Mulayam Singh Yadav dies : ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ವಿಧಿವಶ

ದೆಹಲಿ: Mulayam Singh Yadav dies : ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ಇಂದು ಬೆಳಗ್ಗೆ 8:30ರ ಸುಮಾರಿಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆ.22ರಂದು ಅನಾರೋಗ್ಯದ ಕಾರಣದಿಂದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಮುಲಾಯಂ ಸಿಂಗ್​ ಯಾದವ್​​ ಅಕ್ಟೋಬರ್​ 1ರ ರಾತ್ರಿ ಐಸಿಯುವಿಗೆ ಸ್ಥಳಾಂತರಿಸಲಾಗಿತ್ತು. ಮೇದಾಂತ ಆಸ್ಪತ್ರೆಯ ನುರಿತ ವೈದ್ಯರು ಮುಲಾಯಂ ಸಿಂಗ್​ ಯಾದವ್​ರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.

ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮುಲಾಯಂ ಸಿಂಗ್​ ಯಾದವ್​ರ ಪುತ್ರ ಅಖಿಲೇಶ್​ ಯಾದವರ್​ರ ಹೇಳಿಕೆಯನ್ನು ಶೇರ್​ ಮಾಡಲಾಗಿದೆ. ‘ನನ್ನ ಗೌರವಾನ್ವಿತ ತಂದೆ ಹಾಗೂ ಪ್ರತಿಯೊಬ್ಬರ ಪಾಲಿನ ನಾಯಕ ಇನ್ನಿಲ್ಲ. – ಅಖಿಲೇಶ್​ ಯಾದವ್​ ’ ಹೇಳಿಕೆಯನ್ನು ಶೇರ್​ ಮಾಡಲಾಗಿದೆ. ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್​ ಯಾದವ್​ರ ಆರೋಗ್ಯ ಚಿಂತಾಜನಕವಾಗಿದೆ ಎಂದು ಭಾನುವಾರ ಮಾಹಿತಿಯನ್ನು ನೀಡಿತ್ತು. ಅಲ್ಲದೇ ಅವರು ಲೈವ್​ ಸೇವಿಂಗ್​ ಡ್ರಗ್ಸ್​ ಮೇಲಿದ್ದಾರೆ ಎಂದೂ ಹೇಳಿತ್ತು.

ನೇತಾಜಿ ಎಂದು ಕರೆಯಲ್ಪಡುತ್ತಿದ್ದ ಮುಲಾಯಂ ಸಿಂಗ್​​ ಯಾದವ್​ ಸಮಾಜವಾದಿ ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಪ್ರಸ್ತುತ ಮುಲಾಯಂ ಸಿಂಗ್​ ಯಾದವ್​ ಲೋಕಸಭೆಯಲ್ಲಿ ಮೈನ್​ಪುರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಮುಲಾಯಂ ಸಿಂಗ್​ ಯಾದವ್​ ಪತ್ನಿ ಸಾಧನಾ ಗುಪ್ತಾ ನಿಧನರಾಗಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾಧನಾ ಗುಪ್ತಾ ಮುಲಾಯಂ ಸಿಂಗ್​ ಯಾದವ್​ರ ಎರಡನೇ ಪತ್ನಿಯಾಗಿದ್ದರು. ಇವರ ಮೊದಲ ಪತ್ನಿ ಮಾಲತಿ ದೇವಿ 2003ರಲ್ಲಿ ನಿಧನರಾಗಿದ್ದರು. ಅಖಿಲೇಶ್​ ಯಾದವ್​ ಮುಲಾಯಂ ಸಿಂಗ್​ ಯಾದವ್​ರ ಮೊದಲ ಪತ್ನಿ ಮಾಲತಿ ದೇವಿಯ ಪುತ್ರನಾಗಿದ್ದಾರೆ.

ನವೆಂಬರ್ 22, 1939 ರಂದು ಜನಿಸಿದ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನು ಓದಿ : Road Accident : ಸಂಕೇಶ್ವರದಲ್ಲಿ ಸರಣಿ ಅಪಘಾತ; ತಾಯಿ, ಮಗು ಸಾವು, ಹಲವರಿಗೆ ಗಾಯ

ಇದನ್ನೂ ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

BREAKING: SP supremo Mulayam Singh Yadav dies at 82

Comments are closed.