್ಥಾನಕ್ಕೆ ಮತ್ತೆ ಲಾಬಿ ಆರಂಭಿಸಿದ ರಮೇಶ್ ಜಾರಕಿಹೊಳಿ

ಇದನ್ನೂ ಓದಿ : ಸಿ.ಡಿ ಸ್ಫೋಟ ಜ್ವಾಲೆಯಲ್ಲಿ ಮಿಂದೆದ್ದವರು – ಬೆಂದವರು ..!

(Ramesh Jarakiholi Again Trouble, CD Case Victim girl decided going to Supreme Court)

Comments are closed.