ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಸರಕಾರಿ ಯೋಜನೆಗಳ (Karnataka Governament Schemes ) ಲಾಭ ದೊರಕಬೇಕು ಅನ್ನೋ ಕಾರಣಕ್ಕೆ ಪಡಿತರ ಚೀಟಿ ತಿದ್ದುಪಡಿಗೆ (Ration Card Updates) ಅವಕಾಶ ಕಲ್ಪಿಸಿತ್ತು. ಆದ್ರೆ ಸರಕಾರದ ಗಡುವು ಈಗಾಗಲೇ ಮುಗಿದಿದ್ದು, ಇನ್ನು ಮುಂದೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿಲ್ಲ.

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ (Karnataka Governament ) ಜನರಿಗೆ ಸರಕಾರಿ ಯೋಜನೆಗಳ (Karnataka Governament Schemes ) ಲಾಭ ದೊರಕಬೇಕು ಅನ್ನೋ ಕಾರಣಕ್ಕೆ ಪಡಿತರ ಚೀಟಿ ತಿದ್ದುಪಡಿಗೆ (Ration Card Updates) ಅವಕಾಶ ಕಲ್ಪಿಸಿತ್ತು. ಆದ್ರೆ ಸರಕಾರದ ಗಡುವು ಈಗಾಗಲೇ ಮುಗಿದಿದ್ದು, ಇನ್ನು ಮುಂದೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿಲ್ಲ. ಗೃಹಲಕ್ಷ್ಮೀ (Gruha Lakshmi) , ಗೃಹಜ್ಯೋತಿ (Gruha Jyothi) , ಅನ್ನಭಾಗ್ಯ (Anna Bhagya Scheme) ಸೇರಿದಂತೆ ಸರಕಾರ ಸವಲತ್ತುಗಳನ್ನು ಪಡೆಯಲು ಪಡಿತರ ಚೀಟಿ ಪ್ರಮುಖ ದಾಖಲೆಯಾಗಿದೆ.

ಪಡಿತರ ಚೀಟಿಯಲ್ಲಿನ ಲೋಪದೋಷಗಳಿಂದಾಗಿ ಕರ್ನಾಟಕದಲ್ಲಿ ಸರಕಾರಿ ಸವಲತ್ತು ದೊರಕದ ಕುಟುಂಬಗಳಿಗೆ ಸರಕಾರ ಅನುಕೂಲ ಕಲ್ಪಿಸಿತ್ತು. ಸೆಪ್ಟೆಂಬರ್‌ 1 ರಿಂದ 10 ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದ್ರೆ ಜನರಿಂದ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ೧೪ರ ವರೆಗೂ ಕೂಡ ತಿದ್ದುಪಡಿ ಅವಧಿಯನ್ನು ವಿಸ್ತರಣೆ ಮಾಡಿತ್ತು. ಆದ್ರೀಗ ಸರಕಾರ ನೀಡಿದ್ದ ಅವಧಿ ಮುಕ್ತಾಯಗೊಂಡಿದೆ.

Ration Card Corrections Updates for Karnataka Governament Schemes
Image credit to Original Source

ರೇಷನ್‌ ಕಾರ್ಡ್‌ಗೆ ಹೊಸದಾಗಿ ಕುಟುಂಬ ಸದಸ್ಯರ ಹೆಸರು ನೋಂದಣಿ, ಹೆಸರನ್ನು ತೆಗೆಯುವುದು, ಸದಸ್ಯರ ಹೆಸರಿನ ತಿದ್ದುಪಡಿ, ವಿಳಾಸ ಸೇರಿದಂತೆ ಹಲವು ರೀತಿಯ ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಎರಡು ಲಕ್ಷಕ್ಕೂ ಅಧಿಕ ಮಂದಿ ಸರಕಾರ ನೀಡಿರುವ ಅವಧಿಯಲ್ಲಿ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ :ನಿಫಾ ವೈರಸ್‌ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ

ಆದರೆ ಹಲವರು ಇನ್ನೂ ಪಡಿತರ ಚೀಟಿ ತಿದ್ದುಪಡಿ ಮಾಡಿಸಿಕೊಂಡಿಲ್ಲ. ಇಂತಹವರಿಗೆ ಸದ್ಯಕ್ಕಂತೂ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿಲ್ಲ. ಅದ್ರಲ್ಲೂ ಈ ಬಾರಿ ಸರ್ವರ್‌ ಸಮಸ್ಯೆಯಿಂದಲೇ ಬಹುತೇಕರಿಗೆ ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜನರು ಮತ್ತೊಮ್ಮೆ ಅವಕಾಶ ನೀಡುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

Ration Card Corrections Updates for Karnataka Governament Schemes
Image Credit To Original Source

ಗ್ರಾಮೀಣ ಹಾಗೂ ನಗರ ಭಾಗದಲ್ಲಿನ ಬಹುತೇಕ ಕಡೆಗಳಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಸರ್ವ ಸಮಸ್ಯೆ ಸರ್ವೇ ಸಾಮಾನ್ಯವಾಗಿತ್ತು. ಕೆಲವೊಂದು ಜನರು ಪಡಿತರ ಚೀಟಿ ತಿದ್ದುಪಡಿಗಾಗಿ ಮೂರ್ನಾಲ್ಕು ದಿನಗಳ ಕಾಲ ಕಾದರೂ ಪ್ರಯೋಜನವಾಗಿರಲಿಲ್ಲ. ಪಡಿತರ ಚೀಟಿ ತಿದ್ದುಪಡಿ ಮಾಡದೆ ರಾಜ್ಯ ಸರಕಾರ ಘೋಷಣೆ ಮಾಡಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಿಂದ ೨೦೦೦ ರೂಪಾಯಿ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

ಈಗಾಗಲೇ ಸರಕಾರ ಪಡಿತರ ಚೀಟಿ ತಿದ್ದುಪಡಿಗೆ ನೀಡಿರುವ ಅವಕಾಶ ಸಂಪೂರ್ಣವಾಗಿ ಮುಗಿದಿದೆ. ಆದರೆ ಸದ್ಯಕ್ಕೆ ಸರಕಾರ ಅವಧಿಯನ್ನು ವಿಸ್ತರಣೆ ಮಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಗೆ ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಗೆ ಬಾಕಿ ಉಳಿದಿದೆ.

ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಗೆ ಕೋಟ್ಯಾಂತರ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ರೇಷನ್‌ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗಿದ್ದರೆ ಮಾತ್ರವೇ ಅಂತಹ ಕುಟುಂಬಳಿಗೆ ಪ್ರತೀ ತಿಂಗಳು 2000 ರೂಪಾಯಿ ಲಭಿಸಲಿದೆ. ಆದರೆ ಬಹುತೇಕ ಕುಟುಂಬಗಳಲ್ಲಿನ ಕಾರ್ಡ್‌ಗಳಲ್ಲಿ ಮನೆಯ ಯಜಮಾನ ಗಂಡಸು ಆಗಿದ್ದಾರೆ. ಹೀಗಾಗಿ ಅಂತಹ ಅರ್ಜಿದಾರರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಿರಲಿಲ್ಲ. ಇದೇ ಕಾರಣಕ್ಕೆ ಸರಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಿತ್ತು.

Ration Card Corrections Updates for Karnataka Governament Schemes

Comments are closed.