BBMP Eviction Encroachment : ಬೆಂಗಳೂರಲ್ಲಿ ಇಂದು ಮತ್ತೆ ಘರ್ಜಿಸಲಿದೆ ಜೆಸಿಬಿ: ಒತ್ತುವರಿ ತೆರವಿಗೆ ನಿಂತ ಬಿಬಿಎಂಪಿ

ಬೆಂಗಳೂರು : (BBMP Eviction Encroachment) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದಿನಿಂದ ಮತ್ತೆ ಜೆಸಿಬಿಗಳು ಘರ್ಜಿಸಲಿವೆ. ಕೇವಲ ಬಡವರ ಮನೆಗಳನ್ನು ಮಾತ್ರ ಒಡೆದ ಬಿಬಿಎಂಪಿ ತೆರವು ಕಾರ್ಯಾಚರಣೆ ಕೈಬಿಟ್ಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತೆ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಸಿಲಿಕಾನ್ ಸಿಟಿಯ ಕೆಆರ್ ಪುರಂ ಹಾಗೂ ಮಹಾದೇವಪುರ ವಲಯದಲ್ಲಿ ಬಿಬಿಎಂಪಿಯಿಂದ ಕಾರ್ಯಾಚರಣೆ ಆರಂಭಿಸಲು ಸೋಮವಾರ ಮುಹೂರ್ತ ನಿಗದಿಯಾಗಿದೆ.

ಮಳೆ ಹೆಚ್ಚಿ ನಗರದಲ್ಲಿ ಪ್ರವಾಹ ಸ್ಥಿತಿ ಉಂಟಾದಾಗ ಮಾತ್ರ ಬಿಬಿಎಂಪಿ ಎಚ್ಚೆತ್ತುಕೊಂಡು ಒತ್ತುವರಿ ತೆರವಿನ ನಾಟಕವಾಡುತ್ತದೆ ಎಂಬ ಆರೋಪ ಬಿಬಿಎಂಪಿ ವಿರುದ್ಧ ಕೇಳಿಬಂದಿತ್ತು. ಹೀಗಾಗಿ ಈ ಎರಡನೇ ಹಂತದಲ್ಲಿ ಬಿಬಿಎಂಪಿ ತೆರವು ಕಾರ್ಯಾಚರಣೆ ಆರಂಭಿಸಿದೆ.

KR ಪುರಂ ಭಾಗದಲ್ಲಿ ಒತ್ತುವರಿ ಗುರುತು :
• ಶಾಂತಮ್ಮನಹಳ್ಳಿ : 31/1A & 34 & 33
• ದೇವಸಂಧ್ರ : 06 & 13/4 (SR ಲೇಔಟ್)
• ವಿಜನಾಪುರ : 90 & 76 & 88
• ಮೇಡಳ್ಳಿ : 69 & 98 & 72
• N ನಾಗೇನಹಳ್ಳಿ : 19
• ಕಲ್ಕೆರೆ : 263 & 264 & 345
• ದೇವಸಂಧ್ರ : 47 & 43 & 41 (ಭೀಮಯ್ಯಾ ಲೇಔಟ್)
• ವಿಭೂತಿಪುರ : 178 & 191
• ಕೋಡೇನಹಳ್ಳಿ : 68 & 69 & 95 & 96 & 119
• ಹೊರಮಾವು : 30 & 31 & 57 & 58 & 91 & 92 & 96 & 97 ಗುರುತಿಸಲಾಗಿದೆ.

ಮಹಾದೇವಪುರ ವಲಯ :
• ವೈಟ್ ಫೀಲ್ಡ್ : 16 & 17 & 18 & 38
• ಕಸವನಹಳ್ಳಿ : 73 & 74 & 75
• ಬೆಳ್ಳಂದೂರು : 13 & 14 & 18/1
• ಹೂಡಿ : 71 & 72 (ದಿವ್ಯಾ ಶಾಲೆ ಹತ್ತಿರ)
• ದೊಡ್ಡನಕ್ಕುಂದಿ : 24/1 & 24/4 & 24/5 & 24/6 (ಫೆರ್ನ್ ಸಿಟಿ)
• ದೊಡ್ಡನಕ್ಕುಂದಿ : 172 & 174 & 178 & 181 & 182 & 184 & 185 & 186 & 187 (ಗುರುರಾಜ ಲೇಔಟ್)
• ಹೂಡಿ : 166 & 181 (ಬಸವಣ್ಣನಗರ)
• ಮಹಾದೇವಪುರ : 35 (ಪೂರ್ವ ಪಾರ್ಕ್ ರಿಡ್ಜ್)
• ಚಿನ್ನಪ್ಪನಹಳ್ಳಿ : 42 & 43
• ಮುನ್ನೇಕೊಳಲು : 34 & 35 (ಮುನ್ನೇಕೊಳಲು ಕೆರೆ ಹತ್ತಿರ)
• ಮುನ್ನೇಕೊಳಲು : 87 (ಮಾರತಹಳ್ಳಿ ORR)ಸರ್ವೇ ನಂಬರ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ಇದಕ್ಕೆ ಜನರು ಹೇಗೆ ಸ್ಪಂದಿಸುತ್ತಾರೆ ಏನೆಲ್ಲ ಹೈಡ್ರಾಮಾ ನಡೆಯಲಿದೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : LPG Gas Cylinder : LPG ಗ್ಯಾಸ್ ಸಿಲಿಂಡರ್ ಹೊಸ ನಿಯಮ :12ಕ್ಕಿಂತ ಅಧಿಕ ಸಿಲಿಂಡರ್ ಬಳಸಿದ್ರೆ ಸಬ್ಸಿಡಿ ಕಟ್

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೆನಪಿಸುತ್ತಿದೆ ಪೆರ್ನೆ ಗ್ರಾಮ : ಅಷ್ಟಕ್ಕೂ ಆ ಗ್ರಾಮದಲ್ಲಿ ಆಗಿದಾದ್ರೂ ಏನು ?

JCB will roar again today in Bangalore BBMP stands for eviction of encroachment

Comments are closed.