Russian Missiles Strike: ಉಕ್ರೇನ್ ಮೇಲೆ ಮತ್ತೆ ಕ್ರೌರ್ಯ ಮೆರೆದ ರಷ್ಯಾ: ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ

ಉಕ್ರೇನ್:Russian Missiles Strike: ಕಳೆದ ಕೆಲ ತಿಂಗಳುಗಳಿಂದ ಉಕ್ರೇನ್ ಮೇಲೆ ಹಗೆತನ ಸಾಧಿಸುತ್ತಿರುವ ರಷ್ಯಾದ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಸತತ ದಾಳಿಯಿಂದ ಅಕ್ಷರಶಃ ನಲುಗಿರುವ ಉಕ್ರೇನ್ ಮೇಲೆ ರಷ್ಯಾ ಮತ್ತೆ ಅಟ್ಟಹಾಸ ಮೆರೆದಿದೆ. ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ಮಾಡುವ ಮೂಲಕ ದ್ವೇಷ ಸಾಧಿಸಿದೆ

ಉಕ್ರೇನ್ ರಾಜಧಾನಿ ಕೀವ್, ಕಾರ್ಖೀವ್, ಲ್ವಿವ್, ಜಿಟೋಮಿರ್, ಒಡೇಸಾ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾದ ನೂರಾರು ಕ್ಷಿಪಣಿಗಳ ದಾಳಿ ನಡೆದಿದೆ. ಪರಿಣಾಮ ದಾಳಿಗೀಡಾದ ನಗರಗಳು ಮಸಣದಂತಾಗಿವೆ. ಎಲ್ಲೆಡೆ ವಿದ್ಯುತ್ ಕೊರತೆಯಿಂದ ಜನರು ಪರದಾಡುವಂತಾಗಿದೆ. ನಗರದೆಲ್ಲೆಡೆ ಕತ್ತಲು ಆವರಿಸಿದ್ದು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಜನ ಕಂಗೆಟ್ಟಿದ್ದಾರೆ. ರಾಜಧಾನಿ ಕೋವ್ ನಲ್ಲಿ ಶೇ.40ರಷ್ಟು ಜನರಿಗೆ ವಿದ್ಯುತ್ ಇಲ್ಲದೇ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತಾಗಿದ್ದಾರೆ. ಲ್ವಿವ್ ನಗರದಲ್ಲಿ ಶೇ.90ರಷ್ಟು ಜನರಿಗೆ ವಿದ್ಯುತ್ ಕೊರತೆ ಎದುರಾಗಿದೆ. ಒಡೇಸಾದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ಇದನ್ನೂ ಓದಿ: Pakistan Murder: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ; ತಲೆ ಕಡಿದು, ಚರ್ಮ ಸುಲಿದು ಪೈಶಾಚಿಕ ಕೃತ್ಯ

ವಾಯು ಮತ್ತು ಜಲ ಮಾರ್ಗಗಳ ಮೂಲಕ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ನೂರಾರು ಕ್ಷಿಪಣಿಗಳು ಏಕಕಾಲಕ್ಕೆ ದಾಳಿ ಮಾಡಿದ್ದರ ಪರಿಣಾಮ ಅಪಾರ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿದೆ. ಸಾವಿರಾರು ಕಟ್ಟಡಗಳು ನೆಲಕ್ಕುರುಳಿವೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಜನರು ಎಚ್ಚರಿಕೆಯಿಂದ ಇರುವಂತೆ ಉಕ್ರೇನ್ ಸೈನ್ಯ ಸೂಚಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯೂ ಉಂಟಾಗುವ ಸಂಭವವಿದ್ದು, ಜನರು ತಮಗೆ ಬೇಕಾದಷ್ಟು ನೀರು ತುಂಬಿಟ್ಟುಕೊಳ್ಳುವಂತೆ ಸೂಚಿಸಿದೆ. ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸೈನ್ಯ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಜನರು ಮನೆಯಿಂದ ಹೊರಬಾರದಂತೆ ಸಲಹೆ ನೀಡಿದೆ.

ಇದನ್ನೂ ಓದಿ: Rape case-accused suicide: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಬಂಧಿತ ಆರೋಪಿ ಮುಂಬೈ ಜೈಲಿನಲ್ಲಿ ಆತ್ಮಹತ್ಯೆ

ಇದೇ ವರ್ಷ ಫೆಬ್ರವರಿ 24ರಂದು ರಚ್ಯಾ ಉಕ್ರೇನ್ ಮೇಲೆ ಮೊದಲ ಯುದ್ಧ ಸಾರಿತ್ತು. 10 ತಿಂಗಳಿನಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು ಧ್ವಂಸಗೊಳಿಸಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ.

Russian Missiles Strike: Russia again brutalized Ukraine: 120 missiles attack simultaneously

Comments are closed.