ಗೋಕಾಕ್ : ( Road Accident Hukkeri ) ಮೂರು ಕಾರು ಮತ್ತು ಒಂದು ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ತಾಯಿ ಮತ್ತು ಮಗು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಬಳಿ ರವಿವಾರ ರಾತ್ರಿಯ ವೇಳೆಯಲ್ಲಿ ಮೂರು ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ (Road Accident ) ನಡೆದಿದ್ದು, ಇಬ್ಬರು ಬಲಿಯಾಗಿದ್ದಾರೆ . ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಎರಡು ಕಾರುಗಳು ಘಟಪ್ರಭಾದಿಂದ ಹುಕ್ಕೇರಿಯ ಕಡೆ ಬರುತ್ತಿದ್ದು, ಇನ್ನೊಂದು ಕಾರು ಗೋಕಾಕ್ ನಿಂದ ಹುಕ್ಕೇರಿಯ ಕಡೆ ಬರುತ್ತಿತ್ತು. ಮೃತಪಟ್ಟಿರುವ ತಾಯಿ ಮಗ ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ಸಂದಂರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. ನಡೆದ ಅಪಘಾತದಲ್ಲಿ ಕಾರು ಚಾಲಕರು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :Kuchalakki distribution : ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರದ ಅನುಮತಿ
ಈ ಘಟನೆಯಲ್ಲಿ ಮೃತಪಟ್ಟ ತಾಯಿ ಮತ್ತು ಮಗ ಬೈಲಹೊಂಗಲ ತಾಲೂಕಿನ ಭಾರತಿ (28 ವರ್ಷ), ಹಾಗೂ ವೇದಾಂತ ಪೂಜಾರಿ (6 ವರ್ಷ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರು ಚಾಲಕರು ಸೇರಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : Mangalore: ಮಂಗಳೂರು : ಎರಡು ದಿನ ಕುಡಿಯುವ ನೀರು ಸ್ಥಗಿತ
ಇದನ್ನೂ ಓದಿ : BBMP Eviction Encroachment : ಬೆಂಗಳೂರಲ್ಲಿ ಇಂದು ಮತ್ತೆ ಘರ್ಜಿಸಲಿದೆ ಜೆಸಿಬಿ: ಒತ್ತುವರಿ ತೆರವಿಗೆ ನಿಂತ ಬಿಬಿಎಂಪಿ
ಘಟನೆ ನಡೆದ ಸ್ಥಳಕ್ಕೆ ಹುಕ್ಕೇರಿಯ ಸಿಸಿಐ ರಫೀಕ್ ತಹಶಿಲ್ದಾರ ಮತ್ತು ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಬೇಕಾಗಿದೆ.
(Road Accident) In a series of accidents between three cars and a bike, a mother and a child died and many others were injured in Hukkeri Taluk.