ಭಾನುವಾರ, ಏಪ್ರಿಲ್ 27, 2025
HomeCinemaದಚ್ಚು ಟೆಂಪಲ್ ರನ್….! ತಿರುಪತಿ ತಿಮ್ಮಪ್ಪ ಸನ್ನಿಧಾನಕ್ಕೆ ಸಂಸದೆ ಸುಮಲತಾ ಜೊತೆ ದರ್ಶನ್ ಭೇಟಿ…!!

ದಚ್ಚು ಟೆಂಪಲ್ ರನ್….! ತಿರುಪತಿ ತಿಮ್ಮಪ್ಪ ಸನ್ನಿಧಾನಕ್ಕೆ ಸಂಸದೆ ಸುಮಲತಾ ಜೊತೆ ದರ್ಶನ್ ಭೇಟಿ…!!

- Advertisement -

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ತಮ್ಮನ್ನು ಬಿಟ್ಟು ಬಿಡದೇ ಕಾಡುತ್ತಿರುವ ವಿವಾದಗಳಿಂದ ಕಂಗೆಟ್ಟಂತಿದ್ದು, ನೆಮ್ಮದಿಯಾಗಿ ಟೆಂಪಲ್ ರನ್ ಆರಂಭಿಸಿದ್ದಾರೆ.ಮೊನ್ನೆ ಮೊನ್ನೆ ಶನಿಶ್ವರ ದೇವರ ದರ್ಶನ ಪಡೆದಿದ್ದ ಚಾಲೆಂಜಿಂಗ್ ಸ್ಟಾರ್ ಶ್ರಾವಣ ಸೋಮವಾರದಂದು  ತಿರುಪತಿ ತಿಮ್ಮಪ್ಪನ  ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ಸಂಸದೆ ಸುಮಲತಾ, ಪುತ್ರ ಹಾಗೂ ನಟ ಅಭಿಷೇಕ, ದರ್ಶನ ಜೊತೆ ತಿರುಪತಿಗೆ ತೆರಳಿದ್ದು ಪೂಜೆ ಸಲ್ಲಿಸಿದ್ದಾರೆ. ತಿರುಪತಿಗೆ ಪೂಜೆ ಸಲ್ಲಿಸಲು ಹೋಗುತ್ತಿರುವುದಾಗಿ ನಟಿ ಹಾಗೂ ಸಂಸದೆ ಸುಮಲತಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

ತಿರುಪತಿಯಲ್ಲಿ ಸುಮಲತಾ, ದರ್ಶನ್, ಅಭೀಷೇಕ ಪೂಜೆ ಸಲ್ಲಿಸಿದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸ್ಟಾರ್ ನಟ-ನಟಿಯರನ್ನು ಒಟ್ಟಿಗೆ ನೋಡಿ ಖುಷಿ ಪಡುತ್ತಿದ್ದಾರೆ.

ಮಂಡ್ಯ ಚುನಾವಣೆ ವೇಳೆ ಸುಮಲತಾ ಬೆನ್ನಿಗೆ ನಿಂತು ದುಡಿದಿದ್ದ ನಟ ದರ್ಶನ್ ನನ್ನ ಹಿರಿಯ ಮಗನಿದ್ದಂತೆ ಎಂದು ಸುಮಲತಾ ಹಲವಾರು ಭಾರಿ ಹೇಳಿಕೊಂಡಿದ್ದಾರೆ. ಆದರೆ 25 ಕೋಟಿ ವಿವಾದ ಹಾಗೂ ಮೈಸೂರಿನ ಹೊಟೇಲ್ ವೇಟರ್ ಮೇಲಿನ ಹಲ್ಲೆ ಪ್ರಕರಣ ವೇಳೆ ಮಾತ್ರ ಸುಮಲತಾ ದರ್ಶನ್ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಿರಲಿಲ್ಲ.

ರಾಬರ್ಟ್ ಸಿನಿಮಾ ರಿಲೀಸ್ ಗೂ ನಿರ್ಮಾಪಕ ಉಮಾಪತಿ,ನಟ ದರ್ಶನ್ ಹಾಗೂ ಸಂಗಡಿಗರು ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ :

ಬಿಗ್‌ಬಾಸ್‌ ಟ್ರೋಫಿ ಗೆದ್ದ ಪಾವಗಡದ ಮಂಜು : ಎರಡನೇ ಸ್ಥಾನಕ್ಕೆ ಜಾರಿದ ಅರವಿಂದ್‌

Nidhi vs Arvind : ನಿಧಿ ಸುಬ್ಬಯ್ಯಗೆ ಕ್ಷಮೆ ಕೇಳಿ ಪತ್ರ ಬರೆದ ಅರವಿಂದ್‌ : I LOVE U ನಿನ್ನ ಹಣೆಯ ಮೇಲೆ ಬರೆದುಕೋ ಅಂದಿದ್ಯಾಕೆ ನಿಧಿ

RELATED ARTICLES

Most Popular