Saalumarada Thimmakka : ಸಾಲುಮರದ ತಿಮ್ಮಕ್ಕನಿಗೆ ಸಂಪುಟದ ದರ್ಜೆ ಸ್ಥಾನಮಾನ : ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು : ಸಾಲು ಸಾಲು‌ ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡ ಹಸಿರು ಪ್ರೇಮಿ ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಗೌರವಿಸಿ ರಾಜ್ಯ ಸರಕಾರ ಸಾಲು‌ಮರದ ತಿಮ್ಮಕ್ಕನನ್ನು (Saalumarada Thimmakka) ಪರಿಸರ ರಾಯಭಾರಿಯಾಗಿ‌ ನೇಮಿಸಿ ಆದೇಶ ಹೊರಡಿಸಿದೆ. ಮಾತ್ರವಲ್ಲ ಈ ಹುದ್ದೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿದೆ. ಸಾಲುಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡೋದಾಗಿ ರಾಜ್ಯ ಸರ್ಕಾರ ಇತ್ತೀಚಿಗೆ ನಡೆದ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಘೋಷಿಸಿತ್ತು. ಈಗ ಅವರನ್ನು ರಾಜ್ಯದ ಪರಿಸರ ರಾಯಭಾರಿಯಾಗಿ‌ನೇಮಿಸುವ ಜೊತೆಗೆ ಸಂಪುಟ ದರ್ಜೆಯ ಸ್ಥಾನವನ್ನು ನೀಡಿದೆ.

ರಾಜ್ಯದಾದ್ಯಂತ ತೆರಳಿ ಪರಿಸರದ ಕುರಿತು ಕಾಳಜಿ ಮೂಡಿಸುವುದು, ಪರಿಸರ ರಕ್ಷಣೆಯ ಅರಿವು ಮೂಡಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಈ ಪರಿಸರ ರಾಯಭಾರಿ ಹುದ್ದೆ ಒಳಗೊಂಡಿದೆ. ಇನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಸಾಲು ಮರದ ತಿಮ್ಮಕ್ಕನವರು ಹೊರ ರಾಜ್ಯಗಳಿಗೆ ತೆರಳಿದರೂ ಓಡಾಟ ಸೇರಿದಂತೆ ಎಲ್ಲ ಖರ್ಚನ್ನು ಸರ್ಕಾರವೇ ಭರಿಸಲಿದೆ. ಮುಂದಿನ‌ ಪೀಳಿಗೆಗೆ ಹಸಿರನ್ನು ಉಳಿಸಿಕೊಳ್ಳುವುದಕ್ಕಾಗಿ ಸಾಲು ಮರದ ತಿಮ್ಮಕ್ಕ ರಸ್ತೆ ಬದಿಗಳಲ್ಲಿ ಹಾಗೂ ಹಲವೆಡೆ ಗುಂಡಿ ತೋಡಿ ಗಿಟ ನೆಟ್ಟಿದ್ದು ಅವುಗಳಿಗೆ ಕಿಲೋಮೀಟರ್ ಗಟ್ಟಲೇ ದೂರದಿಂದ ನೀರು ತಂದು ಹಾಕುತ್ತಿದ್ದರು ಎನ್ನಲಾಗಿದೆ.

ಇದುವರೆಗೂ ತಿಮ್ಮಕ್ಕನವರ ಪರಿಸರ‌ ಪ್ರೇಮಕ್ಕೆ ನೊರೆಂಟು ಗೌರವಗಳು ಸಂದಿವೆ. ರಾಷ್ಟ್ರೀಯ , ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಸಾಲುಮರದ ತಿಮ್ಮಕ್ಕ ನನ್ನು ಗೌರವಿಸಿದೆ. ರಾಜ್ಯ ಸರ್ಕಾರವೂ ತನ್ನ ಹಲವು ಉನ್ನತ ಗೌರವಗಳನ್ನು ಸಾಲುಮರದ ತಿಮ್ಮಕ್ಕನವರಿಗೆ ನೀಡಿದೆ. ಈಗ ಪರಿಸರ ರಾಯಭಾರಿಯಾಗಿ ನೇಮಿಸಿರುವ ಸರ್ಕಾರ, ಡಾ.ಸಾಲುಮರದ ತಿಮ್ಮಕ್ಕ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಥವಾ ಮುಂದಿನ ಆದೇಶದವರೆಗೂ ಪರಿಸರ ರಾಯಭಾರಿ ಯನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊಸೂರ ಗ್ರಾಮದವರಾದ ಸಾಲುಮರದ ಯಾವುದೇ ಶಿಕ್ಷಣ ಪಡೆದಿಲ್ಲ. ಶಾಲೆಯ ಮೆಟ್ಟಿಲನ್ನೆ ಹತ್ತದ ತಿಮ್ಮಕ್ಕ ಅನಕ್ಷರಸ್ಥ ರಾಗಿದ್ದರೂ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಮರಗಳನ್ನು ನೆಟ್ಟರು. ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನೇ ಮಕ್ಕಳಂತೆ ಪೋಷಿಸಿ ಬೆಳೆಸಿದ್ದು, ದೇಶದಾದ್ಯಂತ ಸಾಲುಮರದ ತಿಮ್ಮಕ್ಕ ಎಂಬ ಹೆಸರಿನಿಂದಲೇ ಪ್ರಸಿದ್ಧಿ‌ಪಡೆದಿದ್ದಾರೆ.

ಇದನ್ನೂ ಓದಿ : Vikram Admitted To Hospital : ತಮಿಳು ನಟ ವಿಕ್ರಮ್​ ಆರೋಗ್ಯದಲ್ಲಿ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Breakfast Politics : ಫಲ ಕೊಟ್ಟ ರಾಹುಲ್‌ ಗಾಂಧಿ ಸಂಧಾನ: ಸಿದ್ದರಾಮಯ್ಯ ಮನೆಗೆ ಬಂದ್ರು ಡಿಕೆ ಶಿವಕುಮಾರ್

Saalumarada Thimmakka Cabinet Minister Level Post and Environmental Ambassador In Karnataka

Comments are closed.