Reservation: ಮೀಸಲಾತಿ ಬೇಡಿಕೆ ಪರಿಹರಿಸಲು ಸರ್ಕಾರದ ಹೊಸ ತಂತ್ರ; ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ 2 ಪ್ರತ್ಯೇಕ ಕೆಟಗರಿ ರಚನೆ

ಬೆಳಗಾವಿ: Reservation: ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರವು ಎರಡು ಪ್ರಬಲ ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಬಹುಬೇಡಿಕೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯಗಳಿಗೆ ಸರ್ಕಾರ ಎರಡು ಪ್ರತ್ಯೇಕ ಕೆಟಗರಿ ರಚಿಸಿದೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಅನ್ನೋದು ಪಂಚಮಸಾಲಿಗರ ಬೇಡಿಕೆಯಾಗಿತ್ತು. ಕೊನೆಗೂ ಅವರ ಬೇಡಿಕೆಗೆ ಮಣಿದಿರುವ ಸರ್ಕಾರ ಮೀಸಲಾತಿ ಕೆಟಗರಿಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಮುಂದಾಗಿದೆ. 2ಸಿ ಮತ್ತು 2ಡಿ ಎಂಬ ಎರಡು ಪ್ರತ್ಯೇಕ ವರ್ಗ ರಚಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Random corona test: ರಾಜ್ಯದಲ್ಲಿ ಕೊರೊನಾ ಭೀತಿ: ಯಾದೃಚ್ಛಿಕ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ತಜ್ಞರ ಮನವಿ

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಜೆ.ಸಿ.ಮಾಧುಸ್ವಾಮಿ, 3ನೇ ಪ್ರವರ್ಗದಲ್ಲಿರುವವರನ್ನು 2 ಪ್ರವರ್ಗಕ್ಕೆ ತರಲು ಅನುಮೋದನೆ ನೀಡಿದ್ದೇವೆ. 3ಎನಲ್ಲಿದ್ದ ಒಕ್ಕಲಿಗರು ಮತ್ತು ಇತರರನ್ನು ಇನ್ಮುಂದೆ 2ಸಿ ಅಂತ ಕೆಟಗರಿ ಮಾಡಿ ಅದಕ್ಕೆ ಸೇರಿಸುತ್ತೇವೆ. ಇದರಿಂದ 2ಎ ಮತ್ತು 2ಬಿ ಪ್ರವರ್ಗದವರಿಗೆ ಯಾವುದೇ ಸಮಸ್ಯೆ ಆಗಲ್ಲ. ಅವರಿಗೆ ನಿಗದಿಪಡಿಸಿರುವ ಮೀಸಲಾತಿಗೆ ಇದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಲಿಂಗಾಯತರಿಗೆ 3ಬಿ, ಒಕ್ಕಲಿಗರಿಗೆ 3ಎ ಮೀಸಲಾತಿ ಇದೆ. 3ಎ ಮತ್ತು 3ಬಿಯಲ್ಲಿರುವ ಸಮುದಾಯಗಳನ್ನು 2ಸಿ ಮತ್ತು 2ಡಿಗೆ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ 3ಎ ಮತ್ತು 3ಬಿ ಕೆಟಗರಿ ಇರುವುದಿಲ್ಲ. 3ಎ ಮತ್ತು 3ಬಿ ಪ್ರವರ್ಗಕ್ಕೆ ಈವರೆಗೆ ನೀಡಲಾಗುತ್ತಿದ್ದ ಎಲ್ಲಾ ಸವಲತ್ತುಗಳು ಇನ್ಮುಂದೆ 2ಸಿ ಮತ್ತು 2ಡಿ ವರ್ಗಕ್ಕೆ ನೀಡಲಾಗುವುದು. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾಗಿ ಸಿಗುತ್ತದೆ ಆದರೆ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಲಾಗುವುದಿಲ್ಲ ಎಂದರು. ಹೊಸ ಪ್ರವರ್ಗಗಳಿಗೆ ಮೀಸಲು ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ.

ಇದನ್ನೂ ಓದಿ: Arjun Tendulkar duck out : ಕರ್ನಾಟಕ ವಿರುದ್ಧ ನಡೆಯದ ಅರ್ಜುನನ ಆಟ, ಮೊದಲ ಎಸೆತದಲ್ಲೇ ಸಚಿನ್ ಪುತ್ರ ಡಕೌಟ್ !

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಇದೀಗ ಸಮುದಾಯದವರ ಮನವೊಲಿಸಲು ಸರ್ಕಾರ ಹೊಸ ತಂತ್ರ ರೂಪಿಸಿದ್ದು, 2 ಹೊಸ ಪ್ರವರ್ಗವನ್ನೇ ಸೃಷ್ಟಿ ಮಾಡಿ ಒಂದೇ ಕಲ್ಲಿನಿಂದ 2 ಹಕ್ಕಿಗಳನ್ನು ಹೊಡೆದಿದೆ.

Reservation: Government’s New Strategy to solve Reservation Demand; State Government created 2 separate categories to Okkaliga and Lingayath Community

Comments are closed.