India vs West Indies 3rd ODI Result: ಕೆರಿಬಿಯನ್ನರ ವಿರುದ್ಧ ಭಾರತಕ್ಕೆ 96 ರನ್‌ಗಳ ಜಯಭೇರಿ; ಸರಣಿ ಕೈವಶ

ಮೂರನೇ ಮತ್ತು ಸರಣಿಯ ಕೊನೆಯ ಏಕದಿನ ಪಂದ್ಯದಲ್ಲೂ ಭಾರತ ತಂಡವು ಅತಿಥಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ (India vs West Indies, 3rd ODI) ಜಯಭೇರಿ ಬಾರಿಸಿದೆ. ಸತತ ಮೂರನೇ ಏಕದಿನ ಪಂದ್ಯದಲ್ಲೂ ಜಯಗಳಿಸುವ ಮೂಲಕ ಇಡೀ ಸರಣಿಯ ಭಾರತದ ಕೈವಶವಾಗಿದೆ. ಅಂದಹಾಗೆ ಈ ಪಂದ್ಯದಲ್ಲೂ ಭಾರತ ದೊಡ್ಡ ಮೊತ್ತದಿಂದಲೆ, 96 ರನ್‌ಗಳ ಜಯಗಳಿಸಿದೆ.

ಕನ್ನಡಿಗ ಪ್ರಸಿದ್ದ ಕೃಷ್ಣ ಆರ್ಭಟ ಹಾಗೂ ಕೆ.ಎಲ್.‌ ರಾಹುಲ್‌ ಮತ್ತು ಸೂರ್ಯ ಕುಮಾರ್‌ ಯಾದವ್‌ ಅವರ ಅದ್ಬುತ ಬ್ಯಾಟಿಂಗ್‌ ನೆರವಿನಿಂದ ವೆಸ್ಟ್‌ ಇಂಡಿಸ್‌ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಜಯಗಳಿಸಿತ್ತು. ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ (India vs West Indies 3rd ODI Results) ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್, ಬೌಲಿಂಗ್ ನಲ್ಲಿ ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಪ್ರಶಾಂತ್ ಕೃಷ್ಣ ಮತ್ತು ಕುಲದೀಪ್ ಯಾದವ್ ಗಮನಾರ್ಹ ಶ್ರೇಯಸ್ಸನ್ನು ಪಡೆದುಕೊಂಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ ಒಟ್ಟು 265 ರನ್ ಪೇರಿಸಲು ಸಫಲವಾಯಿತು ಆದರೆ ಈ ಮೊತ್ತವನ್ನು ಬೆನ್ನೆತ್ತಲು ವೆಸ್ಟ್ ಇಂಡೀಸ್ ಬ್ಯಾಟಿಂಗ್ ಪಡೆಯ ಬಳಸಿ ಸಾಧ್ಯವಾಗಲಿಲ್ಲ. ಕೆರಿಬಿಯನ್ನರ ಬ್ಯಾಂಟಿಂಗ್ ಪಡೆಯನ್ನು ಬಗ್ಗುಬಡಿದ ಭಾರತದ ಬೌಲರ್‌ಗಳು  169 ರನ್‌ಗಳಿಗೆ ವೆಸ್ಟ್ ಇಂಡೀಸನ್ನು ಕಟ್ಟಿಹಾಕುವಲ್ಲಿ ಸಫಲರಾದರು.

ಭಾರತದ ಬೌಲರ್‌ಗಳಾದ ಸಿರಾಜ್ ಮತ್ತು ಕೃಷ್ಣ ತಲಾ 3 ವಿಕೆಟ್‌ಗಳನ್ನು ತಮ್ಮ ಜೇಬಿಗಿಳಿಸಿಕೊಂಡರು. ಜೊತೆಗೆ ಕುಲದೀಪ್, ದೀಪಕ್ ಚಹಾರ್ ಅವರುಗಳು ತಲಾ 2 ವಿಕೆಟ್ ಕೆಡವಿ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣೀಭೂತರಾದರು. ಭಾರತ ತಂಡ ಮೂರನೇ ಏಕದಿನ ಪಂದ್ಯಕ್ಕಾಗಿ ತಂಡದಲ್ಲಿ ಒಟ್ಟು 4 ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿದಿತ್ತು.  ಕೆಎಲ್ ರಾಹುಲ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್ ಹಾಗೂ ಯುಜುವೇಂದ್ರ ಚಹಾಲ್ ಅವರನ್ನು ತಂಡದಿಂದ ಕಯಬಿಟ್ಟು ಕುಲದೀಪ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ ಮತ್ತು ಶಿಖರ್ ಧವನ್ ಅವರುಗಳಿಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: How be sexy hot?: ಸರಳವಾಗಿ ಸುಂದರ ಮತ್ತು ಮಾದಕವಾಗಿ ಕಾಣುವುದು ಹೇಗೆ?

(India vs West Indies 3rd ODI Result India Beat West Indies By 96 Runs Sweep Series)

Comments are closed.