IPL 2023 injury list : ಐಪಿಎಲ್ ಆರಂಭಕ್ಕೂ ಮೊದಲೇ ಫ್ರಾಂಚೈಸಿಗಳಿಗ ಬಿಗ್ ಶಾಕ್, ಆಂಜನೇಯನ ಬಾಲದಂತೆ ಬೆಳೆಯುತ್ತಲೇ ಆದೆ ಆಟಗಾರರ ಇಂಜ್ಯುರಿ ಲಿಸ್ಟ್

ಬೆಂಗಳೂರು : ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL 2023) ಆರಂಭಕ್ಕಿನ್ನು ಕೇವಲ 15 ದಿನಗಳಷ್ಟೇ ಬಾಕಿ. ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ 10 ಫ್ರಾಂಚೈಸಿಗಳ ಪೈಕಿ ಆರು ಫ್ರಾಂಚೈಸಿಗಳಿಗೆ ಬಿಗ್ ಶಾಕ್ (IPL 2023 injury list) ಎದುರಾಗಿದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿದ್ದು, ಗಾಯಾಳುಗಳ ಪಟ್ಟಿ ಆಂಜನೇಯನ ಬಾಲದಂತೆ ಬೆಳೆಯುತ್ತಲೇ ಇದೆ.

ಮುಂಬೈ ಇಂಡಿಯನ್ಸ್ ತಂಡದ ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಕ್ರಿಕೆಟ್’ನಿಂದ ಆರು ತಿಂಗಳು ಹೊರಗುಳಿಯಲಿದ್ದಾರೆ. ಇದು 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಹೊಡೆತ. ಮುಂಬೈ ತಂಡದ ಮತ್ತೊಬ್ಬ ವೇಗದ ಬೌಲರ್ ಆಸ್ಟ್ರೇಲಿಯಾದ ಝಾಯ್ ರಿಚರ್ಡ್ಸನ್ ಕೂಡ ಗಾಯದ ಕಾರಣ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಗಾಯಗೊಂಡಿರುವ ಆಟಗಾರರ ಪಟ್ಟಿ :

  • ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್
  • ಝಾಯ್ ರಿಚರ್ಡ್ಸನ್ (ಮುಂಬೈ ಇಂಡಿಯನ್ಸ್)
  • ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್)
  • ಸರ್ಫರಾಜ್ ಖಾನ್ (ಡೆಲ್ಲಿ ಕ್ಯಾಪಿಟಲ್ಸ್)
  • ಆನ್ರಿಚ್ ನೋಕ್ಯ (ಡೆಲ್ಲಿ ಕ್ಯಾಪಿಟಲ್ಸ್)
  • ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್)
  • ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್)
  • ಜಾನಿ ಬೇರ್’ಸ್ಟೋ (ಪಂಜಾಬ್ ಕಿಂಗ್ಸ್)
  • ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್)
  • ಶ್ರೇಯಸ್ ಅಯ್ಯರ್ (ಕೋಲ್ಕತಾ ನೈಟ್ ರೈಡರ್ಸ್)

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಬೇಕಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ರಸ್ತೆ ಅಪಘಾತದಲ್ಲಿ ಗಾಯಗೊಂಡು ಈಗ ತಾನೇ ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ ಕ್ರಿಕೆಟ್ ಮೈದಾನಕ್ಕೆ ಮರಳು ಇನ್ನೂ 8ರಿಂದ 9 ತಿಂಗಳು ಹಿಡಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಮತ್ತು ವೇಗಿ ಆನ್ರಿಚ್ ನೋಕ್ಯ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ಗಾಯಗೊಂಡಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಿಂತೆಗೀಡು ಮಾಡಿದೆ. ಚೆನ್ನೈ ಪರ ಆಡಬೇಕಿದ್ದ ನ್ಯೂಜಿಲೆಂಡ್ ಆಲ್ರೌಂಡರ್ ಕೈಲ್ ಜೇಮಿಸನ್ ಈಗಾಗ್ಲೇ ಗಾಯದ ಕಾರಣ ಐಪಿಎಲ್‌ನಿಂದ ಹೊರ ಬಿದ್ದಿದ್ದಾರೆ.

ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೂ ಗಾಯದ ಬಿಸಿ ತಟ್ಟಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋ ಕಳೆದ ಸೆಪ್ಟೆಂಬರ್‌ನಲ್ಲಿ ಗಾಲ್ಫ್ ಆಡುವ ವೇಳೆ ಜಾರಿ ಬಿದ್ದು, ಎಡಗಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಬೇರ್‌ಸ್ಟೋ ಈ ಬಾರಿಯ ಐಪಿಎಲ್‌ಗೆ ಲಭ್ಯರಿಲ್ಲ.

ಇದನ್ನೂ ಓದಿ : Bangladesh Vs England T20 series : ವಿಶ್ವ ಚಾಂಪಿಯನ್ನರಿಗೆ 3-0 ಅಂತರದಲ್ಲಿ ವೈಟ್‌ವಾಶ್ ಬಳಿದ ಬಾಂಗ್ಲಾ ಟೈಗರ್ಸ್

ಇದನ್ನೂ ಓದಿ : ಸೂರ್ಯಕುಮಾರ್ ಯಾದವ್ ಜಿಯೋ ಸಿನಿಮಾ ಬ್ರಾಂಡ್ ಅಂಬಾಸಿಡರ್

ಇದನ್ನೂ ಓದಿ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ : ಟೀಮ್ ಇಂಡಿಯಾ ವಿಜಯೋತ್ಸವದ Exclusive ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ!

ರಾಜಸ್ಥಾನ ರಾಯಲ್ಸ್ ಪರ ಆಡಬೇಕಿದ್ದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ಬೆನ್ನು ನೋವಿಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಐಪಿಎಲ್ ವೇಳೆಗೆ ಅಯ್ಯರ್ ಚೇತರಿಸಿಕೊಂಡ್ರೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅದೃಷ್ಟ.

IPL 2023 injury list: Big shock for the franchises before the start of IPL, the injury list of the players keeps growing like Anjaneya’s tail.

Comments are closed.